ನಿಮಗೆ ಗೊತ್ತೆ..? ಸಪೋಟ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ..!

Date:

ನಿಮಗೆ ಗೊತ್ತೆ..? ಸಪೋಟ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ..!

ಸಪೋಟಾ ರುಚಿಕರವಾದ ಕ್ಯಾಲೋರಿ ಭರಿತ ಹಣ್ಣಾಗಿದ್ದು, ಮಾವಿನ ಹಣ್ಣಿನಂತಹ ಹಣ್ಣುಗಳ ವರ್ಗಕ್ಕೆ ಸೇರಿದೆ. ಇದನ್ನು ಭಾರತದಲ್ಲಿ ಚಿಕ್ಕು ಹಣ್ಣು ಎಂದು ಕೂಡ ಕರೆಯಲಾಗುತ್ತದೆ. ಸಪೋಟಾ ರುಚಿಕರವಾದ ಉಷ್ಣವಲಯದ ಹಣ್ಣಾಗಿದ್ದು, ಇದು ಸಪೋಟೇಸಿ ಕುಟುಂಬಕ್ಕೆ ಸೇರಿದೆ. ಭಾರತದಲ್ಲಿ ಕರ್ನಾಟಕವು ಹೆಚ್ಚು ಸಪೋಟವನ್ನು ಹೆಚ್ಚು ಉತ್ಪಾದಿಸಲಾಗುತ್ತದೆ.
ಕರ್ನಾಟಕದ ನಂತರ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕೂಡ ಹೆಚ್ಚು ಸಪೋಟವನ್ನು ಬೆಳೆಯಲಾಗುತ್ತದೆ. ನಿತ್ಯವೂ ಸಪೋಟ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ಪೌಷ್ಟಿಕತಜ್ಞರು.
ವಿಟಮಿನ್ ಗಳ ಆಗರ
ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ, ನಿಯಾಸಿನ್, ಫಾಲಟೆ ಮತ್ತು ಖನಿಜಾಂಶ ಗಳಾಗಿರುವಂತಹ ಕಬ್ಬಿನಾಂಶ, ಪೊಟಾಶಿಯಂ ಮತ್ತು ತಾಮ್ರವಿದೆ. ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಕೂಡ ಇದರಲ್ಲಿ ಇದೆ.ಸಪೋತದ ಆರೋಗ್ಯ ಲಾಭಗಳು
ಹೊಟ್ಟೆಯ ಆರೋಗ್ಯ ಸುಧಾರಣೆ
ಸಪೋಟ ಹಣ್ಣಿನಲ್ಲಿ ಸಸ್ಯಜನ್ಯವಾಗಿರುವಂತಹ ಪಾಲಿಪೆನಾಲ್ ಇದ್ದು, ಹೊಟ್ಟೆಯಲ್ಲಿ ಇದು ಆಮ್ಲದ ಸ್ರವಿಸುವಿಕೆಯನ್ನು ತಟಸ್ಥಗೊಳಿಸುವುದು. ಪರಾವಲಂಬಿ ವಿರೋಧಿ, ವೈರಲ್ ವಿರೋಧಿ, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವಂತಹ ಸಪೋತ ಹಣ್ಣು ಕಿರಿಕಿರಿ ಉಂಟು ಮಾಡುವ ಹೊಟ್ಟೆಗೆ ಶಮನ ನೀಡುವುದು. ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳನ್ನು ಇದು ನಿವಾರಿಸುವುದು. ನಾರಿನಾಂಶವು ಅಧಿಕವಾಗಿ ಇರುವ ಕಾರಣದಿಂದಾಗಿ ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಮಲಬದ್ಧತೆ ಇರುವವರಿಗೆ ವಿರೇಚಕವಾಗಿ ವರ್ತಿಸುವುದು. ಇದು ಹೊಟ್ಟೆಯ ಸೋಂಕನ್ನು ತಗ್ಗಿಸುವುದು.
ಮೂಳೆಗಳು ಬಲಗೊಳ್ಳುವುದು
ಚಿಕ್ಕುವಿನಲ್ಲಿ ಇರುವಂತಹ ಕೆಲವೊಂದು ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ಪೋಸ್ಪರಸ್, ತಾಮ್ರ ಮತ್ತು ಕಬ್ಬಿನಾಂಶವು ಮೂಳೆಯನ್ನು ಬಲಗೊಳಿಸುವುದು. ನಿಯಮಿತವಾಗಿ ಚಿಕ್ಕು ತಿಂದರೆ ಅದರಿಂದ ಮೂಳೆಗಳ ಗುಣಮಟ್ಟವು ಸುಧಾರಣೆ ಆಗುವುದು.
ತಾಮ್ರದ ಕೊರತೆ ಇದ್ದರೆ ಆಗ ಅಸ್ಥಿರಂಧ್ರತೆ ಸಮಸ್ಯೆ ಕಾಡುವುದು. ಸಪೋತ ಹಣ್ಣು ಮೂಳೆಗಳು, ಸ್ನಾಯುಗಳ ಮತ್ತು ಅಂಗಾಂಶಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಪ್ರತಿರೋಧಕ ಶಕ್ತಿ ಹೆಚ್ಚಳ
ವಿಟಮಿನ್ ಸಿ, ಎ ಮತ್ತು ಆಂಟಿಆಕ್ಸಿಡೆಂಟ್ ಒಳಗೊಂಡಿರುವ ಸಪೋತ ಹಣ್ಣು ಪ್ರತಿರೋಧಕ ಶಕ್ತಿಯನ್ನು ಬಲಿಷ್ಠವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು, ಚರ್ಮದ ಆರೋಗ್ಯ ವೃದ್ಧಿಸುವುದು ಮತ್ತು ದೀರ್ಘಕಾಲಿಕ ಕಾಯಿಲೆಗಳ ಅಪಾಯ ತಗ್ಗಿಸುವುದು. ಇದು ವೈರಸ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳ ದಾಳಿಯಿಂದ ರಕ್ಷಿಸುವುದು.
ಶಕ್ತಿ ವೃದ್ಧಿಸುವುದು
ಫ್ರಾಕ್ಟೋಸ್ ಮತ್ತು ಸುಕ್ರೋಸ್ ನಿಂದ ಸಮೃದ್ಧವಾಗಿರುವಂತಹ ಸಪೋತ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಶಕ್ತಿ ಇದೆ. ಇದನ್ನು ವ್ಯಾಯಾಮದ ಬಳಿಕ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ನೈಸರ್ಗಿಕ ಶಕ್ತಿ ಸಿಗುವುದು.
ಬೆಳೆಯುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಇದು ಒದಗಿಸುವುದು. ಇದರಿಂದ ಆರೋಗ್ಯಕರ ಜೀವನ ಸಾಗಿಸಬಹುದು.

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...