ಬದನೆಕಾಯಿ ತಿನ್ನೋದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ ಗೊತ್ತಾ?
ಬದನೆ ಕಾಯಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಬದನೆಕಾಯಿ ಉತ್ಕರ್ಷಣ ನಿರೋಧಕವಾಗಿದೆ. ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಅಸ್ತಮಾ ವಿರೋಧಿ ಸಾಮರ್ಥ್ಯವನ್ನು ಕೂಡ ಬದನೆಕಾಯಿ ಹೊಂದಿದೆ. ಸಾಕಷ್ಟು ಪ್ರಯೋಜ ಹೊಂದಿದೆ. ಬದನೆಕಾಯಿಗಳಲ್ಲಿ ಹಲವಾರು ರೀತಿಯ ಬಣ್ಣಗಳು ಮತ್ತು ಗಾತ್ರಗಳು ಇರುವುದನ್ನು ನಾವು ನೀವು ಗಮನಿಸಿರುತ್ತೇವೆ. ಬಿಳಿ ಬದನೆಕಾಯಿ, ಕೆಂಪು ಬದನೆಕಾಯಿ, ನೇರಳೆ ಬದನೆಕಾಯಿ, ಹಸಿರು ಬದನೆಕಾಯಿ ಮತ್ತು ಕಪ್ಪು ಬದನೆಕಾಯಿಗಳು ಗಾತ್ರದಲ್ಲೂ ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತವೆ.
ಪೌಷ್ಟಿಕ ಸತ್ವಗಳ ತವರು!
ಬದನೆಕಾಯಿಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾಗುವಂತಹ ಹಲವಾರು ಬಗೆಯ ವಿಟಮಿನ್ ಗಳು ಖನಿಜಾಂಶಗಳು ಮತ್ತು ನಾರಿನ ಅಂಶಗಳು ಯಥೇಚ್ಛವಾಗಿದ್ದು, ಕ್ಯಾಲೋರಿ ಅಂಶಗಳನ್ನು ಮಾತ್ರ ಕಡಿಮೆ ಹೊಂದಿವೆ.
ಆಂಟಿ ಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿವೆ
ಬದನೆಕಾಯಿಗಳಲ್ಲಿ ಕೇವಲ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಅಷ್ಟೇ ಸೇರಿವೆ ಎಂದರೆ ಅದು ತಪ್ಪಾಗುತ್ತದೆ. ಆಂಟಿಆಕ್ಸಿಡೆಂಟ್ ಅಂಶಗಳು ಇತರ ತರಕಾರಿಗಳಿಗೆ ಹೋಲಿಸಿದರೆ ಬದನೆಕಾಯಿಗಳಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇರಿವೆ. ಮನುಷ್ಯನಿಗೆ ಆಂಟಿಆಕ್ಸಿಡೆಂಟ್ ಅಂಶಗಳ ಅವಶ್ಯಕತೆ ಬಹಳಷ್ಟಿದೆ. ಏಕೆಂದರೆ ದೇಹದಲ್ಲಿರುವ ವಿಷಕಾರಿ ಅಂಶಗಳಾದ ಫ್ರೀ ರಾಡಿಕಲ್ಸ್ ಗಳ ವಿರುದ್ಧ ಹೋರಾಡಿ ಮನುಷ್ಯನ ದೇಹಕ್ಕೆ ರಕ್ಷಣೆ ಒದಗಿಸುವ ಕಾರ್ಯ ಆಂಟಿ ಆಕ್ಸಿಡೆಂಟ್ ಗಳು ಮಾಡುತ್ತವೆ.
ಹಲವು ಬಗೆಯ ದೀರ್ಘಕಾಲದ ಮತ್ತು ಕೆಟ್ಟ ಕಾಯಿಲೆಗಳು ಎಂದು ಹೆಸರು ಪಡೆದ ಹೃದಯದ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ. ಬದನೆಕಾಯಿ ಗಿಡಗಳಲ್ಲಿ ಆಂಥೋ ಸಯಾನಿನ್ ಎಂಬ ಅಂಶಗಳು ಸೇರಿದ್ದು, ಬದನೆಕಾಯಿಗಳ ಬೇರೆ ಬೇರೆ ಬಣ್ಣಗಳ ವಿಚಾರದಲ್ಲಿ ಇವುಗಳ ಪಾತ್ರ ಪ್ರಮುಖವಾಗಿರುತ್ತದೆ. ಅದರಲ್ಲೂ ನಸುನೀನ್ ಎಂಬ ಆಂಥೋ ಸಯಾನಿನ್ ಅಂಶ ಬಹಳಷ್ಟು ಪ್ರಯೋಜನಕಾರಿಯೆಂದು ತಿಳಿದುಬಂದಿದೆ.
