ಭಾರತ ರೂಢಿ ಸಂಪ್ರದಾಯಗಳ ಭೂಮಿ..! ಇದು ಶಾಂತಿ, ಪ್ರೀತಿ, ಭಾವನೆಗಳ ತವರು..! ನೀವು ಜನ್ಮವಿಡೀ ಅರ್ಥಮಾಡಿಕೊಳ್ಳಲು ಪ್ರಯತ್ನಸಿದರೂ ಭಾರತದ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ..! ಜಗತ್ತಿನ ವೇಗಕ್ಕೆ ತಕ್ಕಂತ ಭಾರತವೂ ಬದಲಾಗುತ್ತಿದೆ..! ಭಾರತದಲ್ಲಿ ಗುರುತರವಾದ ಬದಲಾವಣೆಯನ್ನು ತರೋಣವೆಂದ್ರೆ ಹತ್ತು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಭಾರತ ನರಳಾಡುತ್ತಿದೆ..! ನಾವು ಇಚ್ಚಿಸುತ್ತಿರುವ ಬದಲಾವಣೆಗೆ ತೊಡಕಾಗಿರುವ ಪ್ರಮುಖ ಸಮಸ್ಯೆಗಳ ಕುರಿತು ಸ್ಮಾಲ್ ಇಟ್ರುಡಕ್ಷನ್ ಇಲ್ಲಿದೆ..!
ಇಲ್ಲಿ ಭಾರತ ಫೇಸ್ ಮಾಡ್ತಾ ಇರೋ ಪ್ರಮುಖ 12 ಧೀರ್ಘಾವಧಿ ಮತ್ತು ಸೀಮಿತಾವಧಿ ಸಮಸ್ಯೆಗಳಿವೆ..! ಈ ಸಮಸ್ಯೆಗಳನ್ನು ಪರಿಹರಿಸುವುದೇ ಉತ್ತಮ ಬದಲಾವಣೆಗೆ ನಾಂದಿ ಆಗಬಲ್ಲದು.
1. ಅನುಚಿತ ತ್ಯಾಜ್ಯ ನಿರ್ವಹಣೆ :
ಇಡೀ ವ್ಯವಸ್ಥೆಯನ್ನೇ ಹಾಳು ಮಾಡ್ತಾ ಇರೋ ಕಸ ಸಂಗ್ರಹ, ತ್ಯಾಜ್ಯ ಸಂಗ್ರಹವಾಗುವುದು ಹೇಗೆ? ನಾವು ಈ ಬಗ್ಗೆ ಬೇರೆಯವರ ಕಡೆಗೆ ಬೊಟ್ಟು ಮಾಡಿ ತೋರಿಸ್ತೀವಿ..! ಆದರೆ ಇಂತಹ ಕಸ, ತ್ಯಾಜ್ಯಗಳ ಸಂಗ್ರಹವಾಗುವುದು ನಮ್ಮೆಲ್ಲರಿಂದಲೂ..! ಪ್ರತಿಯೊಬ್ಬರೂ ಗೊತ್ತುಗುರಿಯಿಲ್ಲದೇ, ಒಬ್ಬೊಬ್ಬರಾಗಿಯೇ ಚಾಕಲೇಟ್ ಕವರ್ ಎಸೆಯುತ್ತೇವೆ.., ನಮ್ಮನ್ನು ನೋಡಿದ ಇನ್ನೊಬ್ಬನೂ ಅದೇ ಕೆಲಸ ಮಾಡ್ತಾನೆ..! “ಹೀಗೆ ಕೋತಿ ವನವನ್ನೇ ಕೆಡಿಸಿತಂತೆ” ಎಂಬ ಗಾದೆ ಮಾತಿನಂತೆ ನಾವೆಲ್ಲಾ ತ್ಯಾಜ್ಯ ಹೆಚ್ಚಾಗುವಿಕೆಗೆ, ಕೆಟ್ಟ ವಾತಾವರಣಕ್ಕೆ ಕಾರಣರಾಗಿದ್ದೇವೆ…! ಈ ಸಮಸ್ಯೆಯನ್ನು ನಾವೇ ಪರಿಹರಿಸಲೇ ಬೇಕಾಗಿದೆ.
