ನೋಟು ರದ್ದು ಮಾಡಿದ ನಂತರ ನೌಕರರಿಗೆ ಮೊದಲ ಸಂಬಳ ದಿನ ಇನ್ನೇನು ಬಂದೇ ಬಿಟ್ತು. ಆಗಲೇ ಹಣದ ಕೊರತೆಯ ಸಮಸ್ಯೆಯನ್ನು ಬ್ಯಾಂಕ್‍ಗಳು ಅನುಭವಿಸುತ್ತಿವೆ..! ಡಿಸೆಂಬರ್ 1ರಂದು ಸಂಬಳದ ಹಣ ಪಡೆಯಲು ನೌಕರರ ವರ್ಗ ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವ ನಿರೀಕ್ಷೆ ಹೆಚ್ಚಿದ್ದು ಬ್ಯಾಂಕ್‍ನಲ್ಲಿ ಹಣ ಪೂರೈಕೆಯಾಗದ ಕಾರಣ ಹಣ ನೀಡಲು ಸಮಸ್ಯೆಯಾಗಬಹುದು ಎಂಬ ಆತಂಕ ಬ್ಯಾಂಕ್ ಅಧಿಕಾರಿಗಳದ್ದು..!
ಬಹುತೇಕ ಕಛೇರಿ ಹಾಗೂ ಕಾರ್ಖಾನೆಗಳಲ್ಲಿ ನೌಕರರಿಗೆ ಸಂಬಳ ವಿತರಣೆಯನ್ನು ಬ್ಯಾಂಕ್‍ಗಳ ಮೂಲಕವೇ ನಡೆಯುತ್ತಿದೆ. ನೌಕರರರೂ ಕೂಡ ಬ್ಯಾಂಕ್ ಸಾಲ, ಮನೆ ಬಾಡಿಗೆ, ರೇಷನ್ ಹಾಗೂ ಇತರೆ ದಿನನಿತ್ಯ ವಸ್ತುಗಳ ಖರಿದಿಗಾಗಿ ತಮ್ಮ ಸಂಬಳವನ್ನೆ ಎದುರು ನೋಡ್ತಾ ಇದ್ದಾರೆ. ಆದರೆ ಬ್ಯಾಂಕ್‍ಗಳಲ್ಲಿ ಮಾತ್ರ ಬೇಕಾದಷ್ಟು ಹೊಸ ನೋಟುಗಳು ಪೂರೈಕೆಯಾಗಿಲ್ಲ. ಹಾಗಾಗಿ ನೌಕರರ ಸಂಬಳದ ಮೇಲೂ ನೋಟ್ ಬ್ಯಾನ್ ಬಿಸಿ ತಟ್ಟುವ ಸಂಬವ ಹೆಚ್ಚಿದೆ ಎನ್ನಲಾಗ್ತಾ ಇದೆ.
ಬ್ಯಾಂಕ್‍ಗಳಲ್ಲಿ ಬಹುತೇಕ ವ್ಯವಹಾರ ಹಣದ ಮೂಲಕವೇ ನಡೆಯುತ್ತಿದ್ದು, ಸಂಬಳಕ್ಕಾಗಿ ದುಡಿಯುತ್ತಿರುವ ಅಧಿಕಾರಿಗಳು ಹಾಗೂ ನೌಕರರು ಹಣ ಡ್ರಾ ಮಾಡಲು ಬ್ಯಾಂಕ್ ಹಾಗೂ ಎಟಿಎಂಗಳ ಬಳಿ ಕ್ಯೂ ನಿಲ್ಲುವ ಅನಿವಾರ್ಯತೆ ಬರಬಹುದು. ಇನ್ನು ನೋಟು ಕೊರತೆ ಇರುವುದನ್ನು ಸ್ವತಃ ಬ್ಯಾಂಕ್ ಅಧಿಕಾರಿಗಳೆ ಒಪ್ಪಿಕೊಂಡಿದ್ದು, ಅಗತ್ಯ ಪ್ರಮಾಣದ ಸರಬರಾಜು ಇಲ್ಲದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ..!
ಸರ್ಕಾರ ಯದ್ದೋಪಹಾದಿಯಲ್ಲಿ ನೋಟ್ ಬ್ಯಾನ್ ಮಾಡಿ ಕೆಲವು ದೊಡ್ಡ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಮಾತ್ರ ಅಗತ್ಯವಿರುವ ಹಣವನ್ನು ಸರಬರಾಜು ಮಾಡಿವೆ. ಆದರೆ ಇನ್ನು ಹಲವಾರು ಬ್ಯಾಂಕ್‍ಗಳಲ್ಲಿ ಅಗತ್ಯ ಪ್ರಮಾಣದ ಹಣ ಸರಬರಾಜಾಗದೇ ಜನರು ಬ್ಯಾಂಕ್ ನೌಕರರ ವಿರುದ್ದ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಜನರ ತಾಳ್ಮೆ ಪರೀಕ್ಷಿಸಿದಂತಾಗುತ್ತದೆ ಎಂದು ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿ ಸಂಘದ ಅಧ್ಯಕ್ಷ ಏಕನಾಥ ಬಾಳಿಗ ತಿಳಿಸಿದ್ದಾರೆ.
Like us on Facebook The New India Times
POPULAR STORIES :
ಯಶ್-ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವಿಡಿಯೋ ರಿಲೀಸ್.!
ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