ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

Date:

 

ಅಪ್ಪ-ಅಮ್ಮ ತೋರಿಸಿದ ಯಾವ ಹುಡುಗಿಯೂ ಇಷ್ಟ ಆಗ್ತಿರಲಿಲ್ಲ. ಅಕ್ಕ- ಭಾವ, ಫ್ರೆಂಡ್ಸ್ ತೋರಿಸಿದ ಹುಡುಗಿಯರನ್ನೂ ಮದುವೆಯಾಗಲು ಒಪ್ಪಿರಲಿಲ್ಲ.
ನಿನಗೆ ಹುಡುಗಿ ಹುಡುಕೋಕೆ ನಮ್ಮಿಂದ ಆಗಲ್ಲ ಮಹರಾಯ ಅಂತ ಎಲ್ಲರೂ ಕೈಮುಗಿದು ತೆಪ್ಪಗಾಗಿದ್ರು.
ತಾನಾಗೇ ಒಲಿದು ಬಂದ ಹುಡುಗಿಯರನ್ನೂ ದೂರಯಿಟ್ಟಿದ್ದ ಗೆಳೆಯನ ಹೃದಯದಲ್ಲಿ ಇದೀಗ ಅವಳೊಬ್ಬಳು ಮನೆ ಮಾಡಿರುವರಳು. ಅವಳೇ ‘ಇಂಚರ’.
ಅವನು ನನ್ನ ಅಚ್ಚುಮೆಚ್ಚಿನ ಬಿಚ್ಚು ಮನಸ್ಸಿನ ಗೆಳೆಯ ‘ರಾಕೇಶ್’.
ನನಗೆ ಗೊತ್ತಿರುವಂತೆ ಅವನು ಯಾವ ಹುಡುಗಿಯನ್ನು ಇಷ್ಟಪಟ್ಟವನಲ್ಲ. ಆದ್ರೆ, ಇಂಚರಳನ್ನು ಮನಸಾರೆ ಪ್ರೀತಿಸ್ತಾ ಇದ್ದಾನೆ.
ಇಂಚರ ಮತ್ತು ರಾಕೇಶ್ ಪರಿಚಯ ಫೇಸ್‍ಬುಕ್‍ನಲ್ಲಿ. ಪರಿಚಯವಾಗಿ ಹೆಚ್ಚು ಕಡಿಮೆ ಎರಡು ವರ್ಷ ಆಗಿದೆ. ಆದರೆ,ಇವತ್ತಿನವರೆಗೂ ಪರಸ್ಪರ ನೇರ ಭೇಟಿಯಾಗಿಲ್ಲ. ಇಂಚರ ಪರಿಚಿತಳಾದ ಮೊದಲ ದಿನವೇ ರಾಕೇಶ್ ಹೃದಯದ ಬಡಿತ ಬದಲಾಗಿತ್ತು…! ಇಂಚರ, ಇಂಚರ ಇಂಚರ ಅಂತ ಮನಸ್ಸು ಜಪಿಸುತ್ತಿತ್ತು..! ಕನಸಿನಲ್ಲೂ ಅವಳದೇ ಕನವರಿಕೆ ಶುರುವಾಗಿತ್ತು.
ಆದರೆ,ಯಾವತ್ತು ಪ್ರಪೋಸ್ ಮಾಡುವ ಧೈರ್ಯ ಮಾಡಿರಲಿಲ್ಲ. ಕಾರಣ, ಅವಳೆಲ್ಲಿ ಒಪ್ಪದೆ, ಮಾತೂ ಸಹ ಬಿಡುವಳೆಂಬ ಭಯ..! ಪ್ರಪೋಸ್ ಕತೆ ಹಾಳಾಗೋಯ್ತು, ಅವಳ ಜೊತೆ ಚಾಟಿಂಗ್ ಸಹ ಮಾಡ್ತಿರ್ಲಿಲ್ಲ. ಇವಳೇ ನನ್ನವಳಾಗಲಿ ಎಂದು ದೇವರಿಗೆ ಅದೆಷ್ಟೋ ಬಾರಿ ಅಪ್ಲೀಕೇಷನ್ ಹಾಕಿದ್ದಾನೆ. ದೇವರ ಮೇಲೆ ಭಾರ ಹಾಕಿದ್ದು ಬಿಟ್ಟರೆ ಇವನಾಗಿಯೇ ಅವಳಿಗೆ ಮೆಸೇಜ್ ಸಹ ಹಾಕಿರಲಿಲ್ಲ.
ದೇವರು ನಾಲ್ಕು ದಿನದ ಹಿಂದಷ್ಟೇ ರಾಕೇಶನ ಅಪ್ಲಿಕೇಷನ್ ಪರಶೀಲಿಸಿ ಓಕೆ ಮಾಡಿದ್ದಾನಿರಬೇಕು…? !ಇಂಚರಾಳೇ ರಾಕಿಗೆ ಫೇಸ್‍ಬುಕ್‍ನಲ್ಲಿ ಹಾಯ್ ಎಂಬ ಸಂದೇಶ ಕಳುಹಿಸಿದ್ದಾಳೆ..! ಯಾವಾಗ ಇಂಚರಳಿಂದ ಹಾಯ್ ಎಂದು ಮೆಸೇಜ್ ಬಂತೋ ರಾಕೇಶ್ ಫುಲ್ ಖುಷ್..!
