ಹಲವರು ಹೇಳೋ ಪ್ರಕಾರ ಆಲೂಗಡ್ಡೆಯಿಂದ ಶರೀರದ ತೂಕ ಹೆಚ್ಚುತ್ತದಂತೆ,ಅದಕ್ಕಾಗಿ ಜನರು ಆಲೂಗಡ್ಡೆ ತಿನ್ನುವುದರಿಂದ ತಪ್ಪಿಸಿಕೊಳ್ಳುತ್ತಾರೆ.ಆದ್ರೆ ನಿಜ ವಿಷ್ಯ ವೇನೆಂದರೆ ಆಲೂಗಡ್ಡೆಯಲ್ಲಿ ಕಡಿಮೆ ಕ್ಯಾಲರಿ ಇರುತ್ತದೆ,ಆದ್ರೆ ಇದನ್ನು ಕರಿದು ತಿನ್ನುವುದರಿಂದ ಇದ್ರಲ್ಲಿರೋ ಕ್ಯಾಲರಿ ಪ್ರಮಾಣ ಹೆಚ್ಚುತ್ತದೆ,ಹಾಗೂ ಇದರಿಂದ ಶರೀರದ ತೂಕವು ಹೆಚ್ಚುತ್ತದೆ.
ಸಾಮಾನ್ಯವಾಗಿ ಆಲೂಗಡ್ಡೆಯ ಸಿಪ್ಪೆ ತೆಗೆದು ತಿನ್ನಲಾಗುತ್ತದೆ,ಆದ್ರೆ ಡಯಟೀಶನ್ ಹೇಳೋ ಪ್ರಕಾರ ಸಿಪ್ಪೆಯನ್ನು ತೆಗೆಯದೆ ಆಲೂಗಡ್ಡೆಯನ್ನು ಸೇವಿಸಿದಲ್ಲಿ ಶರೀರಕ್ಕೆ ಇದರಿಂದ ತುಂಬಾ ಉಪ್ಯೋಗವಿದೆ ಅನ್ನುತ್ತಾರೆ.ಅಷ್ಟೇ ಅಲ್ಲ ಇದನ್ನು ಮತ್ತೆ ಮತ್ತೆ ಬಿಸಿ ಮಾಡುವುದನ್ನು ತಪ್ಪಿಸಬೇಕು ಯಾಕಂದ್ರೆ ಮತ್ತೊಮ್ಮೆ ಬಿಸಿ ಮಾಡುವುದರಿಂದ ಇದರಲ್ಲಿ ಟಾಕ್ಸಿನ್ ಹುಟ್ಟಿಕೊಳ್ಳುತ್ತವೆ ಅಂತಾರೆ.ನಿತ್ಯ ಆಲೂ ತಿನ್ನೋದರ ಒಳಿತು ಕೆಡುಕಗಳ ಬಗ್ಗೆ ನೋಡೋಣ ಬನ್ನಿ.
-ಆಲೂಗಡ್ಡೆಯಲ್ಲಿರೋ ಪೊಟ್ಯಾಷಿಯಂ B.P ನಿಯಂತ್ರಣದಲ್ಲಿಡಲು ಸಹಕಾರಿ
-ಇದ್ರಲ್ಲಿರೋ ಫಾಸ್ಫರಸ್ ಹಲ್ಲು ನೋವಿಗೆ ಉಪಯುಕ್ತ.
-ಆಲೂಗಡ್ಡೆಯಲ್ಲಿ ಫೈಬರ್ ಇರೋದ್ರಿಂದ ಇದು ಮಲಬದ್ದತೆಯನ್ನುನಿಯಂತ್ರಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ.
-ಹೇರಳ ಕ್ಯಾಲ್ಷಿಯಂ ಒಳಗೊಂಡಿರೋ ಈ ವಸ್ತುವಿನ ಸೇವನೆಯಿಂದ ಮಾಂಸ ಪೇಶಿಗಳು ಮಜಬೂತ್ ಆಗುತ್ತವೆ.
-ವಿಟಾಮಿನ್ B6 ಒಳಗೊಂಡಿರೋ ಕಾರಣದಿಂದ ಇದು ಮಿದುಳಿನ ಶಕ್ತಿಯನ್ನು ಹೆಚ್ಚಿಸಿ ನೆನಪು ಶಕ್ತಿಯನ್ನು ತೀವ್ರ ಗೊಳಿಸುತ್ತದೆ.
ಅಲೂ ಗಡ್ಡೆಯ ಸೈಡ್ ಇಫೆಕ್ಟ್ಸ್ಏನೆಂದು ನೋಡೋಣವೇ??
-ಇದ್ರಲ್ಲಿರೋ ಕಾರ್ಬೋಹೈಡ್ರೇಟ್ ಬ್ಲಡ್ ಶುಗರ್ ಮಿತಿಯನ್ನು ಹೆಚ್ಚಿಸಿ ಸಕ್ಕರೆ ಕಾಯಿಲೆಗೆ ಆಮಂತ್ರಣ ವನ್ನೀಯುತ್ತದೆ.