2. “ಮಾ” ಮತ್ತು “ಬಾಬ”ರನ್ನು ಇಡೀ ದೇಶದಾದ್ಯಂತ ಪೂಜಿಸುತ್ತಾರೆ..! :
ಎದ್ದೇಳಿ.., ಅಕ್ಷಯ್ ಕುಮಾರ್ ಅಭಿನಯದ ಒ ಮೈ ಗಾಡ್ (ಒಎಂಜಿ) ಮತ್ತು ಅಮಿರ್ ಖಾನ್ ನಟನೆಯ ಪಿಕೆ ಸಿನಿಮಾಗಳು ತಮ್ಮನ್ನು ತಾವು ದೇವರೆಂದು ಕರೆದುಕೊಳ್ಳುವ ಸ್ವಯಂ ಘೋಷಿತ ದೇವಾನುದೇವತೆಗಳ ನೈಜತೆಯನ್ನು, ಸತ್ಯಾನು ಸತ್ಯತೆಯನ್ನು ಬಯಲು ಮಾಡಿವೆ..! ಹೀಗೆ ಕಂಡ ಕಂಡ ಬಾಬಗಳನ್ನೆಲ್ಲಾ ಪೂಜಿಸುವುದಕ್ಕಿಂತ ಯಾರಿಗಾದರೂ ಆಹಾರ ಮತ್ತು ಬಟ್ಟೆಯನ್ನು ಕೊಡಬಹುದೆಂದು ನಿಮಗೆ ಯಾವತ್ತೂ ಅನಿಸಿಲ್ಲವೇ..? ಇನ್ನಾದರೂ “ಮಾ” ಮತ್ತು “ಬಾಬ”ರನ್ನು ಪೂಜಿಸುವುದನ್ನು ಬಿಟ್ಟು ಕೆಲಸದಲ್ಲಿ ದೇವರನ್ನು ಕಾಣಿ ಉದ್ಧಾರ ಆಗ್ತೀರಾ..! ನಮ್ಮ ದೇಶದ ಸಮಸ್ಯೆಗಳಲ್ಲಿ ದೊಡ್ಡದಾದ ಸಮಸ್ಸೆಯೇ ಈ ಮಾ.. ಬಾಬಗಳ ಬಗೆಗಿನ ಜನರ ಭಕ್ತಿ..!
3. ಸ್ವಾತಂತ್ರ್ಯ ಬಂದರೂ ಎಷ್ಟೋ ಜನರ ಬದುಕು ಹಿಂದಿನಂತೆಯೇ ಇದೆ..! :
ಈ ಮೇಲಿನ ಫೋಟೋ ನೋಡಿ..! ದೇಶದಲ್ಲಿ ಸ್ವಾತಂತ್ರ್ಯ ನಂತರ ಮಹತ್ತರವಾದ ಬದಲಾವಣೆಗಳಾಗಿವೆ..! ಆದರೂ ಎಷ್ಟೋ ಜನರ ಕಷ್ಟ ಆರಕ್ಕೆ ಏರಿಲ್ಲ, ಮೂರಕ್ಕೆ ತಗ್ಗಲಿಲ್ಲ..! ನಗರಗಳಿಗೆ ಉತ್ತಮ ರಸ್ತೆ ಕಲ್ಪಿಸುವುದು ದೊಡ್ಡ ಕೆಲಸವಲ್ಲ ಮೊದಲು ಹಳ್ಳಿಯ ಜನರಿಗೆ ಕುಡಿಯಲು ನೀರು ಕೊಡಿ ಸ್ವಾಮಿ..!
4. ಕಲಿಕೆಗಿಂತ ಗ್ರೇಡ್ ಮತ್ತು ಅಂಕಗಳೇ ಮುಖ್ಯ..!