ಹಾಯ್ ಎಂದು ಅಂತಿದ್ದ ಮೆಸೇಜ್ ಬಂದಿದ್ದೇ ತಡ, ಫೇಸ್‍ಬುಕ್‍ ಮೆಸೆಂಜರ್ ನಲ್ಲಿ ಶುರುವಾಯ್ತು . ಮಾತು ಮಾತು ಮಾತು..! ವಾಟ್ಸಪ್ ನಂಬರ್ ವಿನಿಮಯ ಆಯ್ತು..! ವಾಟ್ಸಪ್ ಗೆ ಬಂದವಳು ಚಾಟಿಂಗ್ ಮಾಡದೇ ಇರ್ತಾಳ? ಚಾಟಿಂಗ್ ಮಾಡ್ತಾ ಮಾಡ್ತಾ ತುಂಬಾನೇ ಹತ್ತಿರ ವಾಗ್ಬಿಟ್ರು ..! ರಾಕೇಶ್, ಮೆಸೇಜ್ ಮಾಡ್ತಾ ಮಾಡ್ತಾ ನಿಮಗೆ ಗೊತ್ತಿದ್ದೂ ಗೊತ್ತಿದ್ದು ಮದುವೆಯಾಗಿದೆಯಾ ಎಂದು ಪ್ರಶ್ನಿಸಿದ. ಇಲ್ಲ ಎಂದಳು ಇಂಚರ..! ನನಗಿನ್ನೂ 22 ,ಇಷ್ಟು ಬೇಗ ಮದುವೆನಾ? ಎಂದಳು. ಮುಂದುವರೆದು,ಹುಡುಗನನ್ನು ಹುಡುಕುತ್ತಿದ್ದಾರೆ ಎಂದಳು.
ಆಗ, ರಾಕೇಶ್ ನಾನೂ ಕ್ಯೂನಲ್ಲಿದ್ದೇನೆ ಎಂದು ತಮಾಷೆ ಮಾಡಿದ.
ಎರಡು ದಿನದ ಬಳಿಕ ಪ್ರಪೋಸ್ ಕೂಡ ಮಾಡಿದ..! ಇಂಚರ ಕೆಲವು ಸಮಯದ ಬಳಿಕ ಕರೆ ಮಾಡಿ ನಿರ್ಧಾರ ತಿಳಿಸುವುದಾಗಿ ಹೇಳಿದಳು..ಅವಳು ಹೇಳಿದ ಸಮಯ ಮೀರಿ ಅದೆಷ್ಟೋ ಹೊತ್ತಿಗೆ ಕರೆ ಮಾಡಿದಳು.’ ನಾನು ಮನೆಯಲ್ಲಿ ಲವ್ ಮಾಡಲ್ಲ ಅಂತ ಮಾತು ಕೊಟ್ಟಿದ್ದೇನೆ ಎಂದಳು. ಅವಳ ಮಾತಲ್ಲಿ ಅವಳಲ್ಲಿರುವ ಪ್ರೀತಿ ಪ್ರತಿದ್ವನಿಸುತ್ತಿತ್ತು!
ಎರಡು ವರ್ಷ ಕಾಯಬೇಕಾಗುತ್ತೆ ಎಂದಳು , ಅದಕ್ಕೂ ರಾಕೇಶ್ ಓಕೆ ಎಂದ..! ಈಗ ಒಟ್ನಲ್ಲಿ ಇಂಚರಗೆ ರಾಕೇಶ್ ಮೇಲೆ ಲವ್ ಆಗಿದೆ, ಇಂಚರಾ ರಾಕೇಶ್ ಗಿಂತ ಆರೇಳು ವರ್ಷ ಚಿಕ್ಕವಳು..! ಇದೊಂದೇ ಕಾರಣಕ್ಕೆ ಅವಳ ಮನೆಯಲ್ಲಿ ಒಪ್ಪುತ್ತಾರೋ ಇಲ್ಲವೋ ಎಂಬ ಭಯ..! ಇಂಚರಗೆ ಹೇಳಿದ್ರೆ ಮನೇಲಿ ನೀವೇ ಒಪ್ಪಿಸಬೇಕು ಅಂತಾರೆ..! ರಾಕೇಶ್ ಗೆ ಒಪ್ಪುತ್ತಾರೋ ಇಲ್ಲವೋ ಎನ್ನುವ ಆತಂಕ.
ರಾಕೇಶನ ಗೆಳೆಯನಾಗಿ ನಾನೇಳುವುದಿಷ್ಟೇ ರಾಕೇಶ್ ಒಬ್ಬ ಸುಸಂಸ್ಕೃತ ..! ಅವನನ್ನು ಮದುವೆ ಯಾಗುವ ಹುಡುಗಿ ಪುಣ್ಯ ಮಾಡಿರುತ್ತಾಳೆ..

