ಅಂಬರೀಶ್ ನಿಧನದ ನಂತರ ದುಃಖದಲ್ಲಿದ್ದ ಪುತ್ರ ಅಭಿಷೇಕ್ ಅಂಬರೀಶ್, ಇದೀಗ ತಮ್ಮ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಅಪ್ಪನ ಸಾವಿನ ನಂತರ ಬೇಸರದಲ್ಲಿದ್ದ ಅಭಿ ಈಗ ಕೊಂಚ ಸಮಾಧಾನ ತಂದುಕೊಂಡು ಅಮರ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.ಶೂಟಿಂಗ್ ಹೋದವರು ಸುಮ್ಮನೆ ಹೋಗಿಲ್ಲ, ಬದಲಿಗೆ ಅಪ್ಪ ಅಂಬಿ ಫೋಟೋ ಹಿಡಿದು ಹೋಗಿದ್ದಾರೆ. ಹೌದು, ಅಪ್ಪನ ಫೋಟೋ ಹಿಡಿದು ಎಂದಿನಂತೆ ಶೂಟಿಂಗ್ ನಲ್ಲಿ ಪಾಲ್ಗೊಂಡ ಅಭಿ, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಆಪ್ ಲೋಡ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡ ನಿಮ್ಮ ಮೇಲೆ ಅಪ್ಪನ ಹಾರೈಕೆ ಹಾಗೂ ಆರ್ಶಿವಾದ ಸದಾ ಇರಲಿ ಎಂದು ಹಾರೈಸಿದ್ದಾರೆ.