ಬೆಂಗಳೂರಿಗೂ ತಟ್ಟಿದ ದೆಹಲಿ ವಾಯು ಮಾಲಿನ್ಯ ಎಫೆಕ್ಟ್..!

Date:

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಸಿಲಿಕಾನ್ ಸಿಟಿಗೂ ಕೂಡ ಅದರ ಎಫೆಕ್ಟ್ ತಟ್ಟಿದೆ. ಬೆಂಗಳೂರಿನಲ್ಲೂ ವಾಯು ಮಾಲಿನ್ಯ ಸಾಧ್ಯತೆಗಳು ಹೆಚ್ಚಿರುವ ಹಿನ್ನಲೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಸರ್ಕಾರಕ್ಕೆ ತಿಳಿಸಿದೆ. ದೆಹಲಿಯಲ್ಲಿ ಜಾರಿಯಾಗಿರುವ ಹಾಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ವಾಹನಗಳ ನೊಂದಣಿಗೆ ಕಡಿವಾಣ ಹಾಕಬೇಕು, 10 ವರ್ಷಗಳ ಹಳೆಯ ವಾಹನಗಳನ್ನು ರಸ್ತೆಗಿಳಿಯದ ಹಾಗೆ ಗೇಟ್ ಪಾಸ್ ಕೊಡಬೇಕು, ಸಿಎನ್‍ಜಿ, ವಿದ್ಯುತ್ ಚಾಲಿತ ವಾಹನ ಬಳಕೆಗೆ ಹೆಚ್ಚಿ ಆದ್ಯತೆ ನೀಡಿಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ. ಕಳೆದ 10 ವರ್ಷಗಳಿಗೆ ಹೋಲಿಸಿಕೊಂಡರೆ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಿಗೆ ಕಂಡಿದೆ. ಅದ್ರಲ್ಲೂ ವೈಟ್ ಫೀಲ್ಡ್ ಪ್ರದೇಶಗಳಲ್ಲಿ ಕಳೆದೊಂದು ವರ್ಷಗಳಲ್ಲಿ ಶೇ.91.8 ಮೈಕ್ರೊ ಗ್ರಾಂ ನಿಂದ ಶೇ.105 ಆರ್‍ಎಸ್‍ಪಿಎಂ ಏರಿಕೆ ಕಂಡು 189ಕ್ಕೆ ದಾಟಿದೆ. ಅದೇ ರೀತಿ ಯಲಹಂಕದಲ್ಲಿ ಶೇ.57.6ರಷ್ಟಿದ್ದ ಆರ್‍ಎಸ್‍ಪಿಎಂ ಪ್ರಮಾಣ ಶೇ.91ಕ್ಕೆ ಏರಿಕೆ ಕಂಡು ಈಗ 105ಕ್ಕೆ ಬಂದು ನಿಂತಿದೆ.. ಇದೇ ರೀತಿಯಾಗಿ ಏನಾದರೂ ಮುಂದುವರೆದಿದ್ದೇ ಆದಲ್ಲಿ ಬೆಂಗಳೂರು ದೆಹಲಿ ಮಾಲಿನ್ಯವನ್ನು ಹಿಂದಕ್ಕೆ ಸರಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದೆ.
ನಗರದಲ್ಲಿ ಹೆಚ್ಚಾದ ವಾಹನಗಳ ಸಂಖ್ಯೆ.!
ಇನ್ನು ಸಿಲಿಕಾನ್ ಸಿಟಿಯಲ್ಲಿ 80ರ ದಶಕದಲ್ಲಿದ್ದ ವಾಹನಗಳಿಗೂ ಪ್ರಸ್ತುತದಲ್ಲಿರುವ ವಾಹನಗಳ ದಟ್ಟಣೆಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳಿದೆ. ಅಂದು ನಗರದಲ್ಲಿ ಕೇವಲ 1.68ನ ಲಕ್ಷ ವಾಹನಗಳು ಮಾತ್ರ ಇತ್ತು. ಅದಾದ ಬಳಿಕ ಅಂದರೆ 2000 ಇಸವಿಯಲ್ಲಿ 11.6ನ ಲಕ್ಷಕ್ಕೆ ಬಂದು ತಲುಪಿತು. ಆದರೆ 2005 ರಿಂದ 2016ರ ವರೆಗೆ ಅಂದರೆ ಕೇವಲ 11 ವರ್ಷದಲ್ಲಿ ನಗರದಲ್ಲಿ ಬರೋಬ್ಬರಿ 40 ಲಕ್ಷ ವಾಹನಗಳು ಹೆಚ್ಚಾಗಿದೆ. ಇದೇ ರೀತಿ ಮುಂದೆಯೂ ಹೀಗೆ ಮುಂದುವರೆದರೆ ದೆಹಲಿಗೂ ಬೆಂಗಳೂರಿಗೂ ಯಾವುದೇ ವ್ಯತ್ಯಾಸವಿರೋದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಉಂಟಾಗುತ್ತಿರುವ ವಾಯು ಮಾಲಿನ್ಯದ ಪ್ರಮಾಣವನ್ನು ಗಂಭೀರವಾಗಿ ಪರಿಗಣಿಸಿಕೊಂಡಿರುವ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಸರ್ಕಾರಕ್ಕೆ ಕೆಲವು ಪ್ರಸ್ತಾವನೆ ನೀಡಲು ಮುಂದಾಗಿದೆ. ಈ ಪ್ರಕಾರವಾಗಿ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಮಹಾನಗರದಲ್ಲಿ ನಿಷೇಧಿಸುವಂತೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ವಾಹನಗಳಿಂದಲೇ ಹೆಚ್ಚು ಮಾಲಿನ್ಯ ಉಂಟಾಗುತ್ತಿರುವ ಕಾರಣದಿಂದ ಒಬ್ಬರಿಗೆ ಒಂದೇ ಬೈಕು, ಒಂದೇ ಕಾರು ಎನ್ನುವ ಕಾನೂನನ್ನು ತ್ವರಿತವಾಗಿ ಜಾರಿಗೆ ತರಬೇಕು, ವಾಹನಗಳಲ್ಲಿ ಸಿಎನ್‍ಜಿಗೆ ಪರಿವರ್ತಿಸಬೇಕು, ಅಲ್ಲದೇ ಹೊಸ ವಾಹನಗಳಿಗೂ ಇದನ್ನು ಅಳವಡಿಸಬೇಕು ಎಂದು ಸಲಹೆ ನೀಡಿದೆ.

Like us on Facebook  The New India Times

POPULAR  STORIES :

ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ

ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!

12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!

ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?

ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...