ಧರ್ಮಕ್ಕಿಂತ "ಸ್ನೇಹ"ವೇ ದೊಡ್ಡದೆಂದು ಸಾರಿದ "ರಜಾಕ್ ಖಾನ್ ಟಿಕಾರಿ"..!

0
69

ನಿಜವಾದ ಫ್ರೆಂಡ್ ಶಿಪ್, ಧರ್ಮ, ಜಾತಿ, ಮತ, ಆಸ್ತಿ, ಅಂತಸ್ತು, ವಯಸ್ಸು, ಲಿಂಗ ಇವೇ ಮೊದಲಾದ ನೆಪದಿಂದಾಗಿ ಮುರಿದು ಬೀಳಲ್ಲ..! ರಿಯಲ್ ಫ್ರೆಂಡ್ ಶಿಪ್ ಗೆ ಈ ಯಾವುದರ ಬೇಧವೂ ಇಲ್ಲ..! ಈ ಸ್ನೇಹವೇ ಹಾಗೇ..! ಗೆಳೆತನದಲ್ಲಿ ಜಾತಿ-ಧರ್ಮ, ಆಸ್ತಿ-ಅಂತಸ್ತಿನಂತಹ ಮ್ಯಾಟ್ರು ಬರುತ್ತೆ ಅಂತಾದ್ರೆ ಅದು ಸ್ನೇಹ ಅಥವಾ ಗೆಳೆಯತನ ಅಲ್ವೇ ಅಲ್ಲ..!
ನಮ್ ದೇಶದಲ್ಲಿ ಪ್ರೀತಿ-ಸ್ನೇಹಕ್ಕೆ ಯಾವುದು ಅಡ್ಡಿ ಬರುತ್ತೋ ಬಿಡುತ್ತೋ ಗೊತ್ತಿಲ್ಲ..! ಬಟ್, ಧರ್ಮ, ಜಾತಿ ಮಾತ್ರ ಕಿತ್ತು ತಿನ್ತಾನೇ ಇರುತ್ತೆ..! ಆದ್ರೆ ಸ್ನೇಹಕ್ಕಾಗಿ ಧರ್ಮದ ಎಲ್ಲೆಯನ್ನೇ ಮೀರಿದವರನ್ನ ನೀವು ನೋಡಿದ್ದೀರಾ..? ಧರ್ಮಕ್ಕಿಂತ ಸ್ನೇಹವೇ ದೊಡ್ಡದೆಂದ “ಮಹಾನ್ ಗೆಳೆಯನ” ಬಗ್ಗೆ ನಿಮಗೆ ತಿಳಿಸ್ತೀವಿ..! ಈ ಸ್ಟೋರಿ ಶೇರ್ ಮಾಡಿ, ಎಲ್ಲರೂ ಓದುವಂತೆ ಮಾಡ್ಲೇ ಬೇಕು..! ಯಾಕಂದ್ರೆ , ಫ್ರೆಂಡ್ಸ್, ನಮ್ ಕಷ್ಟಕ್ಕೆ ಆಗುವವರು ರಿಲೇಟೀವ್ಸ್ ಅಲ್ಲ..! ರಕ್ತ ಹಂಚಿಕೊಂಡ ಒಡಹುಟ್ಟಿದವರಲ್ಲ..! ನಮ್ಮ ಕಷ್ಟಕ್ಕೆ ನಮ್ಮೊಡನೆ ಕೈ ಜೋಡಿಸಿ, ನಮ್ಮನ್ನು ಮೇಲೆತ್ತುವವರು ಸ್ನೇಹಿತರೇ..! ಸೋ, ಈ ಸ್ನೇಹಿತ ಮೆರೆದ ಮಾನವೀಯತೆಯನ್ನು ಪ್ರತಿಯೊಬ್ಬರೂ ಓದ್ಲೇ ಬೇಕು..!
“ರಜಾಕ್ ಖಾನ್ ಟಿಕಾರಿ” ಮತ್ತು “ಸಂತೋಷ್ ಸಿಂಗ್” ಮಧ್ಯಪ್ರದೇಶದ ಬೇತುಲ್ ಜಿಲ್ಲೆಯವರು. ಇವರು ಬಹುಕಾಲದ ಸ್ನೇಹಿತರು..! ದುರಾದೃಷ್ಟವಶಾತ್ ಅನಾರೋಗ್ಯದಿಂದಾಗಿ ಸಂತೋಷ್ ಇದೇ ಸೆಪ್ಟೆಂಬರ್ 20ರಂದು ನಿಧನರಾದರು. ಸಂತೋಷರ ಹೆಂಡತಿಗೆ ಆರ್ಥಿಕ ಸಮಸ್ಯೆಯಿಂದಾಗಿ ಗಂಡನ ಕೊನೆಯ ಕಾರ್ಯಗಳನ್ನೂ ಮಾಡಲು ಸಾಧ್ಯ ಆಗಲಿಲ್ಲ..! ಆಗ, ಅವರಿಗೆ ಆರ್ಥಿಕ ಸಹಾಯ ಮಾಡಿದ್ದು, ಪತಿಯ ಆತ್ಮೀಯ ಗೆಳೆಯ “ರಜಾಕ್ ಖಾನ್ ಟಿಕಾರಿ”..! ಕೇವಲ ಆರ್ಥಿಕ ಸಹಾಯ ಮಾಡಿದ್ದಲ್ಲದೆ ತಾವೇ ಮುಂದೆನಿಂತು ಸ್ನೇಹಿತ ಸಂತೋಷರ “ಅಂತಿಮ ಕಾರ್ಯ(ಅಂತ್ಯ ಸಂಸ್ಕಾರ)”ವನ್ನು ಅವರ ಸಂಪ್ರದಾಯದಂತೆಯೇ ಮಾಡಿದರು..!
ಸ್ನೇಹ ಅಂದ್ರೆ ಇದು ಅಲ್ವೇನ್ರೀ..! ಸ್ನೇಹಿತನ ಕುಟುಂಬದ ಕಷ್ಟಕ್ಕೂ ಕೈ ಜೋಡಿಸೋದು ನಿಜವಾದ ಸ್ನೇಹ. ಸ್ನೇಹಿತ ಇಲ್ಲದೇ ಇರುವಾಗ ಅವನ ಮನೆಯ ಮಗನಾಗಿ ಇರುವವನೇ ಸ್ನೇಹಿತ..! ಈ ಸ್ಟೋರಿ ನೋಡಿದ್ರಲ್ಲಾ.., ಸಂತೋಷರ ಸಂಬಂಧಿಕರು ಕಷ್ಟಕ್ಕೆ ಬಂದರೇ ಅಥವಾ ಜಾತಿ, ಧರ್ಮವನ್ನು ಮೀರಿದ ಸ್ನೇಹಿತ ಬಂದನೇ..? ಇದು ಕಣ್ರೀ ಫ್ರೆಂಡ್ ಶಿಪ್ ಅಂದ್ರೆ..! “ರಜಾಕ್ ಖಾನ್ ಟಿಕಾರಿ” ನಿಮಗೊಂದು ಸಲಾಂ ರೀ..!

  • ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here