ಅಕ್ಟೋಬರ್ 14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್..!

0
127

ಬಂದ್, ಬಂದ್, ಬಂದ್..! ತಿಂಗಳಲ್ಲಿ ಮೂರರಿಂದ ನಾಲ್ಕು ಮುಷ್ಕರಗಳು ಮಾಮೂಲಾಗಿ ಬಿಟ್ಟಿದೆ..! ಇದರಿಂದ ದೇಶಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವೂ ಆಗ್ತಾ ಇದೆ..! ಕಾರ್ಮಿಕ ಮುಷ್ಕರದ ಬಿಸಿ ಇನ್ನೂ ಆರಿಲ್ಲ..! ಮೊನ್ನೆ ಮೊನ್ನೆ ಕಳಸ-ಬಂಡೂರಿ ರಾಜ್ಯವ್ಯಾಪಿ ಮುಷ್ಕರದ ಕಾವು ಇನ್ನೂ ತಣ್ಣಗಾಗಿಲ್ಲ..! ಈಗ ಮತ್ತೊಂದು ಬಂದ್ ಗೆ ದಿನಗಣನೆ ಆರಂಭವಾಗಿದೆ..! ಈ ಬಂದ್ ನಡೆದಿದ್ದೇ ಆದರೆ ಅನೇಕ ಜನ ಸಾವು ಬದುಕಿನ ನಡುವೆ ಹೋರಾಡ ಬೇಕಾಗುತ್ತೆ..! ಇದು ಡಿಜಿಟಲ್ ಇಂಡಿಯಾದ ಫಲಶ್ರುತಿಯ ಬಂದ್ ಎಂದರೂ ಅಚ್ಚರಿಯಿಲ್ಲ..! ಯಾಕಂದ್ರೆ ಈ ಬಾರಿ ಬಂದ್ ಮುಷ್ಕರ ಮಾಡ್ತಾ ಇರೋರು “ಔಷಧ ವ್ಯಾಪಾರಿಗಳು”..!

ಯಸ್, ಅಕ್ಟೋಬರ್ 14 ಕ್ಕೆ ರಾಷ್ಟ್ರ ವ್ಯಾಪಿ ಬಂದ್ ಗೆ “ಔಷಧ ವ್ಯಾಪಾರಿಗಳ ಸಂಘ ಕರೆಕೊಟ್ಟಿದೆ”..! ಕೆಂದ್ರ ಸರ್ಕಾರ “ಆನ್ ಲೈನ್ ಫಾರ್ಮಸಿ” ಮೂಲಕ ಔಷಧ ಮಾರಾಟಕ್ಕೆ ಮುಂದಾಗಿರುವುದೇ ಈ ರಾಷ್ಟ್ರವ್ಯಾಪಿ ಬಂದ್ ಗೆ ಕಾರಣ..! ಈ ಬಂದಿನಿಂದಾಗಿ ದೇಶಕ್ಕೆ ಎಷ್ಟು ನಷ್ಟವಾಗುತ್ತೆ ಅನ್ನೋ ಯೋಚ್ನೆ, ಲೆಕ್ಕಾಚಾರ ಬೇಡ್ವೇ ಬೇಡ..! ಈ ದಿನ ಔಷಧವೇ ಸಿಗುವುದು ಕಷ್ಟ..! ಆದ್ರಿಂದ ಅದೆಷ್ಟೋ ಜನ ಸಾವು ಬದುಕಿನ ನಡುವೆ ಹೋರಾಡುತ್ತಾರೋ.. ಆ ಶಿವನೇ ಬಲ್ಲ..! ಹಂಗಂತ ಔಷಧ ವ್ಯಾಪಾರಿಗಳು ಬಂದ್ ಮಾಡ್ದೇ ಇದ್ರೆ.. ಅಥವಾ ಸರ್ಕಾರಕ್ಕೆ ಎಚ್ಚರಿಕೆ ನೀಡ್ದೇ ಇದ್ರೆ ಮೆಡಿಕಲ್ ಶಾಪ್ ಅನ್ನೇ ನೆಚ್ಚಿಕೊಂಡವರು ಬೀದಿಗೆ ಬರ ಬೇಕಾಗುತ್ತೆ..! ಚಿಲ್ಲರೆ, ಸಗಟು ಔಷಧ ವ್ಯಾಪಾರಿಗಳನ್ನಂತೂ ದೇವರೇ ಕಾಪಾಡ ಬೇಕು..!
