ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬಿಸಾಕುತ್ತಿದ್ದೀರಾ!? ಇದರ ಬೆನಿಫಿಟ್ ನೀವು ತಿಳಿಯಲೇ ಬೇಕು!
ಸಾಕಷ್ಟು ನೀರು ತುಂಬಿರುವ ರಸಭರಿತ ಕಿತ್ತಳೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಹಣ್ಣನ್ನು ತಿಂದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯುವುದು ಕೂಡ ಸಾಮಾನ್ಯ. ಆದರೆ ಹಣ್ಣು ಮತ್ತು ಅವುಗಳ ಸಿಪ್ಪೆಗಳು ಚರ್ಮಕ್ಕೆ ಜಾದು ಮಾಡುತ್ತವೆ ಎಂಬುದು ಮಾತ್ರ ಬಹುತೇಕರಿಗೆ ತಿಳಿದಿಲ್ಲ.
ಕಿತ್ತಳೆ ಹಣ್ಣು ಮಾತ್ರವಲ್ಲದೇ ಇದರ ಸಿಪ್ಪೆಯಿಂದಲೂ ಹಲವಾರು ಆರೋಗ್ಯ ಪ್ರಯೋಜನಗಳಿದೆ. ಸಾಮಾನ್ಯವಾಗಿ ಅನೇಕ ಮಂದಿ ಕಿತ್ತಳೆ ಸಿಪ್ಪೆ ತ್ಯಾಜ್ಯ ಎಂದು ಬಿಸಾಡುತ್ತಾರೆ. ಆದರೆ ಇದನ್ನು ಶುಚಿಗೊಳಿಸಿ ನಾನಾ ರೀತಿಯಲ್ಲಿ ಬಳಸಬಹುದು ಎಂಬ ವಿಚಾರ ತಿಳಿದಿಲ್ಲ. ಹಾಗಾಗಿ ಈ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಕಿತ್ತಳೆ ಹಣ್ಣುನ್ನು ನಾವು ಆರೋಗ್ಯದ ವಿಚಾರದಲ್ಲಿ ನೋಡಿದಾಗ ತುಂಬಾ ಅಮೂಲ್ಯವಾದ ಹಣ್ಣು. ದೇಹದಲ್ಲಿ ನೀರಿನ ಅಂಶ ಹೆಚ್ಚಿಸುವ ಶಕ್ತಿಯಿಂದ ಹಿಡಿದು ಅನೇಕ ಪ್ರಯೋಜನಗಳಿವೆ. ಅದರಲ್ಲಿರುವ ವಿಟಮಿನ್ ಸಿ, ಫೈಬರ್ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಅಗತ್ಯ ಜೀವಸತ್ವ ಹಾಗೂ ಖನಿಜಗಳನ್ನು ಜೀವಕ್ಕೆ ಒದಗಿಸುತ್ತವೆ. ಸಾಮಾನ್ಯವಾಗಿ ನಾವು ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಅದು ಕಸವೆಂದುಕೊಂಡು ಆಚೆ ಎಸೆಯುವವರೆ ಹೆಚ್ಚು. ಆದ್ರೆ ನೆನಪಿರಲಿ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿಯೂ ಕೂಡ ಆರೋಗ್ಯಕಾರಿ ಅಂಶಗಳು ಇವೆ.
ನಾವು ಕಿತ್ತಳೆ ಹಣ್ಣಿನ ಸಿಪ್ಪೆ ತಿನ್ನುವುದರಿಂದ ಆಕ್ಸಿಡೆಟೀವ್ ಸ್ಟ್ರೇಸ್ ಹಾಗೂ ಉರಿಯೂತದಂತಹ ಸಮಸ್ಯೆಗಳು ಕಡಿಮೆ ಆಗುತ್ತವೆ. ಕಾರಣ ಇದರಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚು ಆಂಟಿಆಕ್ಸಿಡೆಂಟ್ ಅಂಶಗಳಿವೆ. ಈ ಅಂಶಗಳಿರುವ ಕಾರಣದಿಂದಾಗಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ನರರೋಗಕ್ಕೆ ಸಂಬಂಧಿಸಿದ ಕಾಯಿಲೆಗಳು ನಿಮ್ಮ ಸಮೀಪ ಹಾಯುವುದಿಲ್ಲ.
