ಒಂದೇ ಕಡೆ ಕುಳಿತರೆ ಹೊಟ್ಟೆ ಬೊಜ್ಜು ಕರಗುತ್ತಾ? ಅಸಲಿ ಸತ್ಯ ತಿಳಿದುಕೊಳ್ಳಿ!
ಇಂದಿನ ಜೀವನಶೈಲಿಯಲ್ಲಿ ಆಹಾರ ಸೇವನೆ ಹೆಚ್ಚುತ್ತಿರುವುದರಿಂದ ದೇಹದ ಆಕಾರದಲ್ಲಿ ಬದಲಾವಣೆ ಸಾಮಾನ್ಯವಾಗಿದೆ. ಆದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಹೆಚ್ಚಿದರೆ ಆತ್ಮವಿಶ್ವಾಸ ಮತ್ತು ಮನಶಾಂತಿ ಎರಡೂ ಹಾಳಾಗಬಹುದು. ಜಿಮ್‌ಗೆ ಹೋಗದೆ, ಕೇವಲ ಕುಳಿತುಕೊಂಡೇ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು ಎಂಬ ಪ್ರಶ್ನೆ ಹಲವರಿಗೆ ಉದಯವಾಗುತ್ತದೆ. ತಜ್ಞರು ಹೇಳುವಂತೆ, ಕೆಲವು ಸರಳ ವ್ಯಾಯಾಮಗಳು ಮತ್ತು ಅಭ್ಯಾಸಗಳು ಇದಕ್ಕೆ ಸಹಕಾರಿ.
ಕುರ್ಚಿಯಲ್ಲಿ ಕುಳಿತು ಮಾಡುವ ವ್ಯಾಯಾಮ
ಕುರ್ಚಿಯ ಕೊನೆಯಲ್ಲಿ ಕುಳಿತು ಕೈಗಳನ್ನು ತಲೆಯ ಹಿಂಭಾಗದಲ್ಲಿ ಲಾಕ್ ಮಾಡಿ.
ಬೆನ್ನು ನೇರವಾಗಿರಲಿ.
ಸ್ವಲ್ಪ ಮುಂದಕ್ಕೆ ಬಾಗಿ ಎದೆನ್ನು ಮಂಡಿಗಳ ಕಡೆಗೆ ತನ್ನಿರಿ.
ಉಸಿರನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಡುತ್ತಾ ಚಲನೆಯನ್ನು ಮುಂದುವರಿಸಿ.
ಒಟ್ಟಾರೆ 3 ಸೆಟ್ – ಪ್ರತಿ ಸೆಟ್ಗೆ 15 ಬಾರಿ ಮಾಡಿದರೆ ಹೊಟ್ಟೆಯ ಭಾಗದ ಪೇಶಿಗಳಿಗೆ ಒತ್ತಡ ನೀಡಲಾಗುತ್ತದೆ ಮತ್ತು ಕೊಬ್ಬು ಕರಗಲು ಸಹಾಯ ಮಾಡುತ್ತದೆ.
ಬಟರ್ಫ್ಲೈ ಭಂಗಿ (ಬದ್ದ ಕೋಣಾಸನ)
ನೆಲದಲ್ಲಿ ಆರಾಮವಾಗಿ ಕುಳಿತು ಕಾಲುಗಳನ್ನು ಮುಂದಕ್ಕೆ ಚಾಚಿ.
ಮಂಡಿಗಳನ್ನು ಮಡಚಿ ಎರಡೂ ಪಾದಗಳನ್ನು ಸೊಂಟದ ಬಳಿ ತನ್ನಿ.
ಎರಡೂ ಪಾದಗಳನ್ನು ಕೈಗಳಿಂದ ಹಿಡಿದು, ಮಂಡಿಗಳನ್ನು ಚಿಟ್ಟೆಯ ರೆಕ್ಕೆಗಳಂತೆ ಮೇಲಕ್ಕೆ–ಕೆಳಕ್ಕೆ ಆಡಿಸಿ.
ಈ ಆಸನವು ಸೊಂಟದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ ಮಾನಸಿಕ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.
ನೇರವಾಗಿ ಕುಳಿತುಕೊಳ್ಳುವ ಅಭ್ಯಾಸ
ಯಾವಾಗಲೂ ನೇರವಾಗಿ ಕುಳಿತುಕೊಳ್ಳುವ ಅಭ್ಯಾಸ ಮಾಡಿ.
ಆರೋಗ್ಯ ತಜ್ಞರ ಪ್ರಕಾರ, ನೇರವಾಗಿ ಕುಳಿತುಕೊಳ್ಳುವುದರಿಂದ ದಿನಕ್ಕೆ ಸುಮಾರು 350 ಕ್ಯಾಲೋರಿಗಳು ಕರಗುತ್ತವೆ.
ದೀರ್ಘಕಾಲ ಪಾಲಿಸಿದರೆ ಹೊಟ್ಟೆಯ ಕೊಬ್ಬು ಕಡಿಮೆಯಾಗಲು ಸಹಕಾರಿ.
ನೀರನ್ನು ಹೆಚ್ಚಾಗಿ ಕುಡಿಯಿರಿ
ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ಎದುರಾಗುತ್ತದೆ.
ನೇರವಾಗಿ ಕುಳಿತು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮೆಟಾಬಾಲಿಸಂ ಚುರುಕಾಗುತ್ತದೆ.
ಇದರಿಂದ ಸೊಂಟದ ಭಾಗದಲ್ಲಿನ ಕೊಬ್ಬು ಕಡಿಮೆಯಾಗಲು ಸಹಾಯವಾಗುತ್ತದೆ.
ವ್ಯಾಯಾಮಕ್ಕೆ ಸಮಯ ಇಲ್ಲದೇ ಇರುವವರು ಕೂಡ ಸರಿಯಾದ ಕುಳಿತ ಭಂಗಿ, ನೀರು, ಮತ್ತು ಸರಳ ಯೋಗಾಸನಗಳ ಮೂಲಕ ಹೊಟ್ಟೆಯ ಕೊಬ್ಬನ್ನು ಹಂತಹಂತವಾಗಿ ಕಡಿಮೆ ಮಾಡಬಹುದು. ನಿರಂತರ ಅಭ್ಯಾಸ ಮುಖ್ಯ.






