ಧರ್ಮಸ್ಥಳ ಪ್ರಕರಣ: ಎನ್ಐಎ ತನಿಖೆಗೆ ಕೊಡುವ ಅಗತ್ಯವಿಲ್ಲ- ಜಿ ಪರಮೇಶ್ವರ್
ಬೆಂಗಳೂರು:- ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡುವ ಅಗತ್ಯವಿಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಎನ್ಐಎ ತನಿಖೆಗೆ ಪ್ರಕರಣ ಕೊಡೋದಿಲ್ಲ, ಅದರ ಅಗತ್ಯವೂ ಇಲ್ಲ. ಎಸ್ಐಟಿ ತನಿಖೆ ಮುಗಿದು ವರದಿ ಬರೋವರೆಗೂ ಬೇರೆ ಯಾವುದೇ ತನಿಖೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್ಐಟಿ ತನಿಖೆಯಲ್ಲಿ ತಪ್ಪೇನಾದ್ರೂ ಆಗಿದೆಯಾ? ತಪ್ಪಾಗಿದ್ರೆ ಬೇರೆ ಏಜೆನ್ಸಿಗೆ ಪ್ರಕರಣ ಕೊಡಬಹುದು. ಆದ್ರೆ ಎಸ್ಐಟಿ ತನಿಖೆಯಲ್ಲಿ ತಪ್ಪೇನೂ ಆಗಿಲ್ಲ, ತನಿಖೆ ಚೆನ್ನಾಗಿಯೇ ನಡೀತಿದೆ. ಬಿಜೆಪಿಯವರು ಎಸ್ಐಟಿ ತನಿಖೆಗೆ ತೊಂದರೆ ಮಾಡಬೇಕು ಅಂತ ಇದ್ದಾರಾ? ಬಿಜೆಪಿಯವರ ಉದ್ದೇಶ ಏನು ಅಂತ ಅವರು ಮೊದಲು ಸ್ಪಷ್ಟಪಡಿಸಲಿ ಎಂದು ವಾಗ್ದಾಳಿ ನಡೆಸಿದರು.