ನಿಮಗೆಲ್ಲಾ ಗೊತ್ತಿರೋ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರೋ ರಾತ್ರಿ 500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ನಿಷೇಧ ಮಾಡಿ ಭ್ರಷ್ಟ ಅಧಿಕಾರಿಗಳಿಗೆ ಹಾಗೂ ಕಾಳಧನಿಕರ ಮೇಲೆ ಸಖತ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರು… ಆದ್ರೆ ಸಾರ್ವಜನಿಕರೇ ಎಚ್ಚರ ಮೋದಿ ಮತ್ತೊಂದು ಮಾಸ್ಟರ್ ಪ್ಲಾನ್ ಹಿಡಿದು ರೆಡಿಯಾಗಿ ನಿಂತಿದ್ದಾರೆ.. ನೀವೇನಾದ್ರೂ ಅಕಸ್ಮಾತ್ ರಸ್ತೆ ನಿಯಮ ಬ್ರೇಕ್ ಮಾಡಿದ್ದೇ ಆದ್ರೆ ನಿಮ್ಮ ಗತಿ ಅಷ್ಟೇ..!
ಹೌದು.. ದೇಶದಲ್ಲಿ ತ್ವರಿತ ಗತಿಯ ಬದಲಾವಣೆ ತರ್ತಾ ಇರೋ ಮೋದಿಯ ಮುಂದಿನ ಬ್ರಹ್ಮಾಸ್ತ್ರ ರಸ್ತೆ ನಿಯಮ ಪಾಲಿಸದಿದ್ದವರ ಮೇಲೆ..! ಈ ಮಸೂದೆಯನ್ನು ಇದೇ ವರ್ಷದ ನ.16 ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರುವ ಎಲ್ಲಾ ಸಿದ್ಧತೆಗಳನ್ನು ಮೋದಿ ಸರ್ಕಾರ ಮಾಡಿಕೊಂಡಿದೆ.
ಈ ಮಸೂದೆ ಅಂಗೀಕಾರವಾದ ಪಕ್ಷದಲ್ಲಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳಲು ನಿರ್ಧರಿಸಿದೆ. ಅಷ್ಟೇ ಅಲ್ಲ ಸ್ವಾಮಿ ನೀವು ಇಂದೆಂದೂ ಕಂಡು ಕೇಳರಿಯದ ದಂಡವನ್ನು ಮೋಟಾರು ಕಾಯ್ದೆ ತಿದ್ದುಪಡಿ ಮಸೂದೆ-2016ರ ಅಡಿಯಲ್ಲಿ ಕಟ್ಟಬೇಕಾಗುತ್ತೆ ಹುಷಾರ್..!
ಯಾವುದಕ್ಕೆ ಎಷ್ಟು ದಂಡ:
– ಕುಡಿದು ವಾಹನ ಚಲಾಯಿದರೆ: 10 ಸಾವಿರ ದಂಡ
– ವಿಮೆ ಇಲ್ಲದ ವಾಹನ ಚಾಲನೆ: 2 ಸಾವಿರ ದಂಡ ಮತ್ತು 3 ತಿಂಗಳ ಜೈಲು
ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿದರೆ: 5 ಸಾವಿರ ದಂಡ
– ಹೆಲ್ಮೆಟ್ ರಹಿತ ವಾಹನ ಚಾಲನೆ: 1 ಸಾವಿರ ದಂಡ 3 ತಿಂಗಳ ಜೈಲು. ಪರವಾನಗಿ ರದ್ದು.
– ಹಿಟ್ ಅಂಡ್ ರನ್ ಕೇಸ್: ಸಂತ್ರಸ್ತರಿಗೆ 2 ಲಕ್ಷ ಪರಿಹಾರ – ಅಪಘಾತದಲ್ಲಿ ಸತ್ತರೆ: ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ
– ಅಂಬುಲೆನ್ಸ್ ಗೆ ದಾರಿ ಬಿಡದಿದ್ದರೆ: 10 ಸಾವಿರ ದಂಡ
– ಸೀಟ್ ಬೆಲ್ಟ್ ಹಾಕದಿದ್ದರೆ: 1 ಸಾವಿರ ದಂಡ
– ರಸ್ತೆಯಲ್ಲಿ ರೇಸಿಂಗ್: 5 ಸಾವಿರ ದಂಡ
– ಅಪಾಯಕಾರಿ ವಾಹನ ಚಾಲನೆ: 5 ಸಾವಿರ ದಂಡ. 3 ತಿಂಗಳ ಜೈಲು.
ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದರೆ
ಅನುಮತಿಯಿಲ್ಲದೆ ವಾಹನ ಚಲಾಯಿದರೆ
ಮಕ್ಕಳು ವಾಹನ ಚಲಾಯಿಸಿದರೆ
ಆದ್ದರಿಂದ ಸಾರ್ವಜನಿಕರೇ.. ಎಚ್ಚರಾ.. ಎಚ್ಚರ.. ನಿಯಮ ಪಾಲಿಸೋಕು ಮೊದ್ಲು ಮೇಲಿನ ಎಲ್ಲಾ ರೂಲ್ಸ್ ಗಳನ್ನು ಅಳವಡಿಸಿಕೊಳ್ಳಿ.
Like us on Facebook The New India Times
POPULAR STORIES :
ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ
ಮಾಸ್ತಿಗುಡಿ ದುರಂತ: ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ಯಾರು ಗೊತ್ತಾ..?
ಟ್ರಂಪ್‍ಗಿಂತ 25 ವರ್ಷ ಚಿಕ್ಕವಳಂತೆ ಮೆಲಾನಿಯಾ..!