ಏರ್ಟೆಲ್, ವೊಡಾಫೋನ್, ಐಡಿಯಾ ಸಿಮ್ ಬಳಸುತ್ತಿದ್ದೀರಾ..? ಹಾಗಿದ್ರೆ ನಿಮ್ಮ ಸಿಮ್ ಬ್ಲಾಕ್ ಆಗಬಹುದು..!!
ಹೌದು, ಇಂತಹದೊಂದು ಸುದ್ದಿ ಬಂದಿದೆ.. ಈ ಕಂಪನಿಗಳು 25 ಕೋಟಿ ಗ್ರಾಹಕರಿಗೆ ನೀಡಿರುವ ಸಂಪರ್ಕವನ್ನ ಕಡಿತಗೊಳಿಸುತ್ತಿದೆ.. ಇದಕ್ಕೆ ಈ ಕಂಪನಿಗಳು ಕೊಡುತ್ತಿರುವ ಕಾರಣ ಗ್ರಾಹಕರ ಸರಾಸರಿ ಆದಾಯದಲ್ಲಿ ಭಾರೀ ಇಳಿಕೆ ಕಂಡಿರೋದು..
ಫೈನಾನ್ಸಿಯಲ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, 25 ಕೋಟಿ ಚಂದಾದಾರರು ತಿಂಗಳಿಗೆ 35 ರೂಪಾಯಿಗಳಿಗಿಂತ ಕಡಿಮೆ ರೀಜಾರ್ಜ್ ಮಾಡಿಸಿಕೊಳ್ಳುತ್ತಾರಂತೆ.. ಹೀಗೆ ಮಾಡುವವರಲ್ಲಿ ಏರೆಟೆಲ್ ನಿಂದ 10 ಕೋಟಿ, ಐಡಿಯಾ,ವೋಡಾಫೋನ್ ಬಳಕೆದಾರರಿಂದ 15 ಕೋಟಿ ಗ್ರಾಹಕರಿದ್ದಾರಂತೆ.. ಇವರಿಂದ ಕಂಪನಿಗೆ ನಷ್ಟ ಉಂಟಾಗುತ್ತಿದ್ದು, ಕಡಿಮೆ ಅಂದ್ರು 35 ರೂಪಾಯಿ ರೀಚಾರ್ಜ್ ಮಾಡಿಕೊಳ್ಳುವುದನ್ನ ಕಡ್ಡಾಯಗೊಳಿಸಲು ಈ ಕಂಪನಿಗಳು ಒಮ್ಮತದಿಂದ ನಿರ್ಧರಿಸಿವೆ ಎನ್ನಲಾಗಿದೆ.. ಅಕಸ್ಮಾತ್ ಈ ಮಾನದಂಡಕ್ಕೆ ಒಳಪಡದ ಗ್ರಾಹಕರ ಸಿಮ್ ಗಳನ್ನ ಬ್ಲಾಕ್ ಮಾಡಲಾಗುತಂತೆ..