ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಸಾವು..!

Date:

ದೇಶದಲ್ಲಿ ಬಳಕೆಯಲ್ಲಿರುವ ತಂಬಾಕು ಉತ್ಪನ್ನಗಳ ಸೇವನೆಯಿಂದ ವರ್ಷಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ಅಘಾತಕಾರಿ ವರದಿಯೊಂದು ಬೆಳಕಿಗೆ ಬಂದಿದೆ. ಹೀಗಿದ್ದರೂ ಕೂಡ ದೇಶದಲ್ಲಿ ತಂಬಾಕು ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ ಎನ್ನಲಾಗಿದೆ. ತಂಬಾಕು ಆರೋಗ್ಯಕ್ಕೆ ಹಾನಿಕರ.. ಧೂಮಪಾನ ಮಧ್ಯಪಾನ ಮಾಡುವುದರಿಂದ ಸಾವು ಸಂಭವಿಸುತ್ತೆ ಎಂಬಿತ್ಯಾದಿ ಜಾಗೃತಿ ಕಾರ್ಯವನ್ನು ಸರ್ಕಾರ ಕೈಗೊಂಡರೂ ಕೂಡ ಗುಟ್ಕ ಸೇವನೆಯ ಮಟ್ಟ ಕಡಿಮೆಯಾಗಲಿಲ್ಲ ಎಂಬುದೇ ದುರ್ದೈವ..! ತಂಬಾಕು ಬಳಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿರುವ ಭಾರತದಲ್ಲಿ ಸುಮಾರು 270 ದಶಲಕ್ಷ ಜನರು ತಂಬಾಕು ಸೇವನೆಯಲ್ಲಿ ನಿರತರಾಗಿದ್ದಾರೆ.. ಇದರ ಪಣಾಮವಾಗಿ ಪ್ರತಿ ವರ್ಷ 10 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಶೇ. 28 ರಷ್ಟು ಜನರು ತಂಬಾಕು ಸೇವನೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. ತಂಬಾಕು ಬಳಕೆಯಂದ ಸಾರ್ವಜನಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ಪ್ರಮಾಣದ ಹೊರೆ ಬೀಳಲಿದೆ ಎಂದರಿತ ಸರ್ಕಾರ ತಂಬಾಕು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಪದ್ದತಿಯನ್ನು ವಿಧಿಸಲು ನಿರ್ಧರಿಸಿದೆ.. ಇನ್ನು ದೇಶದಲ್ಲಿ ಶೇ.48 ರಷ್ಟು ಪುರುಷರು ಹಾಗೂ ಶೇ. 20ರಷ್ಟು ಮಹಿಳೆಯರು ಗುಟ್ಕಾ, ಧೂಮಪಾನ, ಮಧ್ಯಪಾನ ಮುಂತಾದ ತಂಬಾಕು ವ್ಯಸನಿಗಳಿಗೆ ಬಲಿಯಾಗಿದ್ದು ಇದರಿಂದ ವರ್ಷಕ್ಕೆ 10 ಲಕ್ಷ ಜನ ಸಾವನ್ನುಪ್ಪುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

Like us on Facebook  The New India Times

POPULAR  STORIES :

2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?

ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...