ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನೀತಿಯನ್ನು ಖಂಡಿಸಿ ಇಂದು ದೇಶದಾದ್ಯಂತ ಭಾರತ್ ಬಂದ್ ಆಚರಿಸಲಾಗ್ತಾ ಇದೆ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕೇಂದ್ರದ ನಡೆಯನ್ನು ಖಂಡಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ ಆಕ್ರೋಶ ದಿವಸ್‍ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಪ್ರದೇಶಗಳಲ್ಲಿ ಬಂದ್‍ಗೆ ಯಾವುದೇ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿದ ಕಾರಣ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ದೊರೆಯಿತು. ಆಟೋ ಬಸ್ ರೈಲ್ವೇ ಹಾಗೂ ಮೆಟ್ರೋ ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇನ್ನು ಬೆಂಗಳೂರಿನ ಕೆಆರ್ ಮಾರ್ಕೆಟ್, ಮಲ್ಲೇಶ್ವರಂ ಸೇರಿದಂತೆ ಇತರೆ ಭಾಗಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಜೋರಾಗಿಯೇ ನಡೆಯುತ್ತಿತ್ತು. ಮೆಜೆಸ್ಟಿಕ್ ಬಸ್ ಹಾಗೂ ರೈಲ್ವೇ ನಿಲ್ದಾಣದಲ್ಲಿ ಎಂದಿಗಿಂತ ಇಂದು ಆಟೋ ಮತ್ತು ವಾಹನ ಸಂಚಾರ ಹೆಚ್ಚಾಗಿರೋದು ಕಂಡು ಬಂದಿದೆ. ಇನ್ನು ಜಿಲ್ಲಾದ್ಯಂತ ಆಕ್ರೋಶ ದಿವಸ್‍ಗೆ ಬೆಂಬಲ ದೊರಕದ ಕಾರಣ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಒಟ್ಟಾರೆಯಾಗಿ ಆಕ್ರೋಶ ದಿವಸ್‍ಗೆ ಜನ ಬೆಂಬಲ ದೊರಕದ ಕಾರಣ ಪ್ರಧಾನಿ ಮೋದಿ ಅವರಿಗೆ ಮುನ್ನಡೆಯಾಗಿದೆ.
Like us on Facebook The New India Times
POPULAR STORIES :
ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