ತಮಿಳುನಾಡು ಸಿಎಂ ಜಯಲಲಿತಾ ಇನ್ನಿಲ್ಲ..!

Date:

ತಮಿಳುನಾಡು ಸಿಎಂ ಜಯಲಲಿತಾ ಸೋಮವಾರ ರಾತ್ರಿ 11.30ಕ್ಕೆ ನಿಧನರಾಗಿದ್ದಾರೆ. ಅವರ ಮೃತದೇಹವನ್ನು ರಾಜಾಜಿ ಹಾಲ್ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿರಿಸಲಾಗಿದ್ದು ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಹೃದಯಾಘಾತದಿಂದ ಗಂಭೀರ ಸ್ಥಿತಿಯಲ್ಲಿದ್ದ ತಮಿಳುನಾಡು ಸಿಎಂ ಜೆ.ಜಯಲಲಿತಾ ಅವರು  ಚೆನ್ನೈನ ಪ್ರಖ್ಯಾತ ಅಪೋಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ..!
ಸುಮಾರು 74 ದಿನಗಳ ಕಾಲ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದ ಸಿಎಂ ಜಯಲಲಿತಾ ಅವರು ಭಾನುವಾರ ಸಂಜೆ ಆಹಾರದಲ್ಲಿ ಏರುಪೇರಿನಿಂದ ಹೃದಯಘಾತ ಸಂಬವಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಅಲ್ಲದೆ ಇಂದು ಬೆಳಿಗ್ಗೆ ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಇಸಿಎಂಒ ಯಂತ್ರದ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗಿತ್ತು. ಆದರೆ ಲಂಡನ್ ಮೂಲದ ವೈದ್ಯ ರಿಚರ್ಡ್ ಬಿಯಲ್ ಕೂಡ ಜಯಲಿತಾ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದಿದ್ದರು. ಆದರೆ ಈಗ ಸಿಎಂ ಜಯಲಲಿತಾ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜಯಾ ಸಾವಿನಿಂದ ರಾಜ್ಯದಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ 1 ಲಕ್ಷಕ್ಕೂ ಅಧಿಕ ಪೊಲೀಸ್ ಹಾಗೂ ಮಿಲಿಟರಿ ಕ್ಯಾಂಪ್‍ನಿಂದ ಭದ್ರತೆ ಒದಗಿಸಲಾಗಿದ್ದು, ತಮಿಳುನಾಡಿನಾದ್ಯಂತ ಸ್ವಂಯಂಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಇನ್ನು ಸಿಎಂ ಜಯಲಿಲತಾ ಸಾವಿನ ಸುದ್ದಿ ಕೇಳಿದಂತೆ ತಮಿಳುನಾಡಿನಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದ್ದು, ಗಣ್ಯಾತಿ ಗಣ್ಯರು ಅಪೋಲೋ ಆಸ್ಪತ್ರೆ ಬಳಿ ದಾವಿಸಿದ್ದಾರೆ. ಜಯಾ ಅವರ ಸಾವಿನಿಂದಾಗಿ ತಮಿಳುನಾಡಿನಲ್ಲಿ ಆಕ್ರಂದನ ಹೆಚ್ಚಾಗಿರುವ ಹಿನ್ನಲೆಯಲ್ಲಿ ಹೊರ ರಾಜ್ಯದ ಬಸ್‍ಗಳು ತಮಿಳುನಾಡು ಕಡೆಗೆ ಪ್ರಯಾಣ ನಿಲ್ಲಿಸಿದ್ದು, ಬದಲಿ ಮಾರ್ಗದಲ್ಲಿ ಪ್ರಯಾಣ ಬೆಳೆಸುವಂತೆ ಅಯ್ಯಪ್ಪ ಭಕ್ತರಿಗೆ ತಿಳಿಸಲಾಗಿದೆ.

https://youtu.be/Bm_Gf09eiMY

Like us on Facebook  The New India Times

POPULAR  STORIES :

ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?

ಎಚ್ಚರ ಗ್ರಾಹಕರೇ..! ಜಸ್ಟ್ 6 ಸೆಂಕೆಂಡ್‍ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗುತ್ತೆ..!!

ಬಿಗ್‍ಬಾಸ್‍ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?

ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?

ರಸ್ತೆ ಮೇಲೆ 2 ಸಾವಿರದ ಹೊಸ ನೋಟು ಬಿದ್ದಿದ್ರೆ ನೀವೇನ್ ಮಾಡ್ತಿರಾ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...