ಅಳಿಸಲಾಗದ ಶಾಯಿ ಬಳಸಬೇಡಿ : ಚುನಾವಣಾ ಆಯೋಗ

Date:

ನೋಟು ಬದಲಾವಣೆಯ ವೇಳೆ ಜನರ ಕೈ ಬೆರಳುಗಳಿಗೆ ಬಳಸಲಾಗ್ತಾ ಇರುವ ಅಳಿಸಲಾಗದ ಶಾಹಿಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಶಾಹಿ ಬಳಕೆಯ ಕುರಿತು ಹಣಕಾಸು ಸಚಿವಾಲಕ್ಕೆ ಪತ್ರ ಬರೆದಿರುವ ಚುನಾವಣಾ ಆಯೋಗ ಗ್ರಾಹಕರ ಕೈ ಬೆರಳುಗಳಿಗೆ ಹಾಕಲಾಗ್ತಾ ಇರೋ ಅಳಿಸಲಾಗದ ಶಾಹಿಯನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. 500 ಮತ್ತು 1000 ಮುಖಬೆಲೆಯು ಹಳೆಯ ನೋಟುಗಳು ನಿಷೇಧಿಸಿದ ನಂತರ ಬ್ಯಾಂಕ್‍ಗಳಲ್ಲಿ ಜನರು ಕ್ಯೂ ನಿಂತಿದ್ದಾರೆ. ಬ್ಯಾಂಕುಗಳಲ್ಲಿ ಜನರ ಒತ್ತಡಗಳನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ಕಪ್ಪು ಹಣ ಇತರೆ ವ್ಯಕ್ತಿಗಳಿಂದ ಬದಲಾವಣೆಯಾಗುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರ ಹೆಬ್ಬೆರಳುಗಳಿಗೆ ಶಾಹಿ ಹಾಕುವ ಮಾರ್ಗವನ್ನು ಕಂಡುಕೊಂಡಿತ್ತು.
ಆದರೆ ಮುಂದಿನ ವರ್ಷದಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ನವೆಂಬರ್ 19ರಂದು ಮಧ್ಯಪ್ರದೇಶ ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ವೇಳೆ ಮತದಾರರ ಎಡಗೈ ತೋರುಬೆರಳ ಮೇಲೆ ಶಾಹಿ ಹಾಕಲಾಗುತ್ತದೆ. ಆದ್ದರಿಂದ ಬ್ಯಾಂಕ್‍ಗಳಲ್ಲಿ ಬಳಸಲಾಗುತ್ತಿರುವ ಅಳಿಸಲಾಗದ ಶಾಹಿಯನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.

Like us on Facebook  The New India Times

POPULAR  STORIES :

ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...