ಚಿಂತೆ ಮಾಡ್ಬೇಡಿ.. ರಾತ್ರಿ 9ರವರೆಗೂ ಕಾರ್ಯ ನಿರ್ವಹಿಸುತ್ತೆ ಬ್ಯಾಂಕ್..!

0
48

500 ಮತ್ತು 100ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದ ಪರಿಣಾಮವಾಗಿ ದೇಶದ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದೇಶದ ಕೆಲವೊಂದು ಬ್ಯಾಂಕ್‍ಗಳು ಮುಂದೆ ಬಂದಿದ್ದು ಸ್ವಯಂ ಪೂರ್ವಕವಾಗಿ ರಾತ್ರಿ 9ರವರೆಗೂ ಸಾರ್ವಜನಿಕ ಸೇವೆಗಾಗಿ ನಾವು ಸಿದ್ಧ ಎಂದು ಹೇಳಿದೆ.
ನೋಟು ನಿಷೇಧದ ನಂತರ ದೇಶದ ಎಲ್ಲಾ ಬ್ಯಾಂಕುಗಳು ಗುರುವಾರದಿಂದ ಕಾರ್ಯಾರಂಭಗೊಂಡಿದ್ದು, ಮೊದಲನೇ ದಿನದಲ್ಲೇ ನೋಟು ಬದಲಾವಣೆ ಮಾಡಿಕೊಳ್ಳಲು ಜನರು ಬ್ಯಾಂಕ್‍ನತ್ತ ಜಮಾಯಿಸಿದ್ದಾರೆ. ಇನ್ನು ಕೆಲವೊಂದು ಬ್ಯಾಂಕ್‍ಗಳಲ್ಲಿ ಕಿಲೋ ಮೀಟರ್ ಗಟ್ಟಲೆ ಕ್ಯೂಗಳಿರೋದು ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲವು ಬ್ಯಾಂಕ್‍ಗಳು ರಾತ್ರಿ 9 ಗಂಟೆಯವರೆಗೂ ಕಾರ್ಯ ನಿರ್ವಹಿಸುದಾಗಿ ಹೇಳಿಕೊಂಡಿದೆ. ಕೆಲವು ಖಾಸಗೀ ಬ್ಯಾಂಕ್‍ಗಳು ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್ ಎಸ್‍ಬಿಐ ಕೂಡ ಕಾರ್ಯ ನಿರ್ವಹಿಸುವುದಾಗಿ ಹೇಳಿಕೊಂಡಿದೆ.
ಇನ್ನು ಸಾರ್ವಜನಿಕ ಸಮಸ್ಯೆಯನ್ನು ನಿವಾರಿಸಲೆಂದು ಬ್ಯಾಂಕ್ ನೌಕರರ ರಜೆಗಳಿಗೆ ಕತ್ತರಿ ಹಾಕಿದೆ. ಯಾವುದೇ ಕಾರಣಕ್ಕೂ ನೌಕಕರು ಅನಧೀಕೃತ ರಜೆ ಹಾಕಬಾರದು ಎಂದು ಸೂಚನೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂಕ್ ಕಿಶೋರ್ ತಮ್ಮ ಸಮೂಹ ಬ್ಯಾಂಕ್‍ಗಳ ಕೆಲವು ಶಾಖೆಗಳಿಗೆ ರಾತ್ರಿ 9ರವರೆಗೂ ಕಾರ್ಯ ನಿರ್ವಹಿಸಲು ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

Like us on Facebook  The New India Times

POPULAR  STORIES :

ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ

ಮಾಸ್ತಿಗುಡಿ ದುರಂತ: ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ಯಾರು ಗೊತ್ತಾ..?

ಟ್ರಂಪ್‍ಗಿಂತ 25 ವರ್ಷ ಚಿಕ್ಕವಳಂತೆ ಮೆಲಾನಿಯಾ..!

2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!

500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

LEAVE A REPLY

Please enter your comment!
Please enter your name here