8 ವರ್ಷ ವಿಶ್ವ ಸುತ್ತಿ ವೈಲ್ಡ್ ಟೈಗರ್ ರಮ್ ಪರಿಚಯಿಸಿದ ಯುವಕ..!

Date:

ಭಾರತದ ರಮ್ ವಿದೇಶಗಳಲ್ಲೂ ಜನಪ್ರಿಯವಾಗಿವೆ…! 8 ವರ್ಷ ವಿಶ್ವ ಸುತ್ತಿ ಈ ರಮ್ ಅನ್ನು ಮಾರಕಟ್ಟೆ ಪರಿಚಯಿಸಿದ ಯುವಕ ಯಶಸ್ವಿ ಉದ್ಯಮಿಯಾದ ಕಥೆಯಿದು.
ಅವರು ಕೊಯಮತ್ತೂರು ಮೂಲದ ಗೌತಮ್. ಏನಾದರು ಹೊಸದನ್ನು ಮಾಡಬೇಕೆಂಬ ತುಡಿತ..! ಬಣ್ಣ ಬಣ್ಣದ ಕನಸುಗಳೊಂದಿಗೆ ಸಾಗಿತ್ತು ಅವರ ಪಯಣ..! 2006ರಲ್ಲಿ ತಮ್ಮ ಫ್ಯಾಮಿಲಿಯ ಲಿಕ್ಕರ್ ಉದ್ಯಮಕ್ಕೆ ಕೈ ಜೋಡಿಸಿದ್ರು..! ಈ ಉದ್ಯಮದಲ್ಲಿ ಹೊಸದನ್ನೇನಾದರು ಮಾಡಬೇಕು..! ವಿಭಿನ್ನವಾದ ಲಿಕ್ಕರ್‍ಅನ್ನ ಉ ಮಾರುಕಟ್ಟೆಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದರು…!


ಅದಕ್ಕಾಗಿ ವಿಶ್ವದ ನಾನಾ ಕಡೆಗಳಲ್ಲಿ ಮದ್ಯಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಸುಮಾರು 8 ವರ್ಷಗಳ ಕಾಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹೆಚ್ಚು ಕಡಿಮೆ 500 ಬಗೆಯ ರಮ್‍ಗಳ ರುಚಿ ನೋಡಿದ್ರು..! ಆಮೇಲೆ ತಾವೇ ಪ್ರಯೋಗಗಳನ್ನು ಮಾಡಲಾರಂಭಿಸಿದ್ರು.. ತುಂಬಾ ಪ್ರಯೋಗಗಳನ್ನು ಮಾಡಿ ಕೊನೆಗೊಂದು ವಿಶಿಷ್ಟವಾದ ರಮ್ ಅನ್ನು ತಯಾರಿಸಿ, ‘ವೈಲ್ಡ್ ಟೈಗರ್’ಎಂದು ನಾಮಕಾರಣ ಮಾಡಿ ಮಾರುಕಟ್ಟೆಗೆ ಪರಿಚಯಿಸಿದ್ರು..!


ಅದು 2016 ಫೆಬ್ರವರಿ ಯುಎಇ, ಅಮೆರಿಕಾ, ಡೆನ್ಮಾರ್ಕ್‍ಗಳಲ್ಲಿ ವೈಲ್ಡ್ ಟೈಗರ್ ಬಿಡುಗಡೆಯಾಯ್ತು..! ರುಚಿಯೂ ವಿಭಿನ್ನ..ಇದರ ಬಾಟಲಿ ಹಾಗೂ ಪ್ಯಾಕೆಟ್ ಶೈಲಿಯೂ ವಿನೂತನವಾಗಿದೆ. ಹುಲಿಯ ಚರ್ಮದ ಪಟ್ಟೆ ಪಟ್ಟೆ ಬಣ್ಣವನ್ನು ಇದಕ್ಕೆ ನೀಡಿದ್ದಾರೆ..!
ಅಮೆರಿಕಾ, ಫ್ರಾನ್ಸ್, ಇಂಗ್ಲೆಂಡ್, ಕೆನಡಾ, ಥಾಯ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಗಳಲ್ಲಿ ಜನಪ್ರಿಯವಾಗಿದೆ. ಈ ಉದ್ಯಮದಲ್ಲಿ ಬರ್ತಾ ಇರುವ ಲಾಭದಲ್ಲಿ ಶೇ.10ರಷ್ಟನ್ನು ಗೌತಮ್ ಹುಲಿಗಳ ಸಂರಕ್ಷಣಗೆ ಬಳಸುತ್ತಿದ್ದಾರೆ.


ಹತ್ತಾರು ವರ್ಷದ ನಿರಂತರ ಪರಿಶ್ರಮ, ಪ್ರಯೋಗಗಳಿಂದ ಗೌತಮ್ ವೈಲ್ಡ್ ಟೈಗರ್ ರಮ್ ಅನ್ನು ಮಾರುಕಟ್ಟೆಗೆ ತಂದಿದ್ದು, ಸಿಕ್ಕಾಪಟ್ಟೆ ಜಪ್ರಿಯವಾಗಿರೋ ಅಮೆರಿಕಾದ ರಮ್‍ಗಳನ್ನು ಮೀರಿಸುವಂತೆ ಮಾರುಕಟ್ಟೆಯನ್ನು ತನ್ನದಾಗಿಸಿಕೊಳ್ಳುತ್ತಾ ಮುನ್ನುಗಿದೆ ಭಾರತದ ಈ ರಮ್.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...