ಅತಿಯಾದ ಬೆವರು ಮತ್ತು ದುರ್ಗಂಧವೇ? ಕೇವಲ ₹20ಕ್ಕೆ ಸಿಗುವ ಸ್ಪಟಿಕವೇ ಪರಿಹಾರ!
ದೇಹ ಬೆವರುವುದು ಸಹಜ ಹಾಗೂ ಆರೋಗ್ಯಕರ. ಆದರೆ ಅತಿಯಾದ ಬೆವರು ಅಥವಾ ದುರ್ಗಂಧ ಬೆವರು ಆರೋಗ್ಯದ ಎಚ್ಚರಿಕೆಯ ಸಂಕೇತವಾಗಬಹುದು. ಬೇಸಿಗೆಯಲ್ಲಿ ಹೆಚ್ಚುವರಿ ತೊಂದರೆಯಾಗುವ ಬೆವರು ಚರ್ಮದ ಗುಳ್ಳೆಗಳು, ತುರಿಕೆ ಮತ್ತು ಬ್ಯಾಕ್ಟೀರಿಯಾ ಸೋಂಕಿಗೂ ಕಾರಣವಾಗಬಹುದು.
ಹೆಚ್ಚಿನವರು ಬೆವರಿನ ವಾಸನೆಯನ್ನು ತಡೆಯಲು ದುಬಾರಿ ಸುಗಂಧ ದ್ರವ್ಯಗಳು, ಡಿಯೋ ಬಳಕೆ ಮಾಡುತ್ತಾರೆ. ಆದರೆ ಇವು ತಾತ್ಕಾಲಿಕ ಪರಿಹಾರ. ದೀರ್ಘಕಾಲದ ನೈಸರ್ಗಿಕ ಪರಿಹಾರವನ್ನು ಕೇವಲ ₹20ಕ್ಕೂ ಸಿಗುವ ಸ್ಪಟಿಕ (Alum) ನೀಡುತ್ತದೆ.
ಸ್ಪಟಿಕದ ಪ್ರಯೋಜನಗಳು:
ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ.
ಚರ್ಮದ ರಂಧ್ರಗಳನ್ನು ಕುಗ್ಗಿಸಿ, ಬೆವರು ಉತ್ಪತ್ತಿ ಕಡಿಮೆ ಮಾಡುತ್ತದೆ.
ದುರ್ಗಂಧ ನಿವಾರಿಸಿ, ದೀರ್ಘಕಾಲ ತಾಜಾ ಭಾವ ನೀಡುತ್ತದೆ.
ರಾಸಾಯನಿಕ ಮುಕ್ತವಾಗಿದ್ದು, ಚರ್ಮಕ್ಕೆ ಹಾನಿ ಮಾಡುವುದಿಲ್ಲ.
ಅಗ್ಗದ ಮತ್ತು ಎಲ್ಲೆಡೆ ಲಭ್ಯ.
ಬಳಸುವ ವಿಧಾನ:
ಸ್ನಾನ ಮಾಡುವಾಗ: ಸ್ನಾನದ ನೀರಿನಲ್ಲಿ ಸಣ್ಣ ತುಂಡು ಸ್ಪಟಿಕ ಹಾಕಿ ಕರಗಲು ಬಿಡಿ, ನಂತರ ಆ ನೀರಿನಿಂದ ಸ್ನಾನ ಮಾಡಿ.
ನೇರ ಬಳಕೆ: ಸ್ವಲ್ಪ ತೇವಗೊಳಿಸಿ ಕಂಕುಳ, ಪಾದಗಳಿಗೆ ಉಜ್ಜಿಕೊಳ್ಳಿ.
ಪುಡಿ ರೂಪದಲ್ಲಿ: ಪುಡಿ ಮಾಡಿಕೊಂಡು ಹೆಚ್ಚು ಬೆವರು ಬರುವ ಭಾಗಗಳಿಗೆ ಹಚ್ಚಿ.
ಸ್ಪಟಿಕವು ದೇಹದ ಸ್ವಚ್ಛತೆ ಕಾಪಾಡುವುದಲ್ಲದೆ, ದುರ್ಗಂಧ ನಿಯಂತ್ರಿಸಿ ದಿನಪೂರ್ತಿ ತಾಜಾತನ ನೀಡುತ್ತದೆ. ದುಬಾರಿ ಡಿಯೋ ಮತ್ತು ಪರ್ಫ್ಯೂಮ್‌ಗಳಿಗಿಂತ ಇದು ಹೆಚ್ಚು ಪರಿಣಾಮಕಾರಿ, ಬಜೆಟ್ ಸ್ನೇಹಿ ಪರಿಹಾರವಾಗುತ್ತದೆ.