ಅರ್ನಬ್ ಗೋಸ್ವಾಮಿ.. ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ನೇರ ಮಾತಿನಿಂದಲೇ ದೇಶ ವಿದೇಶದಾದ್ಯಂತ ಅತೀ ಹೆಚ್ಚು ಪ್ರಚಾರತೆ ಗಿಟ್ಟಿಸಿಕೊಂಡವರು. ಹಲವಾರು ರಾಜಕೀಯ ವ್ಯಕ್ತಿಗಳ ಬಣ್ಣ ಬಯಲು ಮಾಡಿ ಅವರ ಕೆಂಗಣ್ಣಿಗೆ ಗುರಿಯಾದವರು.. ದೇಶದ ಹೆಸರಾಂತ ಸುದ್ದಿವಾಹಿನಿ ‘ಟೈಮ್ಸ್ ನೌ’ ನಲ್ಲಿ ಸುಮಾರು 10 ವರ್ಷಗಳ ಕಾಲ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ‘ನ್ಯೂಸ್ ಹವರ್’ ಕಾರ್ಯಕ್ರಮದ ಮೂಲಕ ಕೋಟ್ಯಾಂತರ ಪ್ರೇಕ್ಷಕ ವರ್ಗವನ್ನು ಸೃಷ್ಠಿ ಮಾಡಿದ್ದ ಇವರು ಕಳೆದ ನವೆಂಬರ್ 1ರಂದು ಇದ್ದಕ್ಕಿದ್ದ ಹಾಗೆ ರಾಜಿನಾಮೆಯನ್ನು ಕೊಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದರು. ನೇರ, ದಿಟ್ಟ ಹಾಗೂ ಪ್ರಭಾವಶಾಲಿ ಮಾತುಗಾರರಾದ ಅರ್ನಬ್ ಗೋಸ್ವಾಮಿಯ ಈ ಸುದ್ದಿ ಕೇಳಿ ಇಡೀ ದೇಶದ ಜನ ಮೂಕ ಪ್ರೇಕ್ಷಕರಾಗಿ ಹೋದರು. ಆದರೂ ಪ್ರಖ್ಯಾತ ನ್ಯೂಸ್ ಡಿಬೇಟ್ ಕಾರ್ಯಕ್ರಮವಾದ ನ್ಯೂಸ್ ಹವರ್ ಮುಂದುವರೆಸುವುದಾಗಿ ಹೇಳಿಕೊಂಡರೂ ಕೂಡ ಅಲ್ಲಿಯೂ ಕೂಡ ಹೆಚ್ಚು ದಿನ ಅರ್ನಬ್ ಇರೋದಿಲ್ಲ. ಯಾಕಂದ್ರೆ ಇದೇ ಶುಕ್ರವಾರ ಅರ್ನಬ್ ಟೈಮ್ಸ್ ಹವರ್ ನಿರೂಪಕ ವೃತ್ತಿಯಿಂದ ಕೆಳಗಿಳಿಯಲಿದ್ದಾರೆ..! ಇನ್ನು ದೇಶದ ಅದೆಷ್ಟೋ ಜರ್ನಲಿಸ್ಟ್ ಗಳಿಗೆ ಮಾದರಿಯಾಗಿರುವ ಅರ್ನಬ್ ಅವರನ್ನು ಬೀಳ್ಕೊಡಲು ಟೈಮ್ಸ್ ನೌ ಸಂಸ್ಥೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳು ನಡೆಸುತ್ತಿದ್ದರೆ, ಇನ್ನೊಂದೆಡೆ ಅರ್ನಬ್ ಸ್ಥಾನವನ್ನು ತುಂಬುವ ಇನ್ನೋರ್ವ ಗೋಸ್ವಾಮಿ ಯಾರು ಎಂಬ ಚಿಂತೆಯಲ್ಲಿದ್ದಾರೆ..! ಅವರಷ್ಟೇ ಅಲ್ಲ ಇಡೀ ವಿಶ್ವದ ಜನರ ಪ್ರಶ್ನೆಯೂ ಹೌದು..!
ಆದರೆ ಕೆಲವೊಂದು ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅರ್ನಬ್ ಜಾಗಕ್ಕೆ ಮತ್ತೋರ್ವ ನಿರೂಪಕನನ್ನು ಟೈಮ್ಸ್ ನೌ ಈಗಾಗಲೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಹೊರ ಬಂದಿದೆ.. ಅದ್ಯಾರು ಅಂತೀರಾ..? ಅರ್ನಬ್‍ರಂತೆಯೇ ನೇರ ಮಾತುಗಾರ, ತಮ್ಮ ಮಾತಿನ ಶೈಲಿಯ ಮೂಲಕವೇ ಅನೇಕ ರಾಜಕೀಯ ವ್ಯಕ್ತಿಗಳ ಬೆವರಿಳಿಸಿದ್ದ ಯುವ ಪ್ರತಿಭೆ ‘ನ್ಯೂಸ್ ಎಕ್ಸ್’ ನ ಸಂಪಾದಕ ‘ರಾಹುಲ್ ಶಿವಶಂಕರ್’.. ಹೌದು ಇವರೇ ಟೈಮ್ಸ್ ನೌ ಸಂಸ್ಥೆಯ ಮುಂದಿನ ಪ್ರಧಾನ ಸಂಪಾದಕ..! ಈ ಕುರಿತಾಗಿ ಸ್ವತಃ ಟೈಮ್ಸ್ ನೌ ಸುದ್ದಿವಾಹಿನಿ ಎಡಿಟರ್ ಚಾಂದಿನಿ ಎ ದಬಾಸ್ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ..
ಟೈಮ್ಸ್ ನೌನಲ್ಲಿ ಅರ್ನಬ್ ಗೋಸ್ವಾಮಿ ಅವರೊಂದಿಗೆ ಕೆಲಸ ನಿರ್ವಹಿಸಿದ್ದ ರಾಹುಲ್ ದೇಶದ ಪ್ರಖ್ಯಾತ ನ್ಯೂಸ್ ಚಾನಲ್‍ಗಳಾದ ಇಂಡಿಯಾ ಟುಡೆ, ಹೆಡ್‍ಲೈನ್ಸ್ ಟುಡೆ, ಹಾಗೂ ನ್ಯೂಸ್ ಎಕ್ಸ್ ವಾಹಿನಿಗಳ ಉನ್ನತ ಹುದ್ದೆ ಅಲಂಕರಿಸಿಕೊಂಡವರು. ಸುಮಾರು 20 ವರ್ಷಗಳ ಜರ್ನಲಿಸಂ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಮುಂದಿನ ಡಿಸೆಂಬರ್ 15ರಂದು ಟೈಮ್ಸ್ ನೌ ಸಂಸ್ಥೆಗೆ ಪದಾರ್ಪಣೆ ಮಾಡಲಿದ್ದಾರೆ. ಅಲ್ಲದೇ ಅರ್ನಬ್ ಅವರ ಸ್ಥಾನವನ್ನು ಕೂಡ ಅಂದೆ ಅಲಂಕರಿಸಿಕೊಳ್ಳಲಿದ್ದಾರೆ. ಹೀಗಾಗಿ ಅರ್ನಬ್ ಸ್ಥಾನಕ್ಕೆ ಬರೋದಾದ್ರೂ ಯಾರು..? ಎಂಬ ಕೋಟ್ಯಾಂತರ ಭಾರತೀಯರಿಗೆ ಈಗ ಉತ್ತರ ಸಿಕ್ಕಿದಂತಾಗಿದೆ.
Like us on Facebook The New India Times
POPULAR STORIES :
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!
ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!