ನಮ್ಮ ದೇಶದ ಶಿಕ್ಷಣದ ಬಿಗ್ ಡ್ರಾಬ್ಯಾಕಿದು..! ಬಹಳಷ್ಟು ಜನ ವಿದ್ಯಾರ್ಥಿಗಳು ಕಲಿಕೆಗಿಂತ ಹೆಚ್ಚಿನ ಅಂಕಗಳನ್ನು ಪಡೆಯಲು, ಉತ್ತಮ ಗ್ರೇಡ್ ಪಡೆಯುವುದನ್ನೇ ಜೀವನದ ಪರಮ ಗುರಿ ಅಂತ ಭಾವಿಸಿರ್ತಾರೆ..! ಶಿಕ್ಷಕರು, ಪೋಷಕರೂ ಕೂಡ ಅಷ್ಟೇ..! ಮಕ್ಕಳು ಎಷ್ಟು ಕಲಿತಿದ್ದಾರೆಂದು ನೋಡಲ್ಲ, ಮಕ್ಕಳಿಗೆ ಎಷ್ಟು ಅಂಕ ಬಂದಿದೆ ಎಂಬುದನ್ನೇ ನೋಡ್ತಾರೆ..! ಅಂಕಗಳಿಕೆಗೂ ಕಲಿಕೆಗೂ ವ್ಯತ್ಯಾಸವಿದೆ..! ಅಂಕದ ಎದುರು ಕಲಿಕೆ ಮಂಕಾಗಿರುವುದು ದೊಡ್ಡ ಸಮಸ್ಯೆಯೇ ಸರಿ..!
5. ಎಲ್ಲಿ ನೋಡಿದರಲ್ಲೂ “ಭ್ರಷ್ಟಾಚಾರ”..!
ಯಾವತ್ತು ನಮ್ಮ ದೇಶ ಭ್ರಷ್ಟ ಮುಕ್ತ ಭಾರತವಾಗುತ್ತೋ ಅಂದೇ ಭಾರತದ ಎಲ್ಲಾ ಸಮಸ್ಯೆಗಳೂ ಪರಿಹಾರವಾದಂತೆ..! ಎಲ್ಲಾ ಕ್ಷೇತ್ರದಲ್ಲಿಯೂ ಭ್ರಷ್ಟತೆಯಿದೆ..! ಈ ಭ್ರಷ್ಟಚಾರವೇ ದೇಶವನ್ನು ಹಾಳು ಮಾಡುತ್ತಿದೆ.. ನನ್ನ ಪ್ರಕಾರ ಭ್ರಷ್ಟಾಚಾರವೇ ಎಲ್ಲಾ ಸಮಸ್ಯೆಗಳಿಗೂ ಅಡಿಪಾಯ..! ಈ ಸಮಸ್ಯೆಯೇ ಭಾರತಕ್ಕೆ ದೊಡ್ಡದಾದ ತಲೆನೋವು..!
6. ಬಡತನ :
ಎಷ್ಟೋ ಬಡ ಕುಟುಂಬಗಳು ಬೀದಿಯಲ್ಲಿ ವಾಸವಾಗಿವೆ..! ಅವರಿಗೆ ಶಿಕ್ಷಣದ ಕೊರತೆಯಿದೆ..! ಅವರು ತಮ್ಮ ಮಕ್ಕಳಿಗೆ ಕಳ್ಳತನ ಮೊದಲಾದ ಕ್ರೈಂಗಳನ್ನು ಎಸಗುವಂತೆ ಪಾಠ ಮಾಡ್ತಾರೆ..! ಅಷ್ಟೇ ಅಲ್ಲ ಬಡತನದಿಂದ ಮಕ್ಕಳನ್ನು ಮಾರಾಟ ಕೂಡ ಮಾಡ್ತಾರೆ..! ಕದಿಯುದಲ್ಲದೆ ಲೈಂಗಿಕ ಅಪರಾಧಗಳಲ್ಲಿಯೂ ತೊಡಗುವಂತೆ ಈ ಬಡತನ ಉತ್ತೇಜಿಸುತ್ತದೆ..! ಇದು ಭಾರತದ ಬದಲಾವಣೆಗಿರುವ ದೊಡ್ಡ ತೊಡಕು..!