ಕೇಂದ್ರ ಸರ್ಕಾರದ “ಡಿಜಿಟಲ್ ಇಂಡಿಯಾ” ಉತ್ತಮವಾದ ಕಲ್ಪನೆ ಎನ್ನುವುದರಲ್ಲಿ ಸಂಶಯವೇ ಇಲ್ಲ..! ಆದ್ರೆ ಇದರಲ್ಲಿಯೂ ಅನೇಕ ಲೋಪಗಳಿವೆ..! ಆ ಲೋಪಗಳಲ್ಲಿ ಈ ಆನ್ ಲೈನ್ ಫಾರ್ಮಸಿಯೂ ಒಂದಾಗಿದೆ..! ಕೇಂದ್ರ ಸರ್ಕಾರದ 1940ರ ಡ್ರಗ್ಸ್ ಕಾಸ್ಮೆಟಿಕ್ ಆಕ್ಟ್ ನ ಸೆಕ್ಷನ್ 64(10)ರಂತೆ ಯಾವುದೇ ಔಷಧಗಳನ್ನು ವಿತರಣೆ ಮಾಡುವ ಮೊದಲು ವೈದ್ಯರ ಸಲಹೆಯನ್ನು ಪಡೆದು ಕೊಂಡು, ನೊಂದಾಯಿತ ಅರ್ಹ ಮೆಡಿಕಲ್ ಶಾಪ್ ಅಥವಾ ಔಷಧ ಮಾರಾಟ ಮಾಡುವ ವ್ಯಕ್ತಿಯು ಔಷಧವನ್ನು ನೀಡ ಬೇಕಾಗುತ್ತದೆ..! ವೈದ್ಯರ ಸಲಹೆ ಇಲ್ಲದೆ ಆತ ಯಾವುದೇ ಔಷಧಗಳನ್ನು ರೋಗಿಗಾಲೀ ಅಥವಾ ರೋಗಿಗಳ ಕಡೆಯವರಿಗಾಗಲೀ ಕೊಡುವಂತಿಲ್ಲ..! ಆದ್ರೆ ಈ ಆನ್ ಲೈನ್ ಫಾರ್ಮನಿಸಿಗಳಿಗೆ ಔಷಧ ನೀಡಲು ಅನುಮತಿ ಕೊಟ್ಟಿದ್ದೇ ಆದಲ್ಲಿ ಇದ್ಯಾವುದೇ ನಿಯಮ ಪಾಲನೆ ಆಗಲ್ಲ..! ಇನ್ನೂ ಗಟ್ಟಿಯಾಗಿ ಹೇಳ್ಬೇಕು ಅಂದ್ರೆ ಆನ್ ಲೈನ್ ಮೂಲಕ ಯುವಕರು ಬೇಕಾಗಿರೋ, ಬೇಡವಾಗಿರೋ ಔಷಧಗಳನ್ನೂ ತರಿಸಿಕೊಂಡರೆಂದ್ರೆ..?! ಅವರ ಮನೆಯ ಬಾಗಿಲಿಗೇ ಆ ಔಷಧ ಬಂದು ಬಿದ್ರೆ..? ಅದು ಯುವಕರ ಮೇಲೆ ಎಂಥಹಾ ಪರಿಣಾಮ ಬೀರ ಬಹುದು..?
