ಕರ್ನಾಟಕದ ಗಣಿಧಣಿ, ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರ ಏಕೈಕ ಪುತ್ರಿಯ ಮದುವೆಗೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ.. ಈಗಾಗ್ಲೇ ಜನಾರ್ಧನ್ ರೆಡ್ಡಿ ಅವರು ತನ್ನ ಮಗಳ ಮದುವೆಯ ಆಮಂತ್ರಣ ಪತ್ರಕ್ಕೆ 6 ಸಾವಿರ ಖರ್ಚು ಮಾಡಿದ್ರು. ಅಷ್ಟೇ ಅಲ್ಲ ರಾಜ್ಯದ ಜನತೆಗೆ ನೀಡಿದ ಆಮಂತ್ರಣ ಎಲ್ಲರ ಕೆಂಗಣ್ಣಿಗೆ ಗುರಿಯಾಯ್ತು.. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಆಮಂತ್ರಣ ವೀಡಿಯೋ ನೋಡಿದವರೆಲ್ಲಾ ಜನಾರ್ಧನ್ ರೆಡ್ಡಿ ಅವರ ಆಸ್ತಿಯ ಕುರಿತಾಗಿ ಮತ್ತೊಮ್ಮೆ ಪ್ರಶ್ನೆಗಳು ಮೂಡಿತು.. ಹಲವಾರು ಟೀಕೆಗಳು ಸಹ ಕೇಳಿ ಬಂದವು.. ಅವೆಲ್ಲಾ ಬಿಡಿ.. ಆದ್ರೆ ಈಗ ಎಲ್ಲರಿಗೂ ಒಂದು ಶಾಕಿಂಗ್ ನ್ಯೂಸ್ ಇದೆ ನೋಡಿ.. ತನ್ನ ಏಕೈಕ ಪುತ್ರಿಯ ವೈಭವಪೂರಿತ ಮದುವೆಯನ್ನು ರಾಜ್ಯದಲ್ಲೇ ಇನ್ಯಾರು ಮಾಡಿಲ್ಲ ಮುಂದೆಯೂ ಮಾಡೋಕೆ ಸಾಧ್ಯವಾಗ್ಬಾರ್ದು ಅನ್ನೋ ಪ್ಲಾನಿಂಗ್‍ನಲ್ಲಿ ಮದ್ವೆ ಮಾಡ್ತಾ ಇದಾರೆ..! ಅಷ್ಟಕ್ಕೂ ರೆಡ್ಡಿ ಈ ಮದ್ವೆಗೆ ಖರ್ಚು ಮಾಡ್ತಾ ಇರೋ ಒಟ್ಟು ಹಣ ಕೇಳೊಕು ಮುನ್ನ ನಿಮ್ಮ ಹಾರ್ಟ್ ಬೀಟ್ ಸ್ವಲ್ಪ ಚೆಕ್ ಮಾಡ್ಕೊಳ್ಳಿ..! ಯಾಕಂದ್ರೆ ರೆಡ್ಡಿ ಈ ಮದ್ವೆಗೆ ಖರ್ಚ್ ಮಾಡ್ತಾ ಇರೋ ಒಟ್ಟು ಹಣ ಐದಲ್ಲಾ.. ಹತ್ತಲ್ಲಾ.. ಸರ್..! ಬರೋಬ್ಬರಿ 180 ಕೋಟಿ..! ಶಾಕ್ ಆಯ್ತಾ..! ಆಗಿರ್ಲೇ ಬೇಕಲ್ವ..! ಯಾಕೆ ಇಷ್ಟೊಂದು ಹಣ ವ್ಯರ್ಥ ಮಾಡ್ತಾ ಇದಾರೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಬಂದ್ರೂ.. ಅದಕ್ಕೂ ನಮ್ಮಲ್ಲಿ ಉತ್ತರ ಇದೆ ನೋಡಿ.. ರೆಡ್ಡಿ ಅವರ ಏಕೈಕ ಪುತ್ರಿ ಬ್ರಹ್ಮಿಣಿ ಹುಟ್ಟಿದ ನಂತರವೇ ನೋಡಿ ರೆಡ್ಡಿ ಲಕ್ ಚೇಂಜ್ ಆದದ್ದು.. ಹೀಗಂತ ಸ್ವತಃ ರೆಡ್ಡಿ ಅವರೇ ತಮ್ಮ ಸ್ನೇಹಿತ ಬಂಧುಗಳತ್ರ ಹೇಳಿಕೊಂಡಿದ್ದಾರೆ..! ಹೀಗಾಗಿ ತಮಗಿರುವ ಏಕೈಕ ಲಕ್ಷ್ಮಿಯನ್ನು ಅದ್ಧೂರಿಯಾಗಿ ಮದ್ವೆ ಮಾಡಿಸ್ಬೇಕು ಅಂತಾನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ನ.16ಕ್ಕೆ ವಿವಾಹ ಮಹೋತ್ಸವ ಇಟ್ಟುಕೊಂಡಿರೋದು..
