No menu items!
9.2 C
Munich
Friday, May 1, 2026

ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!

Must read

ಪುಣೆಯ ಕಾಂಚನಗಲ್ಲಿ ಬಳಿಯ ಲಾ ಕಾಲೇಜ್ ಬಳಿ ಮುನ್ಸಿಪಾಲಿಟಿಯ ಮಹಿಳೆಯೋರ್ವಳು ಕಸ ಗೂಡಿಸುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ 1000 ಮುಖ ಬೆಲೆಯ ಸುಮಾರು 52 ಹಳೆಯ ನೋಟುಗಳು ಪತ್ತೆಯಾಗಿದ್ದು ಕೂಡಲೇ ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ.
ಬುಧವಾರ ಮುಂಜಾನೆ 7ರ ಸುಮಾರಿಗೆ ಎಂದಿನಂತೆ ರಸ್ತೆಯ ಕಸ ಗುಡಿಸುತ್ತಿದ್ದ 58 ವರ್ಷದ ಶಾಂತ ಭಾಯಿ ಓವ್ಹಾಲ್ ಎಂಬುವವರಿಗೆ ರಸ್ತೆಯ ಮಧ್ಯೆ ಒಂದು ಪ್ಲಾಸ್ಟಿಕ್ ಚೀಲ ಕಂಡುಬಂದಿದೆ. ಪ್ರತಿನಿತ್ಯದಂತೆ ಜನಸಾಮಾನ್ಯರು ಕಚ್ಚಾ ವಸ್ತುಗಳನ್ನು ಹಾಕಿ ಎಸೆದಿರಬಹುದು ಎಂದು ಭಾವಿಸಿದ ಶಾಂತ ಭಾಯಿ ಅವರು ಕವರ್ ಬಿಚ್ಚಿ ನೋಡಿದಾಗ ಅದರಲ್ಲಿ ನೋಟುಗಳಿರುವುದು ನೋಡಿದ್ದಾಳೆ ಅದರಲ್ಲಿದ್ದ ಎಲ್ಲವೂ 1000 ಮುಖಬೆಲೆಯ ಹಳೆಯ ನೋಟುಗಳು ಎಂದು ತಿಳಿದು ಬಂದಿದೆ. ಇನ್ನು ನೋಟು ಕಂಡ ತಕ್ಷಣವೇ ಶಾಂತಭಾಯಿ ತಮ್ಮ ಹಿರಿಯ ಅಧಿಕಾರಿ ಖಾಂದು ಕಸ್ಬೆ ಎಂಬುವವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಆನಂತರ ಇಬ್ಬರೂ ಸೇರಿ ಹತ್ತಿರದ ಪ್ರಭಾತ್ ರಸ್ತೆಯಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ಇನ್ಸ್ ಪೆಕ್ಟರ್ ಶಿಲ್ಪಾ ಲಾಂಬೆ ಅವರಿಗೆ ಹಣವನ್ನು ಹಸ್ತಾಂತರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಂತ ಭಾಯಿ ತಾನು ಎಂದಿನಂತೆ ಈ ಮಾರ್ಗದಲ್ಲಿ ಕಸ ಗುಡಿಸುತ್ತಿದ್ದಾಗ ರಸ್ತೆಯ ಮಧ್ಯೆ ಪ್ಲಾಸ್ಟಿಕ್ ಚೀಲ ನೋಡಿದೆ. ನನಗೆ ಅದೇನೂ ಅಚ್ಚರಿ ಅನ್ನಿಸಲಿಲ್ಲ.. ಯಾಕಂದ್ರೆ ಪ್ರತಿ ನಿತ್ಯವೂ ಈ ದಾರಿಯಲ್ಲಿ ಅದೆಷ್ಟೋ ಪ್ಲಾಸ್ಟಿಕ್ ಕವರ್ ಬಿದ್ದಿರೋದ್ರಿಂದ ಈ ಕವರ್‍ನ ಮೇಲೆ ಅಷ್ಟೊಂದು ಗಮನ ಹರಿಸಲಿಲ್ಲ.. ಆದರೆ ಹತ್ತಿರ ಹೋಗಿ ನೋಡಿದಾಗ ಕವರ್‍ನ ಒಳ ಭಾಗದಲ್ಲಿ ಏನೋ ಇರುವುದಾಗಿ ಕಾಣಿಸಿತ್ತು. ಅದನ್ನು ತೆರೆದು ನೋಡಿದಾಗ್ಲೆ ನನಗೆ ಅಚ್ಚರಿಯಾಗಿದ್ದು.. 1000 ಮುಖಬೆಲೆಯ ಸುಮಾರು 52 ನೋಟುಗಳಿದ್ದದ್ದು ಕಂಡು ನನಗೆ ಗಾಬರಿಯಾಯ್ತು ಎಂದು ಹೇಳಿದ್ದಾರೆ. ಕೂಡಲೇ ನಾನು ನಮ್ಮ ಕಂಟ್ರಾಕ್ಟರ್ ಅವರಿಗೆ ಕರೆ ಮಾಡಿದೆ. ಸ್ಥಳಕ್ಕೆ ಬಂದ ಅವರು ಪಕ್ಕದ ಪೊಲೀಸ್ ಠಾಣೆಗೆ ಹಸ್ತಾಂತರಿಸಲು ತಿಳಿಸಿದರು ಎಂದು ಶಾಂತಭಾಯಿ ತಿಳಿಸಿದ್ದಾರೆ.

Like us on Facebook  The New India Times

POPULAR  STORIES :

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ

ಮಾಸ್ತಿಗುಡಿ ದುರಂತ: ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ಯಾರು ಗೊತ್ತಾ..?

ಟ್ರಂಪ್‍ಗಿಂತ 25 ವರ್ಷ ಚಿಕ್ಕವಳಂತೆ ಮೆಲಾನಿಯಾ..!

2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!

500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article