ವಿಟಮಿನ್ ಸಿ ಯಿಂದ ಹೃದಯ ಆರೋಗ್ಯಕ್ಕೆ ಉಪಯುಕ್ತ
ಇತ್ತೀಚೆಗೆ ಹೊರಬಂದ ದಿ ಜರ್ನಲ್ ಆಫ್ ಅಗ್ರಿಕಲ್ಚರ್ ಅಂಡ್ ಫುಡ್ ಕೆಮೆಸ್ಟ್ರೀ ಎಂಬ ಅಧ್ಯಯನ ಕಿತ್ತಳೆ ಹಣ್ಣಿನ ಸಿಪ್ಪೆ ತಿನ್ನುವುದರಿಂದ ದೇಹಕ್ಕೆ ಅತಿಹೆಚ್ಚು ವಿಟಿಮಿನ್ ಸಿ ದೊರೆಯುತ್ತದೆ. ಇದರಿಂದ ಹೃದಯದ ಆರೋಗ್ಯವು ಹೆಚ್ಚು ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಕಿತ್ತಳೆ ಹಣ್ಣಿನ ಸಿಪ್ಪೆ ಒಂದು ಕಸವಲ್ಲ ಅದು ಅನೇಕ ವಿಟಮಿನ್ಗಳನ್ನು ಹೊಂದಿರುವ ರಸ ಎನ್ನುವುದು ನಿಮಗೆ ನೆನಪಿರಲಿ.
ಈಗಾಗಲೇ ನಿಮಗೆ ಹೇಳಿದಂತೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ ಇದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ. ಇದರಲ್ಲಿ ಆಂಟಿಮೈಕ್ರೋಬಿಯಾದಂತಹ ಅಂಶಗಳು ಇರುವುದರಿಂದ ಅನೇಕ ಸೋಂಕುಗಳಿಂದ ನಮ್ಮನ್ನು ದೂರವಿಡುತ್ತದೆ.
ಈ ಹಣ್ಣಿನ ಸಿಪ್ಪೆಯನ್ನು ತಿನ್ನುವುದರಿಂದ ನಮ್ಮ ಒಟ್ಟಾರೆ ಪಚನಕ್ರಿಯೆಯ ಪ್ರಕ್ರಿಯೆಗೆ ಸಹಾಯಕವಾಗಲಿದೆ. ಪೆಕ್ಟಿನ್ ಅಂಶವಿರುವುದರಿಂದಾಗಿ ಪಚನಕ್ರಿಯೆಯ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಶುರು ಮಾಡುತ್ತದೆ. ಹೀಗೆ ಹಲವು ಪ್ರಯೋಜನಗಳಿಂದಾಗಿ ಈ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಅತಿಹೆಚ್ಚು ಫೈಬರ್ ಅಂಶವಿರುವ ಕಿತ್ತಳೆ ಹಣ್ಣಿನ ಸಿಪ್ಪೆ , ಸಕ್ಕರೆ ರೋಗ ಇರುವವರು ತಿಂದರೆ ತುಂಬಾ ಪ್ರಯೋಜನಗಳಿವೆ. ಇದು ದೇಹಕ್ಕೆ ಸೇರುವುದರಿಂದ ರಕ್ತದಲ್ಲಿ ಸೇರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ಶುಗರ್ ಲೇವಲ್ ಕಡಿಮೆ ಆಗುವ ಸಾಧ್ಯತೆ ಹೆಚ್ಚು ಇದೆ.
ಚಯಾಪಚಯ ಕ್ರಿಯೆ ಅಂದರೆ, ಚಯಾಪಚಯವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ದೇಹದ ಜೀವಕೋಶಗಳಲ್ಲಿ ಸಂಭವಿಸುವ ರಾಸಾಯನಿಕ ಪ್ರತಿಕ್ರಿಯೆಗಳನ್ನು ಸೂಚಿಸುತ್ತದೆ. ಕಿತ್ತಳೆ ಹಣ್ಣು ಈ ಚಯಾಪಚಯ ಕ್ರಿಯೆಗೆ ಮತ್ತಷ್ಟು ಶಕ್ತಿ ತುಂಬುವುದರಿಂದ ನಿತ್ಯ ವ್ಯಾಯಾಮ ಮಾಡಿ ತೂಕ ಇಳಿಸಬೇಕು ಅಂದುಕೊಂಡವರಿಗೆ ಬಹಳ ಸಹಾಯಕಾರಿ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಆರಂಭದಿಂದಲೂ ಉಸಿರಾಟದ ತೊಂದರೆಯ ಚಿಕಿತ್ಸೆಗೆ ಬಳಸುತ್ತಾರೆ. ಅಸ್ತಮಾ ಶೀತದಂತಹ ಸಮಸ್ಯೆಗಳು ಇದ್ದವರು ಈ ಸಿಪ್ಪೆಯನ್ನು ಸೇವಿಸುವುದರಿಂದ ಎದೆಯಲ್ಲಿ ಗಟ್ಟಿಯಾಗಿರುವ ಕಫವನ್ನು ಕರಗಿಸಿ ದೇಹದಿಂದ ಹೊರಗೆ ಹಾಕುವಲ್ಲಿ ಸಹಾಯಕಾರಿಯಾಗುತ್ತದೆ.