ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತು ವರ್ಷಗಳಾರೂ ನಮ್ಮಲ್ಲಿ ಜಾತೀಯತೆಯ ಪಿಡುಗು ಹಾಗೇ ಉಳಿದುಕೊಂಡು ಬಿಟ್ಟಿದೆ. ದಲಿತರ ಮೇಲಿನ ದೌರ್ಜನ್ಯ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆಯುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಪರಿಶಿಷ್ಟ ಜಾತಿ ಹಾಗೂ ಪಂಗಡ ಕೆಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ದಲಿತ ವಿರೋಧಿಗಳ ದನಿ ಎತ್ತಿ ಹೋರಾಟ ನಡೆಸಿದ ಗೋವಿಂದ ಸಿಂಗ್ ಅವರನ್ನು ಇಲ್ಲಿ ಸ್ಮರಿಸಿದರು. ಸ್ವತಂತ್ರ್ಯ ಸಿಕ್ಕಿ ಎಪ್ಪತ್ತು ವರ್ಷಗಳಾದರೂ ಭಾರತದಲ್ಲಿ ಜಾತೀಯತೆಯ ಮೌಢ್ಯತೆ ಬೆಳೆತ್ತಲೇ ಹೋಗುತ್ತಿದೆ. ದಲಿತರ ಉದ್ದಾರಕ್ಕಾಗಿ ಸರ್ಕಾರಗಳು ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಕೂಡ ಇಂದಿಗೂ ದಲಿತರನ್ನು ಗುರಿಯಾಗಿಸಿಕೊಂಡೆ ದೌರ್ಜನ್ಯ ಎಸಗುತ್ತಿರುವುದು ಶೋಚನೀಯ ಎಂದಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಯಮಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಪರಿಶಿಷ್ಟ ಜಾತಿ-ಪಂಗಡ’ ಸೇವಾ ಕೇಂದ್ರಕ್ಕೆ ಚಾಲನೆ ನೀಡಿದರು. ಸುಮಾರು 490 ಕೋಟಿ ಆರಂಭಿಕ ಠೇವಣಿಯೊಂದಿಗೆ ಆರಂಭವಾದ ಈ ಯೋಜನೆಯಲ್ಲಿ ಶೋಷಿತ ಸಮುದಾಯಗಳ ಯುವಕ ಯುವತಿಯರನ್ನು ಉದ್ಯಮ ಕ್ಷೇತ್ರಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಈ ಮೂಲಕ ಸ್ವಂತ ಕೆಲಸ ಮಾಡುವ ಯುವಕರಿಗೆ ಕೇಂದ್ರವು ಹಣಕಾಸಿನ ಸಹಾಯ, ಮಾರುಕಟ್ಟೆ ಮೊದಲಾದ ಸಾಲ ಸೌಲಭ್ಯಗಳನ್ನು ನೀಡಲಿದೆ.
ಭಾರತೀಯ ಸೇನೆಗೆ ಸಲಾಂ..
ಇನ್ನು ಇದಕ್ಕೂ ಮುಂಚಿತವಾಗಿ ಹಿಮಾಚಲ ಪ್ರದೇಶದ ಶಿಮ್ಲಾದ ಮಂಡಿಯಲ್ಲಿ ಮೂರು ಜಲ ವಿದ್ಯುತ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತೀಯ ಸೈನಿಕರ ಸಾಹಸದ ಬಗ್ಗೆ ಶ್ಲಾಘಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ದಾಳಿಯಲ್ಲಿ ನಮ್ಮವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿದ ರೀತಿ ನಿಜಕ್ಕೂ ಪ್ರಶಂಸನೀಯ. ಸರ್ಜಿಕಲ್ ದಾಳಿಯನ್ನು ಇಸ್ರೆಲ್ ಸೈನಿಕರಿಗೆ ಹೋಲಿಸಿ ಮಾತನಾಡಿದ ಮೋದಿ, ನಮ್ಮವರು ಯಾರಿಗೂ ಕಮ್ಮಿ ಇಲ್ಲ ಎಂದು ಜಗಕ್ಕೆ ತೋರ್ಪಡಿಸಿದ್ದಾರೆ ಎಂದರು.
Like us on Facebook The New India Times
POPULAR STORIES :
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!