7. ವೈಶ್ಯಾವಾಟಿಕೆ :
ಹುಡುಗಿಯರು ಮತ್ತು ಮಹಿಳೆಯರು ವೇಶ್ಯಾವಾಟಿಕೆಗೆ ಇಳಿಯುತ್ತಿದ್ದಾರೆ..! ಅವರಿಗೆ ಇಷ್ವಿಲ್ಲದಿದ್ದರೂ ಬಲವಂತದಿಂದ ಆ ಕೂಪಕ್ಕೆ ತಳ್ಳಲಾಗುತ್ತಿದೆ..! ದೇಶದ ದುರಂತವೆಂದರೆ “ಪೋನರ್್ ಸ್ಟಾರ್ಸ್” (ಅಶ್ಲೀಲ ಸಿನಿಮಾಗಳ ನಟಿಯರು) ಅನ್ನು ದೇವರಂತೆ ಟ್ರೀಟ್ ಮಾಡೋ ಜನ ವೇಶ್ಯೆಯರನ್ನು ಅತ್ಯಂತ ಕೀಳಾಗಿ ಕಾಣುವುದೇಕೆ..?
8. ಶಿಕ್ಷಣದ ಪ್ರಾಮುಖ್ಯತೆ ಇಳಿಮುಖವಾಗ್ತಾ ಇದೆ:
ದೇಶದಲ್ಲಿ ಹಣ ಮತ್ತು ಸಂಪನ್ಮೂಲಗಳನ್ನು ಶಿಕ್ಷಣಕ್ಕಾಗಿ ಭರಿಸಲಾಗ್ತಾ ಇದೆ..! ಉತ್ತಮ ಶಿಕ್ಷಣವೂ ಲಭ್ಯವಾಗ್ತಾ ಇರ್ಬಹುದು..! ಭಾರತ ಶಿಕ್ಷಿತರ ರಾಷ್ಟ್ರವಾಗಿ ಹೊರಹೊಮ್ಮುತ್ತಲಿದೆ. ಆದರೆ ಇವತ್ತು ಕೆಲವೊಂದಿಷ್ಟು ಶಿಕ್ಷಕರಿಗೆ ಗೌರವ ಕೊಡುವುದು ವ್ಯರ್ಥವೆಂದೆನಿಸುತ್ತದೆ..! ಬಹುತೇಕ ಶಿಕ್ಷಕರು ಹಣಕೊಟ್ಟು ಉದ್ಯೋಗ ಗಿಟ್ಟಿಸಿಕೊಂಡವರು..! ಇದು ಬದಲಾಗಬೇಕು, ಶಿಕ್ಷಕರು ಸಮಾಜದಲ್ಲಿ ಗೌರವಯುತವಾದ ಸ್ಥಾನವನ್ನು ಅಲಂಕರಿಸುವವರು..! ಶಿಕ್ಷಕರಿಗೆ ಗೌರವವಿಲ್ಲದೇ ಇದ್ದರೆ ಶಿಕ್ಷಣಕ್ಕೂ ಪ್ರಾಮುಖ್ಯತೆ ಇಲ್ಲವೇ ಇಲ್ಲ…!
9. ಜನಸಂಖ್ಯೆ ಬೆಳೆಯುತ್ತಲೇ ಇದೆ..!
ನಮ್ ದೇಶದಲ್ಲಿ ಉತ್ತಮವಾದ ತ್ವರಿತಗತಿಯ ಬೆಳವಣಿಗೆ ಆಗ್ತಾ ಇರೋದು ಜನಸಂಖ್ಯೆಯಲ್ಲಿ ಮಾತ್ರವೇ..! ಜನಸಂಖ್ಯೆ ನಿಯಂತ್ರಣದ ಬಗ್ಗೆ ಯಾರೂ ಗಟ್ಟಿದನಿಯಲ್ಲಿ ಮಾತಾಡ್ತಾ ಇಲ್ಲ..! ಅನಕ್ಷರತೆಯೇ ಜನಸಂಖ್ಯೆ ಬೆಳವಣಿಗೆಗೆ ಮುಖ್ಯ ಕಾರಣ..! ಜನರಲ್ಲಿ ಈ ಬಗ್ಗೆ ಅರಿವು ಮೂಡಿಸೋದೇ ದೊಡ್ಡ ಸಮಸ್ಯೆ..!
