ದೊಡ್ಡ ದೊಡ್ಡ ಕಂಪನಿಗಳ ಜಾಹಿರಾತುಗಳೇ ಬ್ಯಾನ್..! 82 ಜಾಹಿರಾತುಗಳು ಬ್ಯಾನ್ ಆಗಿದ್ದೇಕೆ..?

0
97

ಜಾಹಿರಾತುಗಳಲ್ಲಿ ಉತ್ಪನ್ನಗಳನ್ನು ಉತ್ಪ್ರೇಕ್ಷೆ ಮಾಡೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ..! ಕೆಲವೊಂದು ಬ್ರಾಂಡೆಂಡ್ ಉತ್ಪನ್ನಗಳನ್ನಂತೂ ಟೆಲಿವಿಷನ್ ವಾಹಿನಿಗಳು ಸಾಕ್ಷಿ ಸಮೇತ ಬಿತ್ತರಿಸುತ್ತವೆ..! ಅಂದ್ರೆ ಈ ಪ್ರಾಡೆಕ್ಟ್ ಕೊಂಡುಕೊಂಡಿದ್ದರಿಂದಲೇ ಇವರು ಹೀಗೆ ಆದ್ರು.., ನೀವು ಇವರಂತೆ ಆಗಲು ಇಂದೇ ಈ ಉತ್ಪನ್ನವನ್ನು ಕೊಂಡುಕೊಳ್ಳಿರೆಂದು ಜನ ಅದನ್ನು ಒಪ್ಪಿಕೊಳ್ಳುವಂತೆ, ಅದನ್ನೂ ತಕ್ಷಣವೇ ಕೊಂಡುಕೊಳ್ಳಲು ಮುಂದಾಗುವಂತೆ ಪರಿಣಾಮಕಾರಿಯಾಗಿ ಜಾಹಿರಾತುಗಳನ್ನು ಪದೇ ನೀಡುತ್ತಲೇ ಇರ್ತವೆ..! ಅವುಗಳಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳಿವೆ ಅನ್ನೋದನ್ನು ಬಳಕೆದಾರ ಪರೀಕ್ಷಿಸಿಯೇ ನೋಡ್ಬೇಕು..! ಹೀಗೆ ದುಡ್ಡಿಗಾಗಿ ಜನರನ್ನು ವಂಚಿಸುವ ಜಾಹಿರಾತುಗಳಿಗೆ ಈಗ ದೊಡ್ಡ ಹೊಡೆತ ಬಿದ್ದಿದೆ..! ಈ ಹೊಡೆತ ಮುಂದಿನ ಜಾಹಿರಾತುಗಳಿಗೆ ಎಚ್ಚರಿಕೆಯ ಕಾಲಿಂಗ್ ಬೆಲ್ ಆಗುತ್ತದೆಯೇ ಕಾದು ನೋಡ್ಬೇಕು..! ಅಷ್ಟಕ್ಕೂ ಕೆಲವೊಂದು ಜಾಹಿರಾತುಗಳಿಗೆ ಎಂಥಹಾ ಪೆಟ್ಟು ಬಿತ್ತು..! ಸುಳ್ಳು ಸುಳ್ಳೇ ವೈಜ್ಞಾನಿಕ ಕಾರಣಗಳಿಲ್ಲದೆ… ಕೇವಲ ಉತ್ಪನ್ನದ ಮಾರುಕಟ್ಟೆಯ ಸಲುವಾಗಿ ಪುಂಖಾನುಪುಂಖವಾಗಿ ಉತ್ಪನ್ನಗಳನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದ ಜಾಹಿರಾತುಗಳೀಗ ಎಂಥಹಾ ಸ್ಥಿತಿ ತಲುಪಿದ್ವು ಅನ್ನೊದನ್ನು ನಿಮಗೆ ಹೇಳ್ತೀವಿ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಯಸ್, ಸುಮ್ಮನೇ ಪೊಳ್ಳು ಪೊಳ್ಳು ನಂಬಿಕೆಗಳನ್ನು ಹುಟ್ಟುಹಾಕಿ, ಉತ್ಪನ್ನಗಳು ಬಿಕರಿ ಆಗುವಂತೆ ನೋಡಿಕೊಳ್ಳುವ ಕೆಲವು ಜಾಹಿರಾತುಗಳನ್ನು ಬ್ಯಾನ್ ಮಾಡಲಾಗಿದೆ..! “ಅಡ್ವಟರ್ೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ” (ಎಎಸ್ಸಿಐ) ಅಡಿಯಲ್ಲಿ ಬರುವ “ಕನ್ಸುಮರ್ ಕಂಪ್ಲೆಂಟ್ಸ್ ಕೌನ್ಸಿಲ್” (ಸಿಸಿಸಿ) ಗೆ 2015ರಲ್ಲಿ 148 ಜಾಹಿರಾತುಗಳನ್ನು ಬ್ಯಾನ್ ಮಾಡುವಂತೆ ದೂರು ಬಂದಿತ್ತು..! ಆ ನೂರ ನಲವತ್ತೆಂಟ್ ಜಾಹಿರಾತುಗಳ ಪೈಕಿ 82 ಜಾಹಿರಾತುಗಳು ನಿಷೇದಕ್ಕೆ ಒಳಗಾಗಿವೆ..! ಬ್ಯಾನ್ ಆದ 82 ಜಾಹಿರಾತುಗಳಲ್ಲಿ 26 ಜಾಹಿರಾತುಗಳು ವೈಯಕ್ತಿಕ ಮತ್ತು ಆರೋಗ್ಯ ಸಂಬಂಧಿ ವರ್ಗಕ್ಕೆ ಬರುವ ಜಾಹಿರಾತುಗಳು..! 