ಹೆಚ್ಚಿನ ರೋಗಗಳಲ್ಲೂ ನಾವು ಬಿಳಿ ಹಾಗೂ ಕೆಂಪು ಈರುಳ್ಳಿಗಳೆರಡನ್ನು ಉಪಯೋಗಿಸಬಹುದು. ಆದರೆ, ಕೆಲವೊಂದು ಔಷಧಿಗಳಲ್ಲಿ ಬಿಳಿ ನೀರುಳ್ಳಿಯನ್ನು ವಿಶೇಷವಾಗಿ ಬಳಸಲಾಗುತ್ತದೆ. ನೀರುಳ್ಳಿಯನ್ನು ಶಾಸ್ತ್ರದ ದೃಶ್ಟಿಯಿಂದ ನೋಡಿದಲ್ಲಿ ಇದಕ್ಕೊಂದು ತಾಮಸ ಆಹಾರದ ಸ್ಥಾನವನ್ನು ನೀಡಲಾಗಿದೆ. ಆದರೆ ನಾವು ಔಷಧೀಯ ದೃಷ್ಟಿಯಿಂದ ನೋಡಿದಲ್ಲಿ ಇದೊಂದು ದಿವ್ಯ ಔಷಧಿಯೇ ಸರಿ. ಪ್ರತಿ ನಿತ್ಯ ಪೂರ್ಣ ಭೋಜನದ ರೂಪದಲ್ಲಿ ನೀರುಳ್ಳಿಯನ್ನು ಸೇವಿಸುವುದು ಅಷ್ಟು ಉತ್ತಮವಲ್ಲದಿದ್ದರೂ, ಔಷಧೀಯ ರೂಪದಲ್ಲಿ ಮಧ್ಯ ಮಧ್ಯ ಇದನ್ನು ಸೇವಿಸುವುದು ಉತ್ತಮ, ನೀರುಳ್ಳಿಯ ಮುಖ್ಯ ತೊಂದರೆ ಏನೆಂದರೆ, ಇದೊಂದು ದುರ್ವಾಸನೆಯಿಂದ ಕೂಡಿರುವುದಾಗಿದೆ, ಇದಕ್ಕಾಗಿ ನೀರುಳ್ಳಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ,೨ ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು, ಆಮೇಲೆ ತೆಗೆದು ಉಪಯೋಗಿಸಿದಲ್ಲಿ ದುರ್ವಾಸನೆ ಸಂಪೂರ್ಣ ಇಲ್ಲವಾಗುತ್ತದೆ.
ನಿಮಗೆ ಚರ್ಮದ ತೊಂದರೆ ಇದ್ದಲ್ಲಿ ಅಥವಾ ತುರಿಕೆ ಇದ್ದಲ್ಲಿ, ಬಿಳಿ ನೀರುಳ್ಳಿಯ ರಸವನ್ನು ತೆಗೆದು ಅದರ ಜೊತೆಗೆ ಕಹಿಬೇವಿನ ರಸವನ್ನು ಸೇರಿಸಿ ಹಚ್ಚಿದಲ್ಲಿ ನಿಮಗೆ ಒಳ್ಳೆಯ ಪರಿಣಾಮ ಸಿಗುತ್ತದೆ.
ಸನ್ ಸ್ಟ್ರೋಕ್ ತೊಂದರೆಯಿದ್ದವರು, ತಮ್ಮ ಜೇಬಿನಲ್ಲಿ ಯಾವಾಗಲೂ ಈ ನೀರುಳ್ಳಿಯ ತುಂಡನ್ನಿರಿಸಿಕೊಂಡಲ್ಲಿ ಆ ತೊಂದರೆಯಿಂದ ತಮ್ಮನ್ನು ಕಾಪಾಡಿಕೊಳ್ಳಬಹುದು. ಕಿವಿಯಲ್ಲಿ ಯಾರಿಗೆ ತೊಂದರೆಯಿದೆಯೋ, ಕಿವಿಯಲ್ಲಿ ಯಾರಿಗೆ ಇನ್ಫೆಕ್ಷನ್ ಅಥವಾ ಫಸ್ ಆಗಿರುತ್ತದೋ ಅಂತಹವರು, ಈ ನೀರುಳ್ಳಿಯ ರಸವನ್ನು ತೆಗೆದು ಸ್ವಲ್ಪ ಬೆಚ್ಚಗೆ ಮಾಡಿ ೪- ೪ ಬಿಂದು ಕಿವಿಯಲ್ಲಿ ಹಾಕಿಕೊಂಡಲ್ಲಿ , ಕಿವಿ ನೋವು ಕಡಿಮೆಯಾಗುವುದಲ್ಲದೆ, ಕಿವಿಯಲ್ಲಿರುವ ಫಸ್ ಹೊರಹೋಗುತ್ತದೆ.
