ಸಾಮಾನ್ಯವಾಗಿ ರಿಯಾಲಿಟಿ ಶೋ ಅಂದ್ರೆನೆ ಅದು ಬರೀ ಹೊಡೆದಾಡ್ಕೊಳ್ಳೋದು, ಜಗಳವಾಡೋದು ಬೈದುಕೊಳ್ಳೋದಂತಲೇ ಜನ್ರ ತಲೇಲಿ ಫಿಕ್ಸ್ ಆಗಿ ಹೋಗ್ಬಿಟ್ಟಿದೆ.. ರಿಯಾಲಿಟಿ ಶೋಗಳಲ್ಲಿ ಹುಡ್ಗ ಹುಡ್ಗಿ ಲವ್ ಮಾಡೋದು, ಒಂದೇ ಹುಡ್ಗನ್ನ ಇಬ್ಬರು ಹುಡ್ಗೀರು ಗಾಳ ಹಾಕೋದು ಇವೆಲ್ಲಾ ಸಾಮಾನ್ಯ.. ಆದ್ರೆ ಗಾಳ ಹಾಕಿದ ಇಬ್ಬರು ಯುವತಿಯರೇ ಒಬ್ಬರನ್ನೊಬ್ಬರು ಪ್ರೀತಿ ಮಾಡ್ಬಿಟ್ರೆ ಹೇಗಿರತ್ತೆ ಅಲ್ವಾ..? ಅಂತಹದ್ದೇ ಒಂದು ಘಟನೆಯೊಂದು ವರದಿಯಾಗಿದೆ ನೋಡಿ..! ಆಸ್ಟ್ರೇಲಿಯಾದ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗ್ತಾ ಇದ್ದ ರಿಯಾಲಿಟಿ ಶೋ ಒಂದರಲ್ಲಿ ಇಬ್ಬರು ಮಾಡೆಲ್‍ಗಳು ಒಬ್ಬ ಹುಡುಗನಿಗೆ ಬುಟ್ಟಿಗೆ ಹಾಕಿಕೊಳ್ಳೊ ಬರದಲ್ಲಿ ಈ ಇಬ್ಬರು ಯುವತಿಯರೇ ಲವ್ವಿಡವ್ವಿ ಶುರು ಮಾಡಿಕೊಂಡಿದ್ದಾರೆ ನೋಡ್ರಪ್ಪ..! ಆಸ್ಟ್ರೇಲಿಯಾದ ಮಾಡೆಲ್‍ಗಳಾದ ಮೇಗನ್ ಮಾರ್ಕ್ಸ್ ಹಾಗೂ ಟಿಫಾನಿ ಸ್ಕ್ಯಾನ್‍ಲನ್ ಆಸ್ಟ್ರೇಲಿಯಾದ ದಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು. ಈ ಶೋನಲ್ಲಿ ಸ್ಪರ್ಧಾಳುಗಳಾಗಿ ಬಂದಿದ್ದ ಐದು ಯುವತಿಯರು ಒಬ್ಬ ಯುವಕನಿಗೆ ಇಂಪ್ರೆಸ್ ಮಾಡುವ ಟಾಸ್ಕ್ ಕೋಟ್ಟಿದ್ರು ನೋಡಿ.. ಇದೇ ವೇಳೆ ಆತನನ್ನು ಇಂಪ್ರೆಸ್ ಮಾಡಲು ಸೆಣಸಾಟ ನಡೆಸಿದ ಐವರಲ್ಲಿ ಇಬ್ಬರು ತಾವೇ ಪ್ರೀತಿ ಮಾಡಲು ಶುರು ಹಚ್ಕೊಂಡ್ಬಿಟ್ಟಿದಾರೆ..! ಬ್ಯಾಚುಲರ್ ಕಾರ್ಯಕ್ರಮದಿಂದ ಹೊರ ಬಂದ 27 ವರ್ಷದ ಮೇಗನ್ ಹಾಗೂ 30 ವರ್ಷದ ಟಿಫಾನಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಟಿಫಾನಿ ಬರ್ತ್‍ಡೇ ದಿನದಂದು ತಮ್ಮಿಬ್ಬರ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಮೇಗನ್, ಪೋಸ್ಟ್ ನ ಕೆಳಗೆ ಹಾಪಿ ಬರ್ತ್ ಡೇ ಟಿಫಾನಿ… ಐ ಲವ್ ಯೂ ಎಂದಿದ್ದಾಳೆ.. ಅದಕ್ಕೆ ಪ್ರತ್ಯುತ್ತರವಾಗಿ ಟಿಫಾನಿ ಐ ಲವ್ ಮೇಗನ್ ಸೋ ಮಚ್ ಎಂದಿದ್ದಾಳೆ..!
Like us on Facebook The New India Times
POPULAR STORIES :
ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!
ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?