ಆನ್ ಲೈನ್ ಫಾರ್ಮಸಿಗೆ ಕೇಂದ್ರ ಸರ್ಕಾರ ಅನುಮತಿ ನೀಡ್ತಾ ಇರೋದು ತನ್ನ “ಡಿಜಿಟಲ್ ಇಂಡಿಯಾ”ದ ಕನಸಿನೊಂದಿಗೆಯೇ..! ಆದ್ರೆ ಎಲ್ಲಾವನ್ನೂ ಡಿಜಿಟಲೀಕರಣ ಮಾಡ್ತಾ ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ..! ಅಕ್ಟೋಬರ್ 14 ಬಂದ್ ಗೆ ಕೇಂದ್ರ ಔಷಧ ವ್ಯಾಪಾರಿಗಳ ಸಂಘಕ್ಕೆ ಕರ್ನಾಟಕ ಔಷಧ ಮಾರಾಟಗಾರರ ಸಂಘವೂ ಬೆಂಬಲ ನೀಡಿದ್ದು.. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿಯೂ ಆ ದಿನ ಔಷಧ ಸಿಗುವುದು ಕಷ್ಟ..! ಸರ್ಕಾರ ಈ ಬಗ್ಗೆ ಕೂಡಲೇ ಗಮನಿಸಿ ಬಂದ್ ಗೂ ಮುನ್ನವೇ ಆನ್ ಲೈನ್ ಫಾರ್ಮಸಿಗೆ ಅನುಮತಿಯನ್ನು ನೀಡಲ್ಲವೆಂದು ಸ್ಪಷ್ಟಪಡಿಸಿ ಮೆಡಿಕಲ್ ಶಾಪ್ ಗಳು ಬಂದ್ ಆಗದಂತೆ ತಡೆಯಲೇ ಬೇಕು..! ಒಂದುವೇಳೆ ಬಂದ್ ಆಗಿದ್ದೇ ಆದಲ್ಲಿ ಹಣದ ನಷ್ಟವನ್ನು ಹೆಂಗಾದ್ರೂ ಭರಿಸ ಬಹುದು.. ಆದ್ರೆ ಜನರ ಪ್ರಾಣಕ್ಕೇ ಹಾನಿಯಾದ್ರೆ.. ಸರ್ಕಾರ ಏನು ಮಾಡುತ್ತೆ..!
ಈ ವಿಷಯದಲ್ಲಿ ಪಕ್ಷದ ಪರವಾಗಿ ಬ್ಯಾಟ್ ಬೀಸದೇ ಜನಸಾಮಾನ್ಯರ ದೃಷ್ಠಿಯಲ್ಲಿ ಎಲ್ಲರೂ ನೋಡ್ಲೇ ಬೇಕು..! ಡಿಜಿಟಲ್ ಇಂಡಿಯಾ ಕಲ್ಪನೆ ಒಳ್ಳೆಯದೇ ಆಗಿರ ಬಹುದು ಆದ್ರೆ ಆನ್ ಲೈನ್ ಫಾರ್ಮಸಿ ದೇವ್ರಾಣೆಗೂ ಒಳ್ಳೆಯದಲ್ಲ..! ಜನರ ಆರೋಗ್ಯಕ್ಕೂ ತೊಂದರೆ.., ಔಷಧ ವ್ಯಾಪಾರಿಗಳಿಗೂ ಹೊಟ್ಟೆಗೆ ತಣ್ಣೀರು..! ಸೋ, ಸರ್ಕಾರ ಆನ್ ಲೈನ್ ಫಾರ್ಮಸಿಗೆ ಅನುಮತಿ ನೀಡದೆ ಮತ್ತು ಅದರ ಪರ ಪ್ರಚಾರವನ್ನು ಕೂಡಲೇ ನಿಲ್ಲಿಸಿದ್ರೆ ಒಳ್ಳೆಯದು..!
ಕೆಲವು ಜನರಲ್ಲಿ ನಮ್ಮ ಕಳಕಳಿಯ ಪ್ರಾರ್ಥನೆ, ನೀವು ಪಕ್ಷ ಮಾಡಿದ್ದೇ ಸರಿಯೆಂದು ಈ ಆನ್ ಲೈನ್ ಫಾರ್ಮಸಿಯನ್ನು ಒಪ್ಪಿಕೊಳ್ಳಬೇಡಿ..! ಸುಮ್ನೆ ಯೋಚನೆ ಮಾಡಿ ನಾಡಿದ್ದು ಅಕ್ಟೋಬರ್ 14 ಯಾವುದೇ ಮೆಡಿಕಲ್ ಶಾಪ್ ಬಾಗಿಲು ತೆಗೆದಿರಲ್ಲ..! ನಿಮಗೋ, ನಿಮ್ಮ ಗಂಡನಿಗೋ, ಹೆಂಡತಿಗೋ, ಮಕ್ಕಳಿಗೋ ಹುಷಾರಿರಲ್ಲ..! ಆಸ್ಪತ್ರೆಯಲ್ಲೂ ಔಷಧ ಸಿಗಲ್ಲ, ಡಾಕ್ಟರ್ ಹೇಳ್ತಾರೆ, “ಹೊರಗಡೆಯಿಂದ ಏನಾದ್ರೂ ಮಾಡಿ ಈ ಔಷಧ ತಂದು ಕೊಡಿ, ಇಲ್ಲ ಅಂದ್ರೆ ನಿಮ್ಮವರು ಉಳಿಯೋದು ಕಷ್ಟ” ