ಸ್ಯಾಂಡಲ್ ವುಡ್ ನಲ್ಲಿ’ಅಧಿಕ ಪ್ರಸಂಗಿ’ಯ ಆಟ ಶುರು”

Date:

ಈ ಪ್ರಪಂಚದಲ್ಲಿ ಅಧಿಕ ಪ್ರಸಂಗಿಗಳಿಗೆ ಕೊರತೆಯಿಲ್ಲ. ನಿಮ್ಮ ಸುತ್ತಮುತ್ತ ಫ್ರೆಂಡ್ಸ್, ಸಂಬಂಧಿಗಳಲ್ಲಿ, ಮನೆಗಳಲ್ಲಿ ‘ಅಧಿಕ ಪ್ರಸಂಗಿ’ ಅಂತ ಒಬ್ರಾದ್ರೂ ಇದ್ದೇ ಇರ್ತಾರೆ.

ಅಯ್ಯೋ ಇದೇನಪ್ಪಾ, ಅಧಿಕ ಪ್ರಸಂಗಿ ಬಗ್ಗೆ ಈಗ್ಯಾಕೆ ಮಾತು ಅಂತೀರಾ..! ಇದೇ ಶೀರ್ಷಿಕೆಯಡಿ ಒಂದು ಅದ್ಭುತ ಪ್ರಯೋಗಾತ್ಮಕ ಸಿನಿಮಾ ರೆಡಿಯಾಗ್ತಿದೆ. ‘ಅಧಿಕ ಪ್ರಸಂಗಿ’ ಅಂದ್ರೆನೆ ಒಂಥರ ವಿಚಿತ್ರ, ಅದರಲ್ಲೂ ಅದೇ ಬೇಸ್ ಮೇಲೆ ಇಂಥ ಸಿನಿಮಾ ಬರ್ತಾ ಇರೋದು ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ.

ಚಿತ್ರದ ಮೊದಲ ಪೋಸ್ಟರ್ ನಲ್ಲಿಯೇ ‘ಅಧಿಕ ಪ್ರಸಂಗಿ’ ತನ್ನ ಝಲಕ್ ತೋರಿಸಿದ್ದಾನೆ. ಹುಡುಗಿಯೊಬ್ಬಳು ತನ್ನ ಹುಡುಗನಿಗೆ ಸಿಗರೇಟ್ ಹಚ್ಚುವ ಪೋಸ್ಟರ್ ಸ್ಯಾಂಡಲ್ವುಡ್ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈಗಾಗಲೇ ಸಾಕಷ್ಟು ಸಿನಿಮಾಗೆ ಸಹ ನಿರ್ದೇಶಕನಾಗಿ ಎರಡೂ ಚಿತ್ರಕ್ಕೆ ಸಂಭಾಷಣೆ ಹಾಗೂ ಸಾಹಿತ್ಯವನ್ನು ಬರೆದು ಮತ್ತು ಕಿರುಚಿತ್ರವನ್ನು ನಿರ್ದೇಶನ ಮಾಡಿ ತನ್ನ ಕ್ರಿಯೇಟಿವಿಟಿಯನ್ನು ಗಾಂಧಿನಗರಕ್ಕೆ ಪ್ರದರ್ಶಿಸಿದ್ದ ಯುವ ನಿರ್ದೇಶಕ ರಾಕಿ ಸೋಮ್ಲಿ ಈಗ ‘ಅಧಿಕ ಪ್ರಸಂಗಿ’ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ .ಮೊದಲ ಚಿತ್ರವಾದರೂ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡೆ ಫೀಲ್ಡ್ಗೆ ಇಳಿದಿದ್ದಾರೆ.

 