ಹೈದರಾಬಾದ್ನ ಟಾಕ್ ಪ್ರಕಾರವಾಗಿ ರೆಡ್ಡಿ ಮಗಳ ಮದ್ವೆ ಖರ್ಚು ಇನ್ನೂ ಹೆಚ್ಚಾಗಲೂ ಬಹುದು ಎಂದು ಹೇಳಿದ್ದಾರೆ. ಇಡೀ ಬಳ್ಳಾರಿಯ ಒಡಲನ್ನೇ ಅಗೆದು ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡ ಗಣಿಧಣಿ ಎಂದೇ ಪ್ರಸಿದ್ದಿಯಾದ ಜನಾರ್ಧನ್ ರೆಡ್ಡಿ ಆನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ತಮ್ಮ ಪ್ರದೇಶದ ಜನರಿಗೆ ಏನು ಉಪಯೋಗ ಮಾಡಿದ್ರೋ ಇಲ್ವೋ.. ತನಗೆ ಬೇಕಾದ ಸಕಲ ಸಂಪತ್ತನ್ನೂ ಕೊಳ್ಳೆ ಹೊಡೆದರು ಬಿಡಿ.. ರಾಜಕೀಯದಲ್ಲಿ ಜಾಸ್ತಿ ವೇಳೆ ಇರಲು ಸಾಧ್ಯವಾಗದೇ ಹೋದರೂ ಇದ್ದಂತಹ ಅವಧಿಯಲ್ಲಿ ಮಾಡಿಕೊಂಡ ಆಸ್ತಿ ಮಾತ್ರ ಹೇಳತೀರದು.. ಆಗ್ಲೇ ರೆಡ್ಡಿಗೆ ಶನಿ ಬಂದು ಹೆಗಲ ಮೇಲೆರಿದೆ ಅಂತ ಕಾಣತ್ತೆ.. ಮನೆಯಲ್ಲೇ ಇರ್ವಾಗ್ಲೇ ರೆಡ್ಡಿ ಮನೆಗೆ ಸಿಬಿಐ ದಾಳಿ ಮಾಡಿಯೇ ಬಿಟ್ರು.. ಆನಂತರ ನಡೆದ ಎಲ್ಲಾ ಡ್ರಾಮಾಗಳು ಇಡೀ ದೇಶಕ್ಕೆ ಗೊತ್ತು.. ಆದ್ರೆ ಅದು ಈಗ ಇತಿಹಾಸ ಅಷ್ಟೇ..! ಮತ್ತೆ ಹಳೆಯ ವರಸೆ ತೋರ್ಸೋಕೆ ಮುಂದಾಗಿರೋ ರೆಡ್ಡಿ ತನ್ನ ಮಗಳ ಅದ್ದೂರಿ ಮದುವೆ ಮಾಡೋ ಮೂಲಕ ಮತ್ತೆ ತಾನ್ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.. ಇದಕ್ಕಾಗಿ ಪ್ಯಾಲೆಸ್ ಗ್ರೌಂಡ್‍ನಲ್ಲಿ ಈಗಾಗ್ಲೇ ಸಕಲ ಸಿದ್ಧತೆಗಳೂ ಕೂಡ ನಡೀತಾ ಇದೆ.. ಹಂಪಿಯ ಐತಿಹಾಸಿಕ ವಿಜಯ ವಿಠಲನ ಅಸಲೀ ಮಂಟಪವೇ ನಾಚುವಂತೆ ನಿರ್ಮಾಣವಾಗಿರೋ ಗೋಪುರ ನೋಡಿದ್ರೆ ಒಮ್ಮಲೆ ನಿಬ್ಬೆರೆಗಾಗೋದಂತೂ ಗ್ಯಾರೆಂಟಿ.. ಈ ದೇವಾಲಯ ದಾಟಿ ಬಂದರೆ ಮುಂದೆ ಸಿಗೋದೆ ಒಂದು ಹಳ್ಳಿ.. ಅಂದ್ರೆ ಅಲ್ಲಿ ಒಂದು ಹಳ್ಳಿಯ ರೀತಿಯಲ್ಲಿ ಸೆಟ್‍ಗಳನ್ನು ನಿರ್ಮಿಸಿದ್ದಾರೆ.. ಅಥಿತಿಗಳ ಸ್ವಾಗತ ಪ್ರದೇಶವೇ ಈ ಹಳ್ಳಿ.. ಈ ಹಳ್ಳಿಯೊಳಗೆ ಎರಡು ಮನೆ ನಿರ್ಮಾಣ ಮಾಡಿದ್ದು ಒಂದು ವರ ರಾಜೀವ್ ರೆಡ್ಡಿ ಕುಟುಂಬಕ್ಕಾದರೆ ಇನ್ನೊಂದು ವಧು ಹಾಗೂ ಕುಟುಂಬ ಸದಸ್ಯರಿಗಾಗಿ. ಈ ಎರಡೂ ಮನೆಗೆ ತಗಲಿರುವ ಒಟ್ಟು ವೆಚ್ಚ ಸುಮಾರು 60 ಲಕ್ಷ ರೂ..! ಇಡೀ ಸೆಟ್ ಒಂದು ರೀತಿ ಹಳ್ಳಿ ಸೊಗಡಿನ ಟಚ್ ನೀಡತ್ತೆ. ಈ ಹಳ್ಳಿಯಲ್ಲಿ ಹತ್ತಾರು ಜಟಕಾ ಬಂಡಿ, ಎತ್ತಿನ ಬಂಡಿಗಳು ಇರತ್ತೆ.. ಅಲ್ಲಲ್ಲಿ ಸಣ್ಣ ಪುಟ್ಟ ಗುಡಿಸಲು, ಮನೆಗಳು ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ಪಂಚಾಯ್ತಿ ಕಟ್ಟೆ, ಅರಳಿಕಟ್ಟೆಗಳೂ ಕೂಡ ನಿರ್ಮಾಣ ಮಾಡಲಾಗಿದೆ..! ಎರಡೂ ದಾರಿಗಳ ಮಧ್ಯೆ ಸುಂದರ ಕಂಬಗಳೂ ಸಹ ಕಾಣ ಸಿಗುತ್ತೆ. ಈ ಎಲ್ಲಾ ಕಲಾಕೃತಿಗಳ ಕತೃ ನಮ್ಮ ಕರ್ನಾಟಕದ ಹೆಸರಾಂತ ಕಲಾವಿಧ ಶಶಿಧರ್ ಅಡಪ ಮತ್ತು ತಂಡದವರದ್ದು ಎನ್ನುವುದೇ ಒಂದು ವಿಶೇಷ.. ಇನ್ನು ವೈಭವಪೂರಿತ ವಿವಾಹ ಮಹೋತ್ಸವದಲ್ಲಿ ನೀರಿಗೆ ಯಾವುದೇ ತೊಂದರೆ ಬಾರದೇ ಇರಲಿ ಎಂಬ ಕಾರಣಕ್ಕಾಗಿ ಸುಮಾರು 80 ಕೋಟಿ ಹಣ ಮೀಸಲಿಟ್ಟಿದ್ದಾರೆ. ನಿಮಗಿನ್ನೊಂದು ವಿಷಯ ನೆನಪಿರ್ಲಿ.. ರೆಡ್ಡಿಯ ತವರೂರು ಬಳ್ಳಾರಿ ಮಹಾನಗರ ಪಾಲಿಕೆಯ ವಾರ್ಷಿಕ ಬಜೆಟ್ 184 ಕೋಟಿ.. ಆದರೆ ರೆಡ್ಡಿ ಹೆಚ್ಚುಕಮ್ಮಿ ಇದೇ ಮೊತ್ತದ ಬಜೇಟ್‍ನ್ನು ತನ್ನ ಮಗಳ ಮದುವೆ ಸಮಾರಂಭಕ್ಕೆ ವ್ಯಯ ಮಾಡ್ತಾ ಇದಾರೆ ಅಂದ್ರೆ.. ನೀವೇ ಆಲೋಚಿಸಿ.. ರೆಡ್ಡಿಯ ಸಂಪತ್ತಿಗೆ ಸವಾಲನ್ನ…!
ಏನಿದೆ ಮದ್ವೇಲಿ ವಿಶೇಷತೆ..?
ಮದ್ವೆ ಒಟ್ಟು ಬಜೆಟ್ 180 ಕೋಟಿಗೂ ಅಧಿಕ
ಬೆಂಗಳೂರಿನ ಪ್ಯಾಲೆಸ್ ಆವರಣದಲ್ಲಿ ನ.16ಕ್ಕೆ ವಿವಾಹ ಸಮಾರಂಭ
ಮಂಟಪಕ್ಕಿದೆ 2 ಎಂಟ್ರಿ 3 ಎಕ್ಸಿಟ್
6 ದಿನಗಳಿಂದ ನಡೆಯಲಿದೆ ಪೂಜೆ ಪುನಸ್ಕಾರ
ಹಂಪಿಯ ವಿಜಯ ವಿಠಲ ದೇಗುಲದ ಆಕೃತಿ ಪ್ಯಾಲೇಸ್ ಆವರಣದಲ್ಲಿ ನಿರ್ಮಾಣ
ಇದಕ್ಕಾಗಿ ಸುಮಾರು 35 ಎಕರೆ ಜಾಗ ಬಳಕೆ
ಹಂಪಿ ದೇವಾಲಯವನ್ನೂ ನಾಚಿಸುವಂತಿದೆ ನಕಲಿ ವಿಠಲ ಆಕೃತಿ
ಪ್ರತಿಕೃತಿಗೆ ತಗುಲಿದ ವೆಚ್ಚ 1 ಕೋಟಿ
Like us on Facebook The New India Times
POPULAR STORIES :
ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ
ಮಾಸ್ತಿಗುಡಿ ದುರಂತ: ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ಯಾರು ಗೊತ್ತಾ..?