ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?
ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳ ಬಳಕೆ ಸಾಮಾನ್ಯ. ವಿಶೇಷವಾಗಿ ದೇವರ ಪೂಜಾ ಸಾಮಗ್ರಿ, ಲೋಟ, ತಟ್ಟೆ ಇತ್ಯಾದಿ ತಾಮ್ರದ ಪಾತ್ರೆಗಳು ಹಳ್ಳಿ ಮನೆಗಳಲ್ಲಿ ಇನ್ನೂ ಕಂಡುಬರುತ್ತವೆ. ಆದರೆ ಇವು ಕಾಲಕಾಲಕ್ಕೆ ಕಪ್ಪಾಗಿ ಹೊಳಪನ್ನು ಕಳೆದುಕೊಳ್ಳುತ್ತವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಕ್ಲೀನರ್‌ಗಳು ದುಬಾರಿ ಹಾಗೂ ಆರೋಗ್ಯಕ್ಕೆ ಹಾನಿಕಾರಕ. ಇಂತಹ ಸಂದರ್ಭಗಳಲ್ಲಿ ಮನೆಯಲ್ಲೇ ಲಭ್ಯವಿರುವ ಸಾಮಗ್ರಿಗಳಿಂದ ತಾಮ್ರದ ಪಾತ್ರೆಗಳನ್ನು ಹೊಳೆಯಿಸಬಹುದು.
ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಸುಲಭ ವಿಧಾನಗಳು
ಉಪ್ಪು ಮತ್ತು ನಿಂಬೆ ಹಣ್ಣು
ಅರ್ಧ ನಿಂಬೆ ಹಣ್ಣಿನ ಮೇಲೆ ಉಪ್ಪು ಹಚ್ಚಿ ಪಾತ್ರೆಗೆ ಉಜ್ಜಿ.
10 ನಿಮಿಷ ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆದು ಒಣಗಿಸಿ.
ಕೆಚಪ್ ಬಳಕೆ
ಪಾತ್ರೆಯ ಮೇಲೆ ಕೆಚಪ್ ಹಚ್ಚಿ ಕೆಲವು ನಿಮಿಷ ಬಿಡಿ.
ನಂತರ ಮೃದುವಾದ ಸ್ಪಾಂಜ್‌ನಿಂದ ಉಜ್ಜಿ ತೊಳೆದು ಆಲಿವ್ ಎಣ್ಣೆ ಹಚ್ಚಿ ಪಾಲಿಶ್ ಮಾಡಿ.
ಅಡುಗೆ ಸೋಡಾ
ಅಡುಗೆ ಸೋಡಾವನ್ನು ನಿಂಬೆ ಜೊತೆಗೆ ಅಥವಾ ಪ್ರತ್ಯೇಕವಾಗಿ ಬಳಸಬಹುದು.
ಕಲೆಗಳನ್ನು ಸುಲಭವಾಗಿ ತೆಗೆದುಹಾಕಿ ಪಾತ್ರೆ ಹೊಳೆಯುತ್ತದೆ.
ಹುಣಸೆಹಣ್ಣು
ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ ಅದರ ನೀರನ್ನು ಪಾತ್ರೆಗೆ ಹಚ್ಚಿ.
ಸ್ಕ್ರಬ್ಬರ್‌ನಿಂದ ಉಜ್ಜಿ ತೊಳೆದರೆ ಪಾತ್ರೆ ಹೊಳೆಯುತ್ತದೆ.
ಹೆಚ್ಚು ಕೊಳಕು ಇದ್ದರೆ ಹುಣಸೆ ತಿರುಳನ್ನೇ ಹಚ್ಚಿ ಉಜ್ಜಿ.
ಈ ದೇಸಿ ವಿಧಾನಗಳಿಂದ ತಾಮ್ರದ ಪಾತ್ರೆಗಳು ಮತ್ತೆ ಹಳೆಯ ಹೊಳಪನ್ನು ಪಡೆಯುತ್ತವೆ, ದುಬಾರಿ ಕ್ಲೀನರ್ ಅಗತ್ಯವಿಲ್ಲ.