26 ಜಾಹಿರಾತುಗಳು ಶಿಕ್ಷಣ ವರ್ಗಕ್ಕೆ ಸೇರಿದವು..! 9ಜಾಹಿರಾತುಗಳು ಆಹಾರ ಮತ್ತು ಪಾನೀಯ ವರ್ಗಕ್ಕೆ ಬರುವಂತಹವು..! 7 ಜಾಹಿರಾತುಗಳು ಮಾಧ್ಯಮ ಮತ್ತು ಮನರಂಜನೆ ವರ್ಗಕ್ಕೆ ಸೇರಿದ ಜಾಹಿರಾತುಗಳು…! ಇನ್ನುಳಿದ 18 ಜಾಹಿರಾತುಗಳು ಇತೆರೆ ವರ್ಗಕ್ಕೆ ಸೇರಿದವು..!
ಬ್ಯಾನ್ ಆದ ಜಾಹಿರಾತುಗಳು “ಲೊರಿಯಲ್ ಇಂಡಿಯಾ”, “ಕೆವಿನ್ ಕೇರ್”, “ವಿಕೊ ಲ್ಯಾಬಲೇಟರೀಸ್” “ಅಮಿತಿ ಯೂನಿವರ್ಸಿಟಿ”, “ಇನ್ಸ್ಟಿಟ್ಯೂಟ್ ಆಫ್ ಫೈನೆನ್ಸ್ ಬ್ಯಾಂಕಿಂಗ್ ಅಂಡ್ ಇನ್ಷುರೆನ್ಸ್”, “ಹೆನೆಜ್ ಇಂಡಿಯಾ ಲಿಮಿಟೆಡ್” (ಕಾಂಪ್ಲೇನ್), ಟಿವಿ 18 ಬ್ರಾಡ್ ಕಾಸ್ಟ್(ಸಿ ಎನ್ ಬಿ ಸಿ), “ಲಿವಿಂಗ್ ಮೀಡಿಯಾ ಲಿಮಿಟೆಡ್ (ಇಂಡಿಯಾ ಟುಡೆ) , “ಫ್ಲಿಪ್ ಕಾರ್ಟ್ ಇಂಟರ್ನೆಟ್ ಪ್ರೆವೆಟ್ ಲಿಮಿಟೆಡ್” ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ ಎಸ್ ಎನ್ ಎಲ್), “ಯೂಬರ್”, “ವಡೋಫೋನ್ ಎಸ್ಸರ್ ಲಿಮಿಟೆಡ್” ಹೋಂಡ ಆ್ಯಕ್ಟಿವ” ಮತ್ತು ಸ್ನ್ಯಾಪ್ ಡೆಲ್ ನಂತಹ ಪ್ರಮುಖ, ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳಿಗೆ ಸಂಬಂಧಿಸಿದವು..!
ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿರುವಂತೆ  ಭಾರತದಲ್ಲಿಯೂ ಜಾಹಿರಾತುಗಳಲ್ಲಿನ ಕಟೆಂಟ್ ಗೆ ಸಂಬಂಧಿಸಿದಂತೆ ಸೆಲ್ಫ್ ರೆಗ್ಯುಲೇಟರಿ ಆರ್ಗನೈಸೇಷನ್ ಇದೆ..! ಅದೇ “ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ” (ಎಎಸ್ಸಿಐ)..! ಇದು ಜಾಹಿರಾತುಗಳನ್ನು ಪರಿಶೀಲಿಸುತ್ತೆ..! ಜಾಹಿರಾತುಗಳಿಗೂ ಕೆಲವೊಂದು ನೀತಿ-ನಿಯಮ ರೀತಿ-ರಿವಾಜುಗಳಿವೆ..! ದುಡ್ಡು ಕೊಡ್ತಾರೆ ಅಂತ ಜನರ  ಕಿವಿಗೆ ಹೂವು ಇಡುವ ಕೆಲಸವನ್ನು ಮಾಡ್ಬಾರ್ದು..! ಸುಳ್ಳಿ ಸುಳ್ಳು ಮಾಹಿತಿಯನ್ನು ಜಾಹಿರಾತುವಿನಲ್ಲಿ ಜನಾಕರ್ಷಕವಾಗಿ ಹೇಳಿದ್ದೇ ಆದರೆ ಅವುಗಳನ್ನು ನಿಷೇಧಿಸುವ ಕೆಲಸವನ್ನು ಈ ಏಜೆನ್ಸಿ ಮಾಡುತ್ತೆ..! ಅದೇ ರೀತಿ ಈಗ 82 ಜಾಹಿರಾತುಗಳು ಬ್ಯಾನ್ ಆಗಿವೆ..!

