500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ನಂತರ ಜನ ಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಬ್ಯಾಂಕ್ ಮತ್ತು ಎಟಿಎಂಗಳಲ್ಲದೇ ದೇಶದ ಸುಮಾರು 2500 ಪೆಟ್ರೋಲ್ ಬಂಕ್‍ಗಳಲ್ಲೂ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಈಗ ಮತ್ತೊಂದು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ.. ಅದೆನಪ್ಪಾ ಅಂದ್ರೆ ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಹಣ ವಿತ್ ಡ್ರಾ ಮಾಡಿಕೊಳ್ಬೋದು. ಹಣದ ಅಗತ್ಯವಿದ್ದರೆ ಬಿಗ್ ಬಜಾರ್ ಮಳಿಗೆಗೆ ತೆರಳಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿದ್ರೆ ನಿಮಗೆ 2000 ಹಣ ಸಿಗುತ್ತೆ ನೋಡಿ..
ಎಟಿಎಂ ಮತ್ತು ಬ್ಯಾಂಕ್‍ಗಳಲ್ಲಿ ಹೆಚ್ಚುತ್ತಿರುವ ಕ್ಯೂನಿಂದ ಪರ್ಯಾಯ ಮಾರ್ಗ ಕಂಡುಕೊಂಡ ಕೇಂದ್ರ ಸರ್ಕಾರ ಬಂಕ್‍ಗಳಲ್ಲಿ ಹಣ ಬದಲಾವಣೆ ಮಾಡಿಕೊಳ್ಳುವ ಕಾರ್ಯ ಕೈಗೊಂಡಿತ್ತು. ಆದರೆ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಗ್ ಬಜಾರ್‍ಗಳೊಂದಿಗೆ ಟೈಯಪ್ ಮಾಡಿಕೊಂಡು ದೇಶದ ಸುಮಾರು 258 ಬಿಗ್‍ಬಜಾರ್ ಮಳಿಗೆಗಳಲ್ಲಿ ಜನರಿಗೆ ಹಣ ಡ್ರಾ ಮಾಡಿಕೊಡಲು ಅವಕಾಶ ಮಾಡಿಕೊಟ್ಟಿದೆ. ಈ ಕಾರ್ಯ ಬುಧವಾರದಿಂದಲೇ ಕಾರ್ಯರಂಭಗೊಳ್ಳಲಿದ್ದು, ನಿಮ್ಮ ಡೆಬಿಟ್ ಅಥವಾ ಎಟಿಎಂ ಕಾರ್ಡ್ ಸ್ವೈಪ್ ಮಾಡಿಕೊಳ್ಳುವುದರ ಮೂಲಕ ಹಣ ಪಡೆಯಬಹುದು ಎಂದು ಬಿಗ್ ಬಜಾರ್ ಸಿಇಒ ಕಿಶೋರ್ ಬಿಯಾನಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.
Like us on Facebook The New India Times
POPULAR STORIES :
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!
ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!