No menu items!
7.9 C
Munich
Wednesday, September 23, 2026

ಜಮೀರ್ ಅಹ್ಮದ್ ಅಕ್ರಮ ಆಸ್ತಿ ಪ್ರಕರಣ: ಕೆಜಿಎಫ್ ಬಾಬುಗೆ ಲೋಕಾ ನೋಟಿಸ್!

Must read

ಜಮೀರ್ ಅಹ್ಮದ್ ಅಕ್ರಮ ಆಸ್ತಿ ಪ್ರಕರಣ: ಕೆಜಿಎಫ್ ಬಾಬುಗೆ ಲೋಕಾ ನೋಟಿಸ್!

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ, ಜಮೀರ್ಗೆ ಕೋಟಿ ಕೋಟಿ ಹಣ ನೀಡಿದ್ದ ಕೆಜಿಎಫ್ ಬಾಬುಗೆ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಜಮೀರ್ ಅಹ್ಮದ್ 2013ರಲ್ಲಿ ಕೆಜಿಎಫ್ ಬಾಬುದಿಂದ 3.70 ಕೋಟಿ ರೂ. ಸಾಲ ಪಡೆದಿದ್ದಾರೆ. ಇದು ಜಮೀರ್ ಖಾನ್ ಮನೆ ಖರೀದಿಯ ಸಂದರ್ಭದಲ್ಲಿ ನೀಡಲ್ಪಟ್ಟಿರುವ ಸಾಲವಾಗಿದ್ದು, ಹಣದ ವ್ಯವಹಾರ ಮತ್ತು ಕಾರಣಗಳ ಕುರಿತು ವಿಚಾರಣೆ ನಡೆಯಲಿದೆ.
ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ 7 ದಿನಗಳೊಳಗೆ ಲೋಕಾಯುಕ್ತ ನೋಟಿಸ್ನಲ್ಲಿ ಸೂಚಿಸಲಾಗಿದೆ. ಇದೇ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಯವರನ್ನು ಕೂಡ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

- Advertisement -spot_img

More articles

- Advertisement -spot_img

Latest article