*ಅಮೇಟಿ ವಿಶ್ವವಿದ್ಯಾಲಯದ ಪರವಾದ ಜಾಹಿರಾತುವಿನಲ್ಲಿ ಈ ವಿಶ್ವವಿದದ್ಯಾಲಯವು ದೇಶದ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ..! ರ್ಯಾಕಿಂಗನಲ್ಲಿ ಮುಂಚೂಣಿಯಲ್ಲಿರು ವಿಶ್ವವಿದ್ಯಾಲಯವೆಂದು ಉತ್ಪ್ರೇಕ್ಷಿಸಲಾಗಿತ್ತು..! ಇದು ಸುಳ್ಳೆಂದು ತಿಳಿದು ಬಂದಿದ್ದರಿಂದ ಈ ಜಾಹಿರಾತನ್ನು ನಿಷೇಧಿಸಲಾಗಿದೆ..!

*ಲೋರೆಲ್ ಇಂಡಿಯಾ ಪ್ರೆ.ಲಿಮಿಟೆಡ್( ಗಾರ್ನಿಯರ್ ಪ್ಯೂರ್ ಆ್ಯಕ್ಟೀವ್ ನೀಮ್ + ತುಳಸಿ ಹೈ ಫಾಮಿಂಗ್ ಫೇಸ್ )
ಇದಕ್ಕೆ ಸಂಬಂಧಿಸಿದ ಜಾಹಿರಾತು ಒಂದರಲ್ಲಿ ಈ ಉತ್ಪನ್ನವನ್ನು ಬಳಸಿದ್ರೆ ಶೇ.99.9ರಷ್ಟು ಮೊಡವೆಯಿಂದ ಮುಕ್ತಿಹೊಂದ ಬಹುದೆಂದು ಕಿವಿಯಲ್ಲಿ ದಾಸವಾಳ ಮುಡಿಸಿದ್ರು..! ಇದನ್ನು ಪರೀಕ್ಷಿಸಿದಾಗ ಪಕ್ಕಾ ಸುಳ್ಳೆಂದು ಸಾಭೀತಾದ ಪರಿಣಾಮ ಆ ಜಾಹಿರಾತನ್ನು ಬ್ಯಾನ್ ಮಾಡಲಾಗಿದೆ..!