10. ಫೇರ್ ಅಂಡ್ ಲವ್ಲಿ ಪರಂಪರೆ :
ಟಿವಿ ಆನ್ ಮಾಡೋದೇ ತಡ.., ಈ ಫೇಸ್ ಕ್ರೀಮ್ ಬಳಸಿದರೆ ನೀವು ಸುಂದರವಾಗಿ, ಫೇರ್ ಆಗಿ ಕಾಣುತ್ತೀರಿ..! ಕೋಮಲ ತ್ವಚೆಗಾಗಿ ಇದನ್ನು ಬಳಸಿ..! ಅಂತೆಲ್ಲಾ ಸಿಕ್ಕಾಪಟ್ಟೆ ಜಾಹಿರಾತುಗಳು ಬರುತ್ತಲೇ ಇರುತ್ತವೆ..! ಯಾವುದೇ ಜಾಹಿರಾತುಗಳನ್ನೇ ನೋಡಿ, ಬಿಳಿಯ ಬಣ್ಣವೇ ಸೌಂಧರ್ಯ..ಬಿಳಿ ಇಲ್ಲದೇ ಇದ್ದರೆ ಅದು ಸೌಂಧರ್ಯವೇ ಅಲ್ಲವೆಂದು ಬಿಂಬಿಸುತ್ತಾರೆ..! ಇಂಥಹ ಮನಸ್ಥಿತಿ ನಮ್ಮೆಲ್ಲರೊಳಗೂ ಜಾಗೃತವಾಗಿರುವುದು ಸರಿಪಡಿಸಲಾಗದ ಸಮಸ್ಯೆಯಾಗಿಯೇ ಉಳಿದಿದೆ..! “ಬ್ರೌನ್ ಈಸ್ ಬ್ಯೂಟಿಫುಲ್” ಎಂದು ಅದನ್ನು ಒಪ್ಪಿಕೋಮಡಿದ್ದೇವೆ..! ನಾವು ಇಂಥಹ ಪೂರ್ವಗ್ರಹ ಅಥವಾ ಪ್ರೆಜಿಡೀಸ್ನಿಂದ ಹೊರ ಬರಲೇ ಬೇಕಾಗಿದೆ..! ಈ ಪೂರ್ವಗ್ರಹ ಪೀಡನೆಯೂ ದೇಶದ ಬದಲಾವಣೆಗಿರುವ ಮೂಲಭೂತ ಸಮಸ್ಯೆ ಎಂಬುದೂ ಸತ್ಯ ಸಂಗತಿಯೇ..!
11 ಸಾರ್ವಜನಿಕ ಸ್ಥಳಗಳು ಶೌಚಾಲಯಗಳೆಂಬ ಕಲ್ಪನೆ :
ಜನ ಸಾರ್ವಜನಿಕ ಸ್ಥಳಗಳೆಂದರೆ ಶೌಚಾಲಯಗಳೆಂದೇ ಕಲ್ಪಿಸಿಕೊಂಡಿದ್ದಾರೆ..! ನಮ್ಮ ಭಾರತದಲ್ಲಿ ಜನ ಕಂಡ ಕಂಡಲ್ಲಿ ಸೂಸು, ಮಲ ವಿಸರ್ಜನೆ ಮಾಡ್ತಾರೆ..! ಸೂಸು ಮಾಡಲಿಕ್ಕೆ ಯಾವುದಾದರೂ ಕಾಂಪೌಡ್ ಸಿಕ್ಕರೂ ಸಾಕು..! ಕಂಡ ಕಂಡ ಗೋಡೆ ಮೇಲೆ ನೀರು ಬಿಡ್ತಾರೆ..! ನಾಯಿಗಳು ಕಂಬ ಕಂಡಾಗ ಕಾಲ್ ಎತ್ತುವುದಕ್ಕೂ ನಮ್ಮ ಜನ ಗೋಡೆಗೆ ಸೂಸು ಮಾಡೋಕು ಯಾವುದೇ ವ್ಯತ್ಯಾಸ ವಿಲ್ಲ..! ನಾಚಿಕೆಗೇಡಿನ ಸಂಗತಿ ಅಂದ್ರೆ ಸಾರ್ವಜನಿಕ ಶೌಚಾಲಯಗಳಿದ್ದರೂ ಅದರ ಪಕ್ಕದ ಸಾರ್ವಜನಿಕ ಸ್ಥಳದಲ್ಲಿಯೇ ಸೂಸು ಮಾಡೋ ಮಹಾನುಭಾವರಿದ್ದಾರೆಯೇ ವಿನಃ ಆ ಶೌಚಾಲಯ ಬಳಸ ಬೇಕೆಂಬ ಸಾಮಾನ್ಯ ಪ್ರಜ್ಞೆ ಇಂಡಿಯಾದ ಸತ್ತ ಪ್ರಜೆಗಳಿಗಿಲ್ಲ..! ಥೂ.., ಹೀಗೆ ಆದ್ರೆ ಇಂಡಿಯಾ ಚೇಂಜ್ ಆಗೋದು ಹೆಂಗ್ರಿ..?