ಯಾರಿಗೆ ಉದರ ಸಂಬಂಧಿ ತೊಂದರೆಯಿದೆಯೋ, ಅಜೀರ್ಣ, ಮಲಬದ್ದತೆಯಾಗಿದೆಯೋ ಅಂತಹವರು, ಈ ನೀರುಳ್ಳಿಯ ಎಲೆಗಳನ್ನು ಚಟ್ನಿ ಮಾಡಿ ಕೆಲವು ದಿನಗಳ ತನಕ ನಿಯಮಿತ ರೂಪದಲ್ಲಿ ಸೇವಿಸಿದಲ್ಲಿ, ಅಜೀರ್ಣ ಮಲಬದ್ದತೆ ದೂರವಾಗುತ್ತದೆ, ಹೊಟ್ಟೆಯಲ್ಲಿ ಭಯಾನಕ ನೋವಿದ್ದಾಗ, ಯಾವುದೇ ಔಷಧಿ ಮಾಡಲು ತೋಚದಿದ್ದಾಗ, ನೀರುಳ್ಳಿಯ ರಸಕ್ಕೆ ಸ್ವಲ್ಪ ಹಿಂಗು ಸೇರಿಸಿ ಲೇಪನ ಮಾಡಿಕೊಳ್ಳಿ, ಇದರಿಂದಾಗಿ ಹೊಟ್ಟೆ ನೋವಿನಿಂದ ಆರಾಮ ಸಿಗುತ್ತದೆ, ಅಲ್ಲದೆ ನೀರುಳ್ಳಿಯ ರಸಕ್ಕೆ ಸ್ವಲ್ಪ ಇಂಗು ಹಾಗೂ ಸೇಂದಾ ಲವಣ ಸೇರಿಸಿ ಸೇವಿಸಿದಲ್ಲಿ ಹೊಟ್ಟೇ ನೋವು ಶಮನವಾಗುತ್ತದೆ. ಮಲಬದ್ದತೆ ಅಥವಾ ಪೈಲ್ಸ್ ಸಮಸ್ಯೆಗೆ ನೀರುಳ್ಳಿಯ ರಸಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಸೇವಿಸಿದಲ್ಲಿ ಪರಿಹಾರವಾಗುತ್ತದೆ.
ಇಂದಿನ ಸಮಯದಲ್ಲಿ ಮಹಾಮಾರಿಯಂತೆ ಕಾಡುವ ನಪುಂಸಕತೆಯನ್ನು ಹೋಗಲಾಡಿಸುವಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಇದು ಕಾಮಶಕ್ತಿಯನ್ನು ಹೆಚ್ಚಿಸಲು ಉಪಯೋಗಿಸಲ್ಪಡುತ್ತದೆ. ಮಧ್ಯಮ ಗಾತ್ರದ ಮೂರು ನಿರುಳ್ಳಿಯನ್ನು ತೆಗೆದುಕೊಂಡು ಅದನ್ನು ೨೫೦-೩೦೦ ಗ್ರಾಂ ಹಾಲಿನ ಜೊತೆ ಮಂದ ಉರಿಯಲ್ಲಿ ಬೇಯಿಸಬೇಕು. ಪಾಕ ದಪ್ಪಗಾಗುತ್ತಿದ್ದಂತೆ,ಇದನ್ನು ತುಪ್ಪದ ಜೊತೆ ಮಂದ ಉರಿಯಲ್ಲಿ ಹುರಿಯಬೇಕು, ಆಗ ಇದು ಹಲ್ವದಂತೆ ರೆಡಿಯಾಗುತ್ತದೆ, ಬಳಿಕ, ಇದನ್ನು ೩-೪ ಚಮಚ ಜೇನು ಸೇರಿಸಿ ಸೇವಿಸಿದಲ್ಲಿ, ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.
ಕಾಮಾಲೆ ರೋಗಕ್ಕೆ ಇದು ಉತ್ತಮ ಔಷಧಿ. ಯಾರಿಗೆ ಕಾಮಾಲೆ ರೋಗವಿದೆಯೋ ಅವರಿಗೆ ೩-೪ ಚಮಚ ನೀರುಳ್ಳೀಯ ರಸವನ್ನು ನಿಯಮಿತ ರೂಪದಲ್ಲಿ ಕುಡಿಸಿದಲ್ಲಿ,ಇದರ ನಿವಾರಣೆಯಾಗುತ್ತದೆ. ಯಾರ ಲಿವರ್ ನ ಗಾತ್ರ ದೊಡ್ದದಾಗಿರುತ್ತದೋ ಅಂತಹವರು ಈ ರಸವನ್ನು ಬ್ಲಾಕ್ ಸಾಲ್ಟ್ ಜೊತೆಯಲ್ಲಿ ಕೆಲವು ಹನಿಗಳಷ್ಟು ಲಿಂಬೆಹಣ್ಣಿನ ರಸವನ್ನು ಹಿಂಡಿ ಕುಡಿದಲ್ಲಿ ಪರಿಹಾರ.
- ಸ್ವರ್ಣಲತ ಭಟ್
Like us on Facebook The New India Times
POPULAR STORIES :
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!