*ಲೋರೆಲ್ ಇಂಡಿಯಾ ಪ್ರೆ.ಲಿಮಿಟೆಡ್ ( ನ್ಯೂ ಗಾರ್ನಿಯರ್ ಆ್ಯಕ್ಷನ್ ಫೇಸ್ ವಾಶ್) :
ಇದರ ಜಾಹಿರಾತುವಿನಲ್ಲಿ ಈ ಫೇಸ್ ವಾಶ್ ಅನ್ನು ಬಳಸುವುದರಿಂದ ಫೇರ್ ಸ್ಕಿನ್ ಹೊಂದಬಹುದೆಂದು ತೋರಿಸಲಾಗಿತ್ತು..! ಇದರಿಂದ ಜನರ ದಾರಿ ತಪ್ಪಿಸುತ್ತಿದ್ದರಿಂದ ಇದನ್ನು ಬ್ಯಾನ್ ಮಾಡಲಾಗಿದೆ..!

* ಕರಿಯರ್ ಲಾಂಚರ್ : ಈ ಸಂಸ್ಥೆಗೆ ಸಂಬಂಧಿಸಿದ ಜಾಹಿರಾತು ಒಂದರಲ್ಲಿ ಸಿ ಎಲ್ ಎ ಟಿ (ಕಾಮನ್ ಲಾ ಎಂಟ್ರೆನ್ಸ್ ಟೆಸ್ಟ್)2015 ನ 5ಜನ ಟಾಪರ್ ಗಳಲ್ಲಿ ನಮ್ಮ ಸಂಸ್ಥೆಯವರೇ 3 ಜನರೆಂದು ಹೇಳರ್ತಾರೆ..!ಆದರೆ ಅದು ಸುಳ್ಳಾಗಿತ್ತಾದ್ದರಿಂದ ಅದನ್ನು ಬ್ಯಾನ್ ಮಾಡಿದ್ದಾರೆ..! ಅದೇರೀತಿ ಇದರ ಇನ್ನೊಂದು ಜಾಹಿರಾತುವಿನಲ್ಲಿಯೂ “ಸಿ ಎಲ್ ಎ ಟಿ ಸಿ ಎಲ್ ನಾಗ್ಪುರ್ ಸ್ಟೂಡೆಂಟ್ಸ್ ಕ್ರಿಯೇಟ್ ಹಿಸ್ಟರಿ..”! ಸ್ವರ್ಣ್ಮ ಮುಖರ್ಜಿ ಎಐಆರ್ 204, ಶ್ರಿಂಕಲಾಶಿಖರ್ ಎಐಆರ್ 606, ಶಿವಾನಿ ದೀಕ್ಷಿತ್ ಎಐಆರ್ 561, ದರ್ಶನ್ ಗಾಂಧಿ ಎಐಆರ್ 1472″ ನೇ ರ್ಯಾಂಕ್ ಎಂದು ಸುಳ್ಳು ಹೇಳಿತ್ತು..!

*ಪ್ಲಿಪ್ ಕಾರ್ಟ್ ಇಂಟರ್ನೆಟ್ ಪ್ರೆ. ಲಿಮಿಟೆಡ್ : ಇದರ ಜಾಹಿರಾತುವಿನಲ್ಲಿ ಎಂ ಆರ್ ಪಿ 799ರೂಪಾಯಿಗಳು ಆದ್ರೆ ನಾವು ನಿಮಗೆ ಕೇವಲ 399 ರೂಗಳಿಗೆ ನಮ್ಮ ಉತ್ಪನ್ನವನ್ನು ಕೊಡ್ತಾ ಇದ್ದೀವೆಂದು ಹೇಳಲಾಗಿತ್ತು..! ಆದರೆ ಅದರ ಎ ಆರ್ ಪಿ 499 ರೂಪಾಯಿಗಳು..! ಹೀಗೆ ಗ್ರಾಹರರನ್ನು ವಂಚಿಸ್ತಾ ಇದ್ದಿದ್ದಕ್ಕೆ ಬ್ಯಾನ್ ಮಾಡಲಾಗಿದೆ..!

*ಉಬೇರ್ : ಇದರ ಜಾಹಿರಾತುವಿನಲ್ಲಿ “ಯು ಡ್ರಿಂಕ್, ವಿ ಡ್ರೈವ್” ಎಂದು ಹೇಳ್ತಾ ಇತ್ತು..! ಹೀಗೆ ಕುಡಿಯಲು ಉತ್ತೇಜನ ನೀಡ್ತಾ ಇದೆ ಎಂಬ ಕಾರಣಕ್ಕಾಗಿ ಆ ಜಾಹಿರಾತು ಬ್ಯಾನ್ ಆಗಿದೆ..!