12. ಅರ್ಧ ಜನ ಪ್ರತಿಭಟನೆಗೆ ಇಳಿದರೆ, ಇನ್ನರ್ಧ ಜನ ಹೆದರುತ್ತಾರೆ :
ಭಾರತದ ಯುವಕರು ಯಾವುದೇ ಚುನಾವಣೆಯಲ್ಲಾದರೂ ಚುನಾವಣಾ ದಿಕ್ಕನ್ನೇ ಬದಲಾಯಿಸ್ತಾರೆ..! ಯುವ ಶಕ್ತಿ ಮನಸ್ಸು ಮಾಡಿದರೆ ಇಡೀ ದೇಶವನ್ನೇ ಬದಲಾಯಿಸ ಬಹುದು..! ಆದ್ರೆ ನಮ್ಮಲ್ಲಿ ಅರ್ಧದಷ್ಟು ಜನ ಪ್ರತಿಭಟನೆ ಮಾಡ್ತಾರೆಂದರೆ ಇನ್ನರ್ದದಷ್ಟು ಜನ ಹೆದರಿ ಆ ಸುದ್ದಿಗೇ ಬರಲ್ಲ..! ಮತ್ತೊಂದಿಷ್ಟು ಜನ ಪ್ರತಿಭಟನೆ, ಬಂದ್ ದಿನ ಮನೆಯಲ್ಲಿಯೇ ರೆಸ್ಟ್ ತಗೋಳ್ತಾರೆ..! ಅಂದಾಜು 1.2 ಮಿಲಿಯನ್ ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ಇಂಡಿಯನ್ಸ್ ಈ ಪ್ರತಿಭಟನೆಯ ಸುದ್ದಿಗೇ ಬರಲ್ಲ..! ಪರಿಸ್ಥಿತಿ ಹಿಂಗಿರುವಾಗ ಬದಲಾವಣೆ ಸಾಧ್ಯವಾಘುವುದಾದರೂ ಹೇಗೆ..?
ಭಾರತವನ್ನು ಬದಲಾಯಿಸಲು ಈ 12 ಸಮಸ್ಯೆಗಳು ಅಡೆತೆಗಳಾಗಿವೆ..! ಈ ಸಮಸ್ಯೆಗಳಲ್ಲದೆ ಇನ್ನೂ ಅನೇಕ ತೊಂದರೆಗಳಿವೆ..! ಮುಖ್ಯವಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲೇ ಬೇಕು..! ಆಗ ಮಾತ್ರ ಭಾರತವನ್ನು ಬದಲಾಯಿಸಲು ಸಾಧ್ಯ..! ಮೇಕ್ ಇನ್ ಇಂಡಿಯಾ ನಿರ್ಮಾಣವಾಗುವುದೂ ಆಗಲೇ..! ಈ ದಿನ ಯಾವತ್ತು ಬರುತ್ತೋ.. ದೇಶದ ಜನ ಯಾವಾಗ ಬುದ್ದೀ ಕಲಿತೀವೋ..? ಯಾವತ್ತು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತೋ..? ಆ ದೇವರೇ ಬಲ್ಲ..! ಆದ್ರೂ ಒಳ್ಳೆಯದಾಗುತ್ತೇ ಅಂತ ಕಾಯೋಣ.., ಅಲ್ವಾ..? ಬಂದೇ ಬರ್ತದೇ ಕಾಲ..!
- ಶಶಿಧರ ಡಿ ಎಸ್ ದೋಣಿಹಕ್ಲು
POPULAR STORIES :
ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ
ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!
ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!
ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!
ಹೋಗ್ತಾ ಸಿಂಗಲ್ ಬರ್ತಾ ಡಬಲ್..!
ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com