ಒಣ ಶುಂಠಿ vs ತಾಜಾ ಶುಂಠಿ – ಯಾವುದು ಉತ್ತಮ? ಇಲ್ಲಿದೆ ಮಾಹಿತಿ
ಭಾರತೀಯರಾಗಿ ನಾವು ಪ್ರಕೃತಿಯಿಂದಲೇ ಹಲವು ಔಷಧೀಯ ಗಿಡಮೂಲಿಕೆಗಳನ್ನು ಪಡೆಯುವ ಭಾಗ್ಯಶಾಲಿಗಳು. ಅದರಲ್ಲಿ ಪ್ರಮುಖವಾದುದು ಶುಂಠಿ. ಸಾಮಾನ್ಯವಾಗಿ ಅಡುಗೆ ಮತ್ತು ಚಹಾದಲ್ಲಿ ಬಳಸುವ ತಾಜಾ ಶುಂಠಿಯ ಜೊತೆಗೆ ಒಣಗಿದ ಶುಂಠಿ ಕೂಡ ಆರೋಗ್ಯಕ್ಕೆ ಅಮೂಲ್ಯವಾದ ಪ್ರಯೋಜನಗಳನ್ನು ನೀಡುತ್ತದೆ.
ಒಣ ಶುಂಠಿಯ (Dry Ginger) ಪ್ರಯೋಜನಗಳು
ಗರ್ಭಿಣಿಯರ ವಾಕರಿಕೆ / ಬೆಳಗಿನ ಬೇನೆ ನಿವಾರಣೆ:
ಅರ್ಧ ಚಮಚ ಒಣ ಶುಂಠಿ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಜೇನು ಸೇರಿಸಿ ಬೆಳಿಗ್ಗೆ ಕುಡಿಯುವುದರಿಂದ ವಾಕರಿಕೆ ಕಡಿಮೆಯಾಗುತ್ತದೆ.
ಅಜೀರ್ಣ ಸಮಸ್ಯೆ ನಿವಾರಣೆ:
ಊಟಕ್ಕೂ ಮುಂಚೆ ಸ್ವಲ್ಪ ಶುಂಠಿ ಪುಡಿ ಸೇವಿಸಿದರೆ ಹೊಟ್ಟೆ ತ್ವರಿತವಾಗಿ ಖಾಲಿಯಾಗುತ್ತದೆ ಮತ್ತು ಅಜೀರ್ಣ, ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ:
ಶುಂಠಿ ಪುಡಿ ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ.
ತಾಜಾ ಶುಂಠಿಯ ಪ್ರಯೋಜನಗಳು
ದೇಹದ ಉಷ್ಣತೆ ಕಡಿಮೆ: ದೇಹ ತಂಪಾಗಿಸಲು ಸಹಾಯಕ.
ಮಹಿಳೆಯರ ಮುಟ್ಟಿನ ನೋವಿಗೆ: ಬಿಸಿ ಚಹಾದೊಂದಿಗೆ ತೆಗೆದುಕೊಂಡರೆ ಸೆಳೆತ ಕಡಿಮೆಯಾಗುತ್ತದೆ.
ಶೀತ, ಕೆಮ್ಮು, ಜ್ವರ ನಿವಾರಣೆ: ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ.
ರಕ್ತ ಪರಿಚಲನ ಸುಧಾರಣೆ: ಬೆವರು ಮೂಲಕ ವಿಷಕಾರಕ ತತ್ವಗಳನ್ನು ಹೊರಹಾಕುತ್ತದೆ.
ಮೈಗ್ರೇನ್ ನಿಯಂತ್ರಣ: ಹಸಿ ಶುಂಠಿ ಸೇವನೆಯಿಂದ ತಲೆನೋವು ಮತ್ತು ದಣಿವು ಕಡಿಮೆಯಾಗುತ್ತದೆ.
ಆಂಟಿ-ಅಲರ್ಜಿಕ್ ಗುಣಗಳು: ಅಲರ್ಜಿಯನ್ನು ತಡೆಯಲು ಸಹಕಾರಿ.
ಅಸ್ತಮಾ ಚಿಕಿತ್ಸೆ: ತಾಜಾ ಶುಂಠಿ ರಸ ಮತ್ತು ಮೆಂತ್ಯದ ಮಿಶ್ರಣ ಅಸ್ತಮಾ ನಿಯಂತ್ರಣಕ್ಕೆ ಸಹಾಯಕ.
ಒಟ್ಟಾರೆ, ಶುಂಠಿ ನೈಸರ್ಗಿಕ ಆಂಟಿಬಯೋಟಿಕ್, ಪೇನ್ ರಿಲೀವರ್ ಮತ್ತು ಇಮ್ಯುನಿಟಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.