ಹೀಗೆ ಸುಳ್ಳನ್ನು ಹೆಳ್ತಾ ಗ್ರಾಹರಕರ ದಾರಿ ತಪ್ಪಿಸ್ತಾ ಇದ್ದ ಜಾಹಿರಾತುಗಳನ್ನು ಬ್ಯಾನ್ ಮಾಡಲಾಗಿದೆ…! ಇನ್ನಾದರು ಉತ್ಪನ್ನಗಳ ಮಾರಾಟಕ್ಕಾಗಿ ಸುಳ್ಳು ಹೇಳೋ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯ ನಿಲ್ಲಲಿ..! ಜನರೂ ಅಷ್ಟೇ ಜಾಹಿರಾತುವಿನಲ್ಲಿ ಬರುವುದೆಲ್ಲಾ ಸತ್ಯವೆಂದು ನಂಬುವುದನ್ನು ಬಿಡಲಿ..! ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡು ಅನ್ನೋತರ ಇನ್ನಾದರೂ ಎಲ್ಲಾ ಜಾಹಿರಾತುಗಳನ್ನು ಪರೀಕ್ಷಿಸಲಿ.. ಅವುಗಳಲ್ಲಿ ನಿಖರತೆ, ಸತ್ಯಾನು ಸತ್ಯತೆ ಮೌಲ್ಯಮಾಪನ ಮಾಡುವಂತಾಗಲಿ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ಡಿ.ವಿ.ಜಿ ನಮ್ಮನ್ನಗಲಿ 40ವರ್ಷ..! ಡಿ.ವಿ.ಜಿ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಬರುವ ಮೊದಲು ಎಷ್ಟೆಲ್ಲಾ ಕಷ್ಟಪಟ್ಟಿದ್ರು ಗೊತ್ತಾ..?

ಮೈಸೂರಿನ ದಿ ಗ್ರೇಟ್ ಸಮೋಸ ಮ್ಯಾನ್..! ಇವನ ಲೈಫಿನ ಸ್ಟೋರಿ ಅದೆಂಥಾ ಅದ್ಭುತ..!

ಭಾರತದ ಬಗ್ಗೆ ನಿಮಗೆ ತಿಳಿದಿರದ 10 ಸಂಗತಿಗಳು

ವಿಚಿತ್ರ, ವಿಭಿನ್ನ, ವಿಲಕ್ಷಣ ಮೂಢನಂಬಿಕೆಗಳು..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಶಿವಣ್ಣ ಆರಾಮಾಗಿದ್ದಾರೆ…ಡೋಂಟ್ ವರಿ..!

ಬಿಯರ್ ಬಾಟಲ್ ಗಳ ಮುಚ್ಚಳ ತೆಗೆದ ಹೆಲಿಕಾಪ್ಟರ್..!

ವಿಷ ಕುಡಿದು ಪ್ರೀತಿ ಉಳಿಸಿಕೊಂಡವರ ಕಥೆ..! ಅಷ್ಟಕ್ಕೂ ಅವರು ವಿಷ ಕುಡಿದಿದ್ದು ಯಾಕೆ ಗೊತ್ತಾ..?

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

“ಜುಕರ್ ಬರ್ಗ್”, “ಸ್ಟೀವ್ ಜಾಬ್ಸ್” ರಂತಹ ಉದ್ಯಮಿಗಳ ಯಶಸ್ಸಿಗೆ ಭಾರತದ ದೇವರೇ ಕಾರಣ..!

ಭಾರತೀಯರು ನೋಡಬೇಕಾದ ಭಾರತೀಯರ ವೀಡಿಯೋ..!

ಸಲ್ಮಾನ್ ಖಾನ್ ಹಾಗೂ ಪ್ರೇಮ್ ಗೂ ಎನ್ ಸಂಬಂಧ ಗೊತ್ತಾ…? ಇಲ್ಲಿದೆ ಸಲ್ಮಾನ್ ಪ್ರೇಮ್ ಕಹಾನಿ..

ನೀವು ತಿಳಿದುಕೊಳ್ಳಲೇಬೇಕಾದ ಕಂಪ್ಯೂಟರ್ ಟ್ರಿಕ್ಸ್..!

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

LEAVE A REPLY

Please enter your comment!
Please enter your name here