-ಅಲೂಗಡ್ಡೆ ಕರಿದು ತಿನ್ನುವುದರಿಂದ ಇದ್ರಲ್ಲಿರೋ ಕ್ಯಾಲರಿ ಪ್ರಮಾಣ ಹೆಚ್ಚುತ್ತದೆ ಹಾಗೂ ಶರೀರದ ತೂಕ ಹೆಚ್ಚುತ್ತದೆ.
-ಇದರಲ್ಲಿ ಸ್ಟಾರ್ಚ್ ಪ್ರಮಾಣ ಅಧಿಕವಾಗಿರೋ ಕಾರಣ ಹೆಚ್ಚು ಅಲೂ ಸೇವನೆಯಿಂದ ವಾಯು ಬಾಧೆ ಶುರುವಾಗುತ್ತದೆ.
-ಹಾರ್ವರ್ಡ್ ಸ್ಕೂಲ್ ನ ರಿಸರ್ಚ್ ಹೇಳಿಕೆಯಂತೆ, ವಾರದಲ್ಲಿ 4 ಬಾರಿಗಿಂತಲೂ ಹೆಚ್ಚು ಆಲೂ ಸೇವಿಸಿದಲ್ಲಿ ನಿಮ್ಮ B.P ಹೆಚ್ಚಾಗೋ ಸಂಭವವಿದೆ.
-ಮೆಯೋ ಕ್ಲಿನಿಕ್ ರಿಸರ್ಚ್ ಹೇಳಿಕೆಯಂತೆ ಆಲೂಗಡ್ಡೆಯ ಅಧಿಕ ಸೇವನೆಯಿಂದ ಅಲರ್ಜಿಯಂತಹ ತೊಂದರೆಗಳು ನಮ್ಮನ್ನು ಬಾಧಿಸಬಹುದು.
ಯಾವ ರೀತಿಯಲ್ಲಿ ಆಲೂಗಡ್ಡೆ ಸೇವಿಸಿದಲ್ಲಿ ಉತ್ತಮ ವೆಂದು ನೋಡಿ.
–ಆಲೂಗಡ್ಡೆಯನ್ನು ಬೇಕ್ ಮಾಡಿ ತಿನ್ನಿ ಇದ್ರಿಂದ ಇದ್ರಲ್ಲಿರೋ ನ್ಯೂಟ್ರಿಯೆಂಟ್ಸ್ ನಷ್ಟವಾಗಲಾರದು.
-ಇದನ್ನು ಉಪ್ಪು ಹಾಕಿ ಬೇಯಿಸಿ,ಅಥವಾ ಆಲಿವ್ ಎಣ್ಣೆಯಲ್ಲಿ ಕರಿದು ತಿನ್ನಿ.
-ಅಲೂಗಡ್ಡೆಯನ್ನು ಕರಿಯುವ ಬದಲು ಬೇಯಿಸಿ,ಹಾಗೂ ಇದರ ಜೊತೆಗೆ ಉಪ್ಪು ಅಥವಾ ಮೊಸರು ಹಾಕಿ ತಿನ್ನಿ ಇದರಿಂದ ಇದ್ರಲ್ಲಿರೋ ಕ್ಯಾಲರಿ ಹೆಚ್ಚಾಗುವುದಿಲ್ಲ.
-ಇದನ್ನು ಬೇಯಿಸಿ ಸಲಾಡ್ ಜೊತೆಯಲ್ಲಿ ಮಿಶ್ರಮಾಡಿ ಸೇವಿಸುವುದರಿಂದ ಹೆಚ್ಚು ನ್ಯೂಟ್ರೀಷನ್ಸ್ ಸಿಗುತ್ತದೆ.
-ಬೇಯಿಸಿದ ಆಲೂವನ್ನು ತರಕಾರಿ ಜೊತೆಯಲ್ಲಿ ಮಿಶ್ರ ಮಾಡಿ ತಿನ್ನಿ.
ಅತೀಯಾದದ್ದು ಅಮೃತ ವಾದ್ರೂ ಅದು ವಿಷವಾಗಿ ಪರಿಣಮಿಸುತ್ತದೆ ಎಂದು ತಿಳಿದವರು ಹೇಳುತ್ತಾರೆ ಅದಕ್ಕಾಗಿ ಯಾವುದೇ ಒಂದು ವಸ್ತು ಶರೀರಕ್ಕೆ ತುಂಬಾ ಒಳ್ಳೆಯದು ಎಂದು ತಿಳಿದ ತಕ್ಷಣ ಅದನ್ನೇ ನಿತ್ಯ ಸೇವಿಸೊವ್ರಿದ್ದಾರೆ,ಅಂತಹವರಿಗಾಗಿ ಈ ಕಿವಿ ಮಾತು.ಯಾವುದನ್ನೇ ತಿನ್ನಿ,ಆದ್ರೆ ಎಲ್ಲಾದಕ್ಕೂ ಒಂದು ಲಿಮಿಟ್ ಇರ್ಲಿ ಅಷ್ಟೇ.
- ಸ್ವರ್ಣಲತ ಭಟ್
POPULAR STORIES :
ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ
ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…
ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್
ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??