ಪ್ರತಿದಿನ ಬೆಂಡೆಕಾಯಿ ನೀರು ಕುಡಿಯಿರಿ ಈ ಸಮಸ್ಯೆಗಳಿಗೆ ಹೇಳಿ ಗುಡ್ಬೈ!
ತರಕಾರಿ ಎಂದು ಮಾತ್ರ ಪರಿಗಣಿಸಲ್ಪಡುವ ಬೆಂಡೆಕಾಯಿ, ವಾಸ್ತವದಲ್ಲಿ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ನೈಸರ್ಗಿಕ ಔಷಧ. ಇತ್ತೀಚಿನ ದಿನಗಳಲ್ಲಿ ಬೆಂಡೆಕಾಯಿ ನೀರಿನ ಸೇವನೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ. ಜೀರ್ಣಕ್ರಿಯೆಯಿಂದ ಹಿಡಿದು, ಮಧುಮೇಹ, ಕೊಲೆಸ್ಟ್ರಾಲ್, ತೂಕ ಇಳಿಕೆ ಹಾಗೂ ಚರ್ಮದ ಆರೋಗ್ಯಕ್ಕೆ ಇದು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ರಕ್ತದ ಸಕ್ಕರೆ ನಿಯಂತ್ರಣ
“ಬೆಂಡೆಕಾಯಿ ನೀರಿನಲ್ಲಿರುವ ಕರಗುವ ಫೈಬರ್, ರಕ್ತದ ಸಕ್ಕರೆ ಮಟ್ಟವನ್ನು ನಿಧಾನವಾಗಿ ಹೆಚ್ಚಿಸುತ್ತದೆ.
ಇದು ಮಧುಮೇಹಿಗಳಿಗೆ ತುಂಬಾ ಉಪಯುಕ್ತ. ದಿನನಿತ್ಯ ಬೆಂಡೆಕಾಯಿ ನೀರನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.”
ಜೀರ್ಣಾಂಗ ಆರೋಗ್ಯ
“ಬೆಂಡೆಕಾಯಿಯ ಮ್ಯೂಸಿಲೇಜ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮಲಬದ್ಧತೆ, ಗ್ಯಾಸ್ಸ್, ಉಬ್ಬುವಿಕೆ ಮುಂತಾದ ಸಮಸ್ಯೆಗಳನ್ನು ತಡೆದು, ಕರುಳನ್ನು ಆರೋಗ್ಯಕರವಾಗಿರಿಸುತ್ತದೆ.”
ಕೊಲೆಸ್ಟ್ರಾಲ್ ನಿಯಂತ್ರಣ
“ಬೆಂಡೆಕಾಯಿ ನೀರಿನಲ್ಲಿರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ನ್ನು ಹೊರಹಾಕಿ, ಹೃದಯ ಆರೋಗ್ಯವನ್ನು ಕಾಪಾಡುತ್ತದೆ.
ಕಡಿಮೆ ಕೊಬ್ಬಿನ ಆಹಾರದ ಜೊತೆಗೆ ಸೇವಿಸಿದರೆ ಪರಿಣಾಮ ಇನ್ನಷ್ಟು ಹೆಚ್ಚು.”
ಚರ್ಮಕ್ಕೆ ನೈಸರ್ಗಿಕ ಹೊಳಪು
“ದೇಹದಿಂದ ವಿಷಕಾರಕ ಅಂಶಗಳನ್ನು ತೆಗೆದುಹಾಕುವ ಬೆಂಡೆಕಾಯಿ ನೀರು, ಮುಖಕ್ಕೆ ಹೊಳಪನ್ನು ತರುತ್ತದೆ.
ಮೊಡವೆ ಮತ್ತು ಚರ್ಮದ ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.”
ತೂಕ ಇಳಿಕೆಗೆ ಸಹಾಯಕ
“ಕಡಿಮೆ ಕ್ಯಾಲೋರಿ, ಹೆಚ್ಚಿನ ಫೈಬರ್ ಹೊಂದಿರುವ ಬೆಂಡೆಕಾಯಿ ನೀರು ಹಸಿವನ್ನು ನಿಯಂತ್ರಿಸುತ್ತದೆ.
ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಿ, ತೂಕ ಇಳಿಕೆಗೆ ಸಹಕಾರಿ.”
ಯಕೃತ್ತು ಮತ್ತು ಮೂತ್ರಪಿಂಡಗಳ ಆರೋಗ್ಯ
“ಬೆಂಡೆಕಾಯಿ ನೀರು ಲಿವರ್ ಹಾಗೂ ಕಿಡ್ನಿಯನ್ನು ಶುದ್ಧೀಕರಿಸಲು ಸಹಕಾರಿ.
ವಾರದಲ್ಲಿ ಕನಿಷ್ಠ 4 ದಿನ ಸೇವಿಸಿದರೆ ಅಂಗಾಂಗಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂದು ತಜ್ಞರ ಸಲಹೆ.”