ವಾಶ್ ಬೇಸಿನ್ʼನಲ್ಲಿ ಸಣ್ಣ ರಂಧ್ರ ಏಕಿರುತ್ತವೆ ಯಾಕಿರುತ್ತವೆ ಗೊತ್ತಾ..?
ನಮ್ಮ ಮನೆ ವಿನ್ಯಾಸಗೊಳಿಸುವಾಗ ಸ್ನಾನಗೃಹ ಮತ್ತು ವಾಶ್ಬೇಸಿನ್ಗಳಂತಹ ಚಿಕ್ಕ ಸ್ಥಳಗಳಿಗೆ ಹೆಚ್ಚು ಗಮನ ನೀಡುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಸಣ್ಣ ಸೌಲಭ್ಯಗಳೂ ನಮ್ಮ ಜೀವನಮಟ್ಟ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತವೆ.
ದಿನನಿತ್ಯ ಬಳಸುವ ವಾಶ್ಬೇಸಿನ್ನಲ್ಲಿ ಟ್ಯಾಪ್ನ ಕೆಳಭಾಗದಲ್ಲಿ ಕಾಣಸಿಗುವ ಒಂದು ಸಣ್ಣ ರಂಧ್ರವನ್ನು ನೀವು ಗಮನಿಸಿರುವಿರಬಹುದು. ಇದನ್ನು ಓವರ್ಫ್ಲೋ ಹೋಲ್ ಎಂದು ಕರೆಯುತ್ತಾರೆ. ಇದರ ಕಾರ್ಯ ತುಂಬಾ ಪ್ರಮುಖವಾಗಿದೆ.
ಈ ರಂಧ್ರದ ಮುಖ್ಯ ಕಾರ್ಯಗಳು:
1. ನೀರು ಉಕ್ಕಿ ಹರಿಯುವುದನ್ನು ತಡೆುವುದು
ಟ್ಯಾಪ್ ಆಫ್ ಮಾಡದೆ ಬಿಟ್ಟರೆ ಅಥವಾ ಡ್ರೇನ್ ಮುಚ್ಚಿಕೊಂಡರೆ, ಬೇಸಿನ್ನಲ್ಲಿ ನೀರು ತುಂಬಿ ಹರಿಯುವ ಅಪಾಯವಿರುತ್ತದೆ. ಇಂತಹ ಸಂದರ್ಭದಲ್ಲಿ, ಓವರ್ಫ್ಲೋ ರಂಧ್ರವು ಹೆಚ್ಚುವರಿ ನೀರನ್ನು ಚರಂಡಿಗೆ ಕರೆದೊಯ್ಯುತ್ತದೆ.
2. ನೀರಿನ ಹರಿವು ವೇಗಗೊಳಿಸುವುದು
ಕೆಲವೊಮ್ಮೆ ಬೇಸಿನ್ನ ನೀರು ನಿಧಾನವಾಗಿ ಹರಿದು ಹೋಗುತ್ತದೆ. ಇದಕ್ಕೆ ಕಾರಣ ಗಾಳಿ ಸಿಲುಕುವುದು. ಓವರ್ಫ್ಲೋ ರಂಧ್ರ ಗಾಳಿಗೆ ಪ್ರವೇಶದ ಮಾರ್ಗ ಒದಗಿಸುವುದರಿಂದ, ನೀರು ನಿರ್ವಾತದ ಅಡ್ಡಿಯಿಲ್ಲದೆ ವೇಗವಾಗಿ ಹರಿಯುತ್ತದೆ.
3. ತೇವಾಂಶ ಮತ್ತು ಬ್ಯಾಕ್ಟೀರಿಯಾ ತಡೆಯುವುದು
ನೀರು ನೆಲ ಅಥವಾ ಕೌಂಟರ್ಟಾಪ್ ಮೇಲೆ ಹರಿದರೆ ತೇವಾಂಶ ಉಂಟಾಗಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗಬಹುದು. ಓವರ್ಫ್ಲೋ ರಂಧ್ರ ಇದನ್ನು ತಪ್ಪಿಸುತ್ತದೆ.
4. ಸುರಕ್ಷತೆ
ಮಕ್ಕಳೂ, ವೃದ್ಧರೂ ಇರುವ ಮನೆಗಳಲ್ಲಿ ಈ ರಂಧ್ರ ಹೆಚ್ಚುವರಿ ಸುರಕ್ಷತೆಯನ್ನು ಒದಗಿಸುತ್ತದೆ. ಅಜಾಗರೂಕತೆಯಿಂದ ಟ್ಯಾಪ್ ಆನ್ ಆಗಿದ್ದರೂ, ಅಪಘಾತದ ಸಾಧ್ಯತೆ ಕಡಿಮೆಯಾಗುತ್ತದೆ.