ಒಂದು ಸಿನಿಮಾ ಕಾಡಬೇಕು, ಮತ್ತೆ ಮತ್ತೆ ಕಾಡಬೇಕು…! ಸಿನಿಮಾ ನೋಡುವಾಗ ಕಾಡಬೇಕು, ನೋಡಿ ಹೊರಗೆ ಬಂದ ಮೇಲೂ ಕಾಡಬೇಕು. ಅದೇ ನಿಜವಾದ ಸಿನಿಮಾ..! ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅಂತಹ ಒಂದು ಸಿನಿಮಾ ನೋಡ್ದೆ. ಆರಂಭದಲ್ಲಿ ಇದೂ ನೂರರಲ್ಲಿ ಒಂದು ಅಂತ ಅನ್ಸಿದ್ರೂ, ಸಿನಿಮಾ ಮುಗಿದಾಗ ಇದು ಸಾವಿರಕ್ಕೆ ಒಂದು ಅಂತ ಅನ್ನಿಸ್ತು. ಇಡೀ ಸಿನಿಮಾ ಇರೋದು ನೂರು ನಿಮಿಷ, ಒಂದೇ ಲೊಕೇಶನ್,ಎರಡೇ ಪಾತ್ರಗಳು. ಆದ್ರೆ ಯಾವ ಸಿನಿಮಾನು ಮೀರಿಸೋ ತಾಕತ್ತು ಆ ಸಿನಿಮಾಗಿತ್ತು. ಅದು ಆಕ್ಟರ್…ಕನ್ನಡದ ಆಕ್ಟರ್….!
ಹೌದು, ಆಕ್ಟರ್ ಸಿನಿಮಾ ನಿಜಕ್ಕೂ ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ, ಜೀವನ ಮುಗೀತು ಅನ್ಕೊಂಡೋರೂ ನೋಡ್ಬೇಕು, ನನ್ ಲೈಫ್ ಈಗ ಶುರು ಅನ್ನೋರೂ ನೋಡ್ಬೇಕು..! ಇಲ್ಲಿ ಆಕ್ಟರ್ ಬರಿಯ ಪಾತ್ರವಲ್ಲ, ಪ್ರತಿ ಜನಸಾಮಾನ್ಯನ ಪ್ರತಿಬಿಂಬ..! ಏನೋ ಆಗಿದ್ದವನು ಇನ್ನೇನೋ ಆಗಿಬಿಟ್ಟರೆ ಅವನೇನು ಆಗಿಬಿಡ್ತಾನೆ, ಅವನಿಗೆ ಅದೆಂಥಾ ಆಲೋಚನೆಗಳು ಬಂದುಬಿಡ್ತವೆ, ಅವನ ಬದುಕಿನ ದಿಕ್ಕು ಹೇಗೆ ಬದಲಾಗುತ್ತೆ, ಆ ದಿಕ್ಕು ಹೇಗೆ ಜೀವನದ ಕೆಟ್ಟ ವಾಸ್ತುವಾಗಿಬಿಡುತ್ತೆ, ಅದನ್ನು ಎದುರಿಸಿ ನಿಂತರೆ ಜೀವನ ಇನ್ನೇನಾಗುತ್ತೆ..? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವೇ ಆಕ್ಟರ್..! ಡೈಲಾಗ್ ಗಳು ಮೈ ಜುಮ್ ಅನಿಸುತ್ತೆ, ಎದ್ದು ನಿಂತು ಚಪ್ಪಾಳೆ ಹೊಡೆಸುತ್ತೆ..! ನವೀನ್ ಕೃಷ್ಣ ಅಭಿನಯ ನೋಡ್ತಿದ್ರೆ ಸಿನಿಮಾದ ಹೆಸರನ್ನು ಇವರಿಗೋಸ್ಕರವೇ ಇಟ್ಟಿದ್ದಾರಾ ಅನ್ಸುತ್ತೆ..! ಕ್ಯಾಮರಾ ಕೈಚಳಕ ಕಲಾತ್ಮಕ ಅನ್ಸುತ್ತೆ..! ಎರಡು ಹಾಡುಗಳ ಸಾಹಿತ್ಯ ಮನಸ್ಸಿಗೆ ನಾಟುತ್ತೆ ..! ಸೆಕೆಂಡ್ ಹಾಫ್ ನಲ್ಲಿ ಬರೋ ಸಿಹಿಕಹಿ ಗೀತಾ, ನಿಮ್ಮ ಇಡೀ ಜೀವನಕ್ಕೆ ಸಾಕಾಗಿ ತುಂಬಿ ತುಳುಕುವಷ್ಟು ಬದುಕೋ ಪಾಠ ಹೇಳಿ ಹೋಗ್ತಾರೆ..! ಇಲ್ಲಿ ಹೊಡೆದಾಟೋ ಫೈಟಿಲ್ಲ, ಜೀವನದ ಫೈಟಿದೆ..! ಇಲ್ಲಿ ಮರಸುತ್ತೋ ಹಾಡಿಲ್ಲ, ಮನಸ್ಸು ಸುತ್ತೋ ಭಾವನೆ ಇದೆ..! ಉದ್ದುದ್ದ ಡೈಲಾಗಿಲ್ಲ, ಉದ್ದಾರವಾಗೋ ಭರವಸೆ ಇದೆ..! ನೂರಾರು ಕೆಟ್ಟ ಸಿನಿಮಾ ನೋಡಿ ಬೈಕೊಂಡು ಬಂದಿರ್ತೀರಿ, ಹಾಗಿದ್ದಾಗ ಇಂತಹ ಒಂದು ಒಳ್ಳೇ ಸಿನಿಮಾ ನೋಡೋದ್ರಲ್ಲಿ ತಪ್ಪಿಲ್ಲ..! ಖಂಡಿತ ಇಷ್ಟವಾಗುತ್ತೆ, ನಾನೇ ಗ್ಯಾರಂಟಿ…! ತಪ್ಪದೆ ನೋಡಿ… ಇಂತಹ ಒಳ್ಳೆಯ ಸಿನಿಮಾ ನಿರ್ಮಾಣ ಮಾಡಿದ ಚಿತ್ರಲೋಕದ ವೀರೇಶ್ ಅವರಿಗೆ ತುಂಬಿ ಹೃದಯದ ಧನ್ಯವಾದ…ನಿಮ್ಮ ಕಿರಿಕ್ ಕೀರ್ತಿ
-
ಕಿರಿಕ್ ಕೀರ್ತಿ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!