ಇಂಚರರವರೇ..ರಾಕೇಶ್ ನಿಮ್ಮನ್ನು ತುಂಬಾ ಪ್ರೀತಿಸ್ತಾನೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ. ಗುಣ,ಹಣ ಎರಡರಲ್ಲೂ ಕಡಿಮೆಯಿಲ್ಲ. ನೀವು ಹ್ಞೂಂ ಅನ್ನಿ, ನಿಮ್ಮ ಮನೆಗೆ ಬಂದು ಮಾತನಾಡುತ್ತಾನೆ. ನೀವು ಯಾವುದೇ ಅಳುಕಿಲ್ಲದೆ ನಿಮ್ಮ ಮನೆಯಲ್ಲಿ ಪ್ರೀತಿ ವಿಷಯನಾ ಹೇಳಿಬಿಡಿ…
(ಪ್ರೀತಿಯ ಓದುಗರೇ ಇದು ರಿಯಲ್ ಲವ್ ಸ್ಟೋರಿ, ಹೆಸರು ಬದಲಿಸಿದೆ) ರಾಕೇಶ್ ಮತ್ತು ಇಂಚರ ರ ವಯಸ್ಸಿನ ಅಂತರ 7 ವರ್ಷ. ಇವರ ಪ್ರೀತಿಗೆ ಮನೆಯಲ್ಲಿ ಒಪ್ಪುತ್ತಾರೆ? ಒಪ್ಪಿಸುವುದು ಹೇಗೆ? ನಿಮ್ಮ ಅಭಿಪ್ರಾಯಕ್ಕಾಗಿ ಪ್ರೇಮಿಗಳು ಕಾಯ್ತಿದ್ದಾರೆ.

  •  ರಘುಭಟ್

Like us on Facebook  The New India Times

POPULAR  STORIES :

ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ

ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!

12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!

ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?

ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...