ಸಿನಿಮಾ ಅಂದ್ರೆ ಕೇವಲ ಶೋಕಿ ಅಲ್ಲ, ಇದರಲ್ಲಿ ಪರಿಶ್ರಮ ಪಟ್ಟರೆ ಬದುಕು ಕಟ್ಟಿಕೊಳ್ಳ ಬೇಕೆನ್ನುವುದು ರಾಕಿ ಸೋಮ್ಲಿ ಅವರ ಜೀವನದ ಕನಸು. ಈಗ ಆ ಕನಸಿಗೆ ಚಾಲನೆ ದೊರೆತಿದೆ.ಇನ್ನೇನು ಸದ್ಯದಲ್ಲೇ ‘ಅಧಿಕ ಪ್ರಸಂಗಿ’ ಸಿನಿಮಾ ಸೆಟ್ಟೇರಲಿದೆ. ಚಿತ್ರದ ನಾಯಕನಾಗಿ ಸುಕೇತ್ ಕಾಣಿಸಿಕೊಳ್ಳಲಿದ್ದಾರೆ. ಸುಕೇತ್ ಗೆ ನಟನೆ ಹೊಸತೇನಲ್ಲ. ರಂಗಾಯಣದ ನಾಟಕಗಳಲ್ಲಿ ಅಭಿನಯಿಸುತ್ತಾ ರಂಗಭೂಮಿಯ ಅನುಭವ ಇದ್ದು ಸಾಕಷ್ಟು ನಾಟಕವನ್ನು ಮಾಡಿ ತಮ್ಮ ಒಳಗಿರುವ ಪ್ರತಿಭೆಯನ್ನು ಈಗಾಗಲೇ ಹೊರಹಾಕಿದ್ದಾರೆ. ಈಗ ‘ಅಧಿಕ ಪ್ರಸಂಗಿ’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುಕೇತ್ ಗೆ ಜೋಡಿಯಾಗಿ ಜಾನ್ವಿ ರೆಡ್ಡಿ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಮೂಲತಃ ಡ್ಯಾನ್ಸರ್ ಆಗಿರುವ ಜಾನ್ವಿ ರೆಡ್ಡಿ ಈಗ ಸಿನಿ ಜರ್ನಿ ಶುರು ಮಾಡಿದ್ದಾರೆ.

 

 

ಪೋಸ್ಟರ್ನಲ್ಲಿ ಈ ಪೇರ್ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದೆ.ಉಳಿದಂತೆ ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ವಿಜಯ್ ಚೆಂಡೂರು ಹಾಗೂ ಇತರೆ ಹಿರಿಯ ಕಲಾವಿದರು ಸಾಥ್ ನೀಡಲಿದ್ದಾರೆ. ಚಿತ್ರದ ಮತ್ತೊಂದು ಹೈಲೆಟ್ ಏನೆಂದರೆ, ಸುದ್ದಿ ವಾಹಿನಿಗಳಲ್ಲಿ ತನ್ನ ಆ್ಯಂಕರಿಂಗ್ ಸ್ಟೈಲ್ ನ ಮೂಲಕ ವೀಕ್ಷಕರ ಮನಗೆದ್ದಿದ್ದ ನಿರೂಪಕ ಮಂಜುನಾಥ್ ದಾವಣಗೆರೆ ಈ ಸಿನಿಮಾದ ಪ್ರಮುಖ ಪಾತ್ರ ಒಂದಕ್ಕೆ ಬಣ್ಣ ಹಚ್ಚಲಿದ್ದಾರೆ.

ಮಂಜುನಾಥ್ ಕೂಡ ಈ ಸಿನಿಮಾದ ಬಗ್ಗೆ ಬಹಳ ಎಕ್ಸೈಟ್ ಆಗಿದ್ದಾರೆ. ಇನ್ನೂ ಕಥೆಗೆ ಆರ್. ಸಿದ್ದರಾಜು ಬಂಡವಾಳ ಹೂಡಲಿದ್ದಾರೆ.ಚಿತ್ರಕ್ಕೆ ಶಿವು ಪುತ್ರ ಕ್ಯಾಮೆರಾ ಕೈಚಳಕ ಇದ್ದು, ರಾಬರ್ಟ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಬೆಂಗಳೂರು ಸಕಲೇಶಪುರ ಹಾಗೂ ಹೊರ ದೇಶಗಳ ಸ್ಪೆಷಲ್ ಲೊಕೇಷನ್ಗಳಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.ಒಟ್ಟಿನಲ್ಲಿ ‘ಅಧಿಕ ಪ್ರಸಂಗಿ’ ಸಿನಿಮಾ ಮಾತ್ರ ಈಗಿನ ಯುವಜನರಿಗೆ ಹೇಳಿ ಮಾಡಿಸಿದಂತ ಸಿನಿಮಾವಾದರು ಎಲ್ಲ ವರ್ಗದವರಿಗೂ ಇಷ್ಟವಾಗುವಂತ ಕಥೆ ಇದಾಗಿದೆ ಪ್ರೇಕ್ಷಕನ ಮನಸ್ಸನ್ನ ಗೆದ್ದೆ ಗೆಲ್ಲುತ್ತೇವೆ ಎನ್ನುತ್ತಿದೆ ಚಿತ್ರತಂಡ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...