ಸೆನ್ಸೆಕ್ಸ್ ನಮ್ಮ ದೇಶದ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವವನ್ನು ಬೀರುತ್ತದೆ ಗೊತ್ತಾ.?

Date:

ಆರ್ಥಿಕ ಮಾರುಕಟ್ಟೆಯ ಸೂಚ್ಯಂಕವು ನಮ್ಮ ದೇಶದ ಅರ್ಥ ವ್ಯವಸ್ಥೆಯ ಗಾತ್ರ, ಸ್ವಭಾವ ಹಾಗೂ ಸಾಮರ್ಥ್ಯವನ್ನು ವಿಶ್ಲೇಷಿಸುವ ಒಂದು ಮಾಪನ; ಆದರೆ, ಜಾಗತಿಕ ಆರ್ಥಿಕ ಮುಗ್ಗಟ್ಟಿನ (ರಿಸೆಷನ್) ಸಂದರ್ಭದಲ್ಲಿ ಇದು ಮಾನ್ಯವಾಗುವುದಿಲ್ಲ.
ಸೆನ್ಸೆಕ್ಸ್ ಅಥವಾ ನಿಫ್ಟಿ ಸೂಚ್ಯಂಕ ಮೇಲಕ್ಕೆ ಹೋದಲ್ಲಿ, ಹೂಡಿಕೆದಾರರ ಸಂಪತ್ತು ಹೆಚ್ಚಾಗುತ್ತದೆ. ಒಂದು ವೇಳೆ, ಅದು ಕೆಳಗೆ ಬಂದಲ್ಲಿ, ಹೂಡಿಕೆದಾರರ ಸಂಪತ್ತು ಕಡಿಮೆಯಾಗುತ್ತದೆ. ಭಾರತದಲ್ಲಿ, ಆರ್ಥಿಕ ಮಾರುಕಟ್ಟೆಯಲ್ಲಿ ಗಮನಾರ್ಹವಾಗಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಹಾಗೂ ಸಣ್ಣ ಹೂಡಿಕೆದಾರರು ಆರ್ಥಿಕ ಮಾರುಕಟ್ಟೆಯಲ್ಲಿ ತೊಡಗಿರುತ್ತಾರೆ. ಆದರೆ ಸಮಯ ಸಂದರ್ಭಕ್ಕನುಗುಣವಾಗಿ ಅವರ ಹೂಡಿಕೆಯಲ್ಲಿ ವ್ಯತ್ಯಾಸವಾಗಬಹುದು.
ದೇಶದಲ್ಲಿ ಎಲ್ಲಾ ಹೂಡಿಕೆದಾರ, ಹೂಡಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತಿದ್ದ ಪಕ್ಷದಲ್ಲಿ, ಮಾರುಕಟ್ಟೆಯ ಸೂಚ್ಯಂಕದಲ್ಲಿನ ಹೆಚ್ಚಳವು ಅವರನ್ನು ನಿಜವಾಗಿಯೂ ಲಾಭದಾಯಕವಾಗಿಸುವುದು, ದೇಶದ ಹೂಡಿಕೆದಾರರ ಲಾಭಾಂಶವು ನಮ್ಮ ದೇಶವನ್ನು ಅರ್ಥಿಕವಾಗಿ ಸಂಪದ್ಭರಿತ ದೇಶವನ್ನಾಗಿಸುವುದು.
ಸ್ಟಾಕ್ ಮಾರುಕಟ್ಟೆಯ ಸೂಚ್ಯಂಕವು ಮುಂದಕ್ಕೆ ಚಲಿಸುತ್ತಾ ಹೋದಂತೆ, ವಿದೇಶಿ ಹೂಡಿಕೆದಾರರ ವಿಶ್ವಾಸ ಹೆಚ್ಚಾಗುವುದು ಹಾಗೂ ಅವರು ಸಕ್ರಿಯವಾಗಿ ನಮ್ಮ ದೇಶದ ಹೂಡಿಕೆಯತ್ತ ಆಕರ್ಷಿತರಾಗುತ್ತಾರೆ ಹಾಗೂ ಶೇರು ಹಾಗೂ ಬಾಂಡುಗಳಲ್ಲಿ ತಮ್ಮ ಹಣ ತೊಡಗಿಸುತ್ತಾರೆ. ವಿದೇಶದಿಂದ ನಮ್ಮ ದೇಶದೊಳಗೆ ಬರುವ ಹಣದ ಪ್ರವಹಿಸುವಿಕೆಯು ದೇಶದ ಆರ್ಥಿಕತೆಯಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ.
ಶೇರು ಮಾರುಕಟ್ಟೆಯ ಸೂಚ್ಯಂಕದಲ್ಲಿನ ಹೆಚ್ಚಳವು ನಮ್ಮ ದೇಶದ ಕಂಪನಿಗಳಿಗೆ ಬಾಂಡ್ ಗಳು ಹಾಗೂ ಪಬ್ಲಿಕ್ ಇಶ್ಯೂ(IPO)ಮೂಲಕ ತಮ್ಮ ಭಂಡವಾಳವನ್ನು ಹೆಚ್ಚಿಸುವಂತೆ ಮಾಡುತ್ತದೆ; ಕಂಪನಿಯು ಬಂಡವಾಳವನ್ನು ಹೆಚ್ಚಿಸಿದಲ್ಲಿ ಇದು ದೇಶದ ಆರ್ಥಿಕತೆಯಲ್ಲಿ ಒಳ್ಳೆಯ ಪರಿಣಾಮ ಬೀರುತ್ತದೆ.
ಶೇರು ಮಾರುಕಟ್ಟೆಯಲ್ಲಿನ ಸೂಚ್ಯಂಕದಲ್ಲಿನ ಇಳಿತವು ದೇಶದ ಆರ್ಥಿಕತೆ ಮೇಲೆ, ಕೆಟ್ಟ ಪರಿಣಾಮ ಬೀರುತ್ತದೆ.

Like us on Facebook  The New India Times

POPULAR  STORIES :

ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...