ಹರ್ಷ ನಿರ್ದೇಶನದ ‘ರಾಣ‘ಗೆ ನೋ ಎಂದ ರಾಕಿಭಯ್..!! ಈ ಚಿತ್ರದಲ್ಲಿ ನಟಿಸ್ತಾರಂತೆ ಈ ಸ್ಟಾರ್ ನಟ!!
ಕೆಜಿಎಫ್ ಸಿನಿಮಾ ಸಕ್ಸಸ್ ಆದ ಬಳಿಕ ಯಶ್ ಇಮೇಜ್ ಬದಲಾಗಿದೆ.. ಹೀಗಾಗೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚು ನಿಗಾವಹಿಸಿಬೇಕಾಗಿದೆ.. ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ನ ಮುಂದಿನ ಸಿನಿಮಾಗಳ ಬಗ್ಗೆ ಇಡೀ ದೇಶವೇ ಬೆರಗುಗಣ್ಣಿನಿಂದ ನೋಡುವ ಟೈಮ್ ಶುರುವಾಗಿದೆ.. ಹೀಗಾಗೆ ಕೆಜಿಎಫ್ ಬಳಿಕ ಯಶ್ ಆಯ್ಕೆ ಮಾಡಿಕೊಳ್ಳುವ ಸಿನಿಮಾ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ..
ನಿಮಗೆಲ್ಲ ಗೊತ್ತಿರುವ ಹಾಗೆ ಕೆಜಿಎಫ್ ಸಕ್ಸಸ್ ಆಗುತ್ತಿದ್ದ ಹಾಗೆ ಕಿರಾತಕ-2 ಗೆ ಬ್ರೇಕ್ ಹಾಕಲಾಗಿದೆ.. ಇಷ್ಟೆ ಅಲ್ಲದೆ ಯಶ್ ಈ ಹಿಂದೆ ಕಥೆಯನ್ನ ಓಕೆ ಮಾಡಿ ಒಪ್ಪಿಕೊಂಡ ಸಿನಿಮಾಗಳ ಲೀಸ್ಟ್ ಹಾಗೆ ಡೈರೆಕ್ಟರ್ ಗಳು ಬದಲಾಗುತ್ತಿದ್ದಾರೆ.. ಸದ್ಯ ಇದೇ ಸಾಲಿಗೆ ಎ.ಹರ್ಷ ನಿರ್ದೇಶನ ಮಾಡಬೇಕಿದ್ದ ‘ರಾಣ‘ ಕೂಡ ಸೇರಿಕೊಳ್ತಿದೆ..
ಕಳೆದ ವರ್ಷ ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಘೋಷಣೆಯಾಗಿದ್ದ ಸಿನಿಮಾ ಇದು.. ಆದರೆ ಈಗ ಈ ಚಿತ್ರಕ್ಕೆ ನೋ ಎಂದುಬಿಟ್ಟಿದ್ದಾರೆ ಯಶ್.. ಇದರಿಂದ ಬೇರೆ ದಾರಿಯಿಲ್ಲದೆ ಹರ್ಷ ತನ್ನ ಕಥೆಗೆ ಬೇರೆ ನಾಯಕನನ್ನ ಆಯ್ಕೆ ಮಾಡಿಕೊಂಡಿದ್ದಾರೆ…
ಹ್ಯಾಟ್ರಿಕ್ ಹೀರೊ ಜೊತೆಗೆ ಹ್ಯಾಟ್ರಿಕ್ ಹೊಡಿತಾರಂತೆ ಹರ್ಷ..!!?
ಹೌದು, ಯಶ್ ರಾಣ ಚಿತ್ರದಿಂದ ಹೊರನಡೆದ ಮೇಲೆ ಸೀದಾ ಇದೇ ಸ್ಕ್ರೀಪ್ ಶಿವಣ್ಣ ಬಳಿ ಬಂದಿದ್ಯಂತೆ.. ಇನ್ನು ಶಿವಣ್ಣ ಅವರೇ ರಾಣ ಆಗಲ್ಲಿದ್ದಾರೆ ಅನ್ನೋ ಮಾತು ಗಾಂದಿನಗರದಲ್ಲಿದ್ದು, ಹರ್ಷಗೆ ಈ ಸಿನಿಮಾ ಮೂಲಕವಾದ್ರು ಒಂದೊಳ್ಳೆ ಬ್ರೇಕ್ ಸಿಗಲಿದ್ಯ ಅನ್ನೋದನ್ನ ಕಾದು ನೋಡ್ಬೇಕು..