ಈಗ ನಮ್ಮ ದೇಶದಲ್ಲಿ 500 ಮತ್ತು 1000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿಲ್ಲ. ಈಗೇನಿದ್ರೂ 500 ಮತ್ತು 2000 ಮುಖಬೆಲೆಯ ಹೊಸ ನೋಟುಗಳ ಹಾವಳಿ.. ನೋಟು ಚಲಾವಣೆಗೆ ಬಂದು ಇನ್ನು ಎರಡು ದಿನವೇ ಕಳೆದಿಲ್ಲ.. ಆಗ್ಲೇ ಹೊಸ ನೋಟಿನ ಬಗ್ಗೆ ಜನರಲ್ಲಿರೋ ಅಭಿಪ್ರಾಯಗಳು ವಿಭಿನ್ನವಾಗಿದೆ.. ಒಂದು ಕಡೆ ಕಪ್ಪು ಹಣ ಕೂಡಿಟ್ಟ ಕಾಳಧನಿಕರ ಸಂಕಟ ಹೇಳತೀರದಾದ್ರೆ.. ಇನ್ನೊಂದ್ಕಡೆ ಹೊಸ ನೋಟು ಪಡೆದ ಖುಷಿಯಲ್ಲಿ ಸಾಮಾನ್ಯ ಜನರು ನೋಟಿನ ಜೊತೆ ಸೆಲ್ಫಿ ತೆಗೆದುಕೊಳ್ಳೋದೇನು.. ಫೇಸ್ಬುಕ್, ವಾಟ್ಸಾಪ್‍ಗಳಲ್ಲಿ ಅಪ್ಲೋಡ್ ಮಾಡೋದೇನು..? ಇದಿಷ್ಟು ಒಂದು ಕಡೆಯಾದ್ರೆ ಇನ್ನೂ ಕೆಲವ್ರು ಹೊಸನೋಟಿನ ಬಗ್ಗೆ ಕುಲಂಕುಶವಾಗಿ ಕ್ರಾಸ್‍ಚೆಕ್ ಮಾಡಲು ಹೊರಟಿದ್ದಾರೆ.. ನೋಟುಗಳಲ್ಲಿ ಏನೇನು ತಪ್ಪಿದೆ ಎಂದು ಹುಡುಕಲು ಶುರುಮಾಡಿದ್ದಾರೆ..! ಹೀಗೆ ಸಂಪೂರ್ಣ ಹುಡುಕಾಟ ನಡೆಸಿರೋ ಜನರಿಗೆ ಒಂದಾದ್ರೂ ತಪ್ಪು ಸಿಕ್ತಾ ಅನ್ನೋ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.. 2000 ನೋಟಿನಲ್ಲಿ ತಪ್ಪು ಇದೆ ಅಂತಾರೆ ಜನ..! ಈ ನೋಟಿನಲ್ಲಿ ಹಿಂದಿ ಅಕ್ಷರದಲ್ಲಿ ಬರೆಯಲ್ಪಟ್ಟ 2000 ಎಂಬ ಪದದಲ್ಲಿ ಆರ್‍ಬಿಐ ತಪ್ಪಾಗಿ ನಮೂದಿಸಿದ್ದಾರಂತೆ..! ಹೊಸ ನೋಟಿನ ಮೇಲೆ ‘ದೋನ್ ಹಜಾರ ರುಪಯಾ’ ಅಂತ ಒಂದು ಕಡೆ ಮುದ್ರಿಸಿದ್ದರೆ ‘ದೋನ್ ಹಜಾರ್ ರುಪಯೇ’ ಅಂತ ಇನ್ನೊಂದು ಕಡೆ ನಮೂದಿಸಲಾಗಿದೆಯಂತೆ.. ಇದು ಆರ್‍ಬಿಐ ಮಾಡಿರೋ ದೊಡ್ಡ ಪ್ರಮಾದ ಅಂತ ತಿಳಿದ ಜಾಣ ಪ್ರಜೆಗಳು ಆ ನೋಟುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಟ್ಟಿದ್ದಾರೆ.. ಅಷ್ಟಕ್ಕೂ ಪ್ರಮಾದ ನಡೆದದ್ದಾದರೂ ಎಲ್ಲಿ ಅನ್ನೋ ಪ್ರಶ್ನೆಗೆ ಉತ್ತರ ಪ್ರಜೆಗಳ ತಿಳುವಳಿಕೆಯಲ್ಲಿ ಎನ್ನಬಹುದು.. ಯಾಕಂದ್ರೆ ದೋ ಹಜಾರ್ ರಪಯೇ ಅಂತಾ ಹಿಂದಿಯಲ್ಲಿ ಸರಿಯಾಗಿಯೇ ಬರೆಯಲಾಗಿದೆ.. ಜನರು ಗಮನಿಸಿದ್ದು ಮಾತ್ರ ಮರಾಠಿ ಮತ್ತು ಕೊಂಕಣಿ ಭಾಷೆಯ ಲಿಪಿಯನ್ನ..! ಅದನ್ನು ನೋಡಿದ ಜನರು ಹಿಂದಿ ಭಾಷೆಯಲ್ಲಿ ಪ್ರಮಾದವಾಗಿದೆ ಎಂದು ತಮ್ಮ ಬುದ್ದಿವಂತಿಕೆ ತೋರಿಸಲು ಹೊರಟಿದ್ದಾರೆ ಅಷ್ಟೆ..!
Like us on Facebook The New India Times
POPULAR STORIES :
ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!