ಹೃದಯದ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು
ಮೊದಲೇ ಹೇಳಿದಂತೆ ಬದನೆಕಾಯಿಗಳಲ್ಲಿರುವ ಆಂಟಿಆಕ್ಸಿಡೆಂಟ್ ಅಂಶಗಳು ಹೃದಯದ ಆರೋಗ್ಯಕ್ಕೆ ಬಹಳಷ್ಟು ಸಹಕಾರಿ ಆಗಿರುತ್ತವೆ. ಇದನ್ನು ಕಂಡು ಹಿಡಿಯಲು ವಿಜ್ಞಾನಿಗಳು ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಅಂಶವಿರುವ ಮೊಲಗಳನ್ನು ತಮ್ಮ ಸಂಶೋದನೆಗೆ ಬಳಸಿಕೊಂಡರು. ಅವುಗಳಿಗೆ 0.3 ಔನ್ಸ್ ಅಂದರೆ 10 ಎಂ ಎಲ್ ನಷ್ಟು ಬದನೆಕಾಯಿ ಜ್ಯೂಸ್ ಎರಡು ವಾರಗಳ ತನಕ ನೀಡಿದರು. ಇದರ ಫಲವಾಗಿ ಆ ಮೊಲಗಳಲ್ಲಿ ಟ್ರೈಗ್ಲಿಸರೈಡ್ ಮತ್ತು ಎಲ್ ಡಿ ಎಲ್ ಕೊಲೆಸ್ಟ್ರಾಲ್ ಅಂಶಗಳು ಕೆಳಮಟ್ಟಕ್ಕೆ ಹೋಗಿರು ವುದು ಕಂಡು ಬಂದಿತು.
ಇದರಿಂದ ಮೊಲಗಳು ಹೃದಯದ ಸಮಸ್ಯೆಯಿಂದ ಪಾರಾಗಿದ್ದವು. ಇನ್ನೊಂದು ಸಂಶೋಧನೆಯಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಪ್ರಾಣಿಗಳಿಗೆ ಹಸಿ ಮತ್ತು ಬೇಯಿಸಿದ ಬದನೆಕಾಯಿಗಳನ್ನು 30 ದಿನಗಳ ತನಕ ತಿನ್ನಲು ಕೊಟ್ಟರು. ಇಲ್ಲೂ ಸಹ ಪ್ರಾಣಿಗಳ ಹೃದಯದ ಕಾರ್ಯ ಚಟುವಟಿಕೆ ಮತ್ತು ಹೃದಯದ ಸಮಸ್ಯೆ ಉತ್ತಮಗೊಂಡಿತು. ಹಾಗಾಗಿ ಬದನೆ ಕಾಯಿಗಳು ಪ್ರಾಣಿಗಳ ಹೃದಯದ ಸಮಸ್ಯೆಯನ್ನು ಸುಲಭವಾಗಿ ಪಾರು ಮಾಡುವಲ್ಲಿ ಯಶಸ್ವಿಯಾಗಿವೆ ಎಂದು ನಂಬಲಾಗಿದೆ. ಮನುಷ್ಯರ ವಿಷಯದಲ್ಲಿ ಈ ವಿಚಾರವಾಗಿ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ.
ಮಧುಮೇಹಿಗಳಿಗೆ ವರದಾನ
ಒಂದು ವೇಳೆ ನೀವು ಮಧುಮೇಹಿ ಆಗಿದ್ದರೆ, ನಿಮ್ಮ ಆಹಾರ ಪದ್ಧತಿಯಲ್ಲಿ ಬದನೆ ಕಾಯಿಗಳ ಅಳವಡಿಕೆಯಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಇದಕ್ಕೆ ಕಾರಣವೆಂದರೆ, ಬದನೆ ಕಾಯಿಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶವಿದ್ದು, ಮನುಷ್ಯನ ಜೀರ್ಣ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಏಕೆಂದರೆ ನಾರಿನ ಅಂಶ ದೇಹದಲ್ಲಿ ಜೀರ್ಣ ಪ್ರಕ್ರಿಯೆಯನ್ನು ನಿಧಾನಗೊಳಿಸಿ ಸಕ್ಕರೆ ಪ್ರಮಾಣದ ಹೀರಿಕೊಳ್ಳುವಿಕೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ಮಾಡುತ್ತದೆ.
ಸಕ್ಕರೆ ಪ್ರಮಾಣ ನಿಧಾನವಾಗಿ ಹೀರಿಕೊಳ್ಳುವುದರಿಂದ ದೇಹದಲ್ಲಿ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಒಂದು ಸಂಶೋಧನೆ ಹೇಳಿರುವ ಹಾಗೆ ಬದನೆಕಾಯಿ ಗಿಡಗಳಲ್ಲಿ ಕಂಡುಬರುವ ನೈಸರ್ಗಿಕ ಅಂಶವಾದ ಪಾಲಿಫಿನಾಲ್ ಮನುಷ್ಯನ ದೇಹದಲ್ಲಿ ಸಕ್ಕರೆ ಪ್ರಮಾಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಿ ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಲೂ ಸಹ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಬದನೆಕಾಯಿಗಳು ಹೆಚ್ಚಿನ ನಾರಿನಂಶ ಹೊಂದಿರುವ ಇತರ ಕಾಳುಗಳು ಮತ್ತು ತರಕಾರಿಗಳ ಜೊತೆ ಮನುಷ್ಯನ ದೇಹ ಸೇರಿದರೆ ಮಧುಮೇಹದ ಸಂಪೂರ್ಣ ನಿಯಂತ್ರಣ ಆಗುತ್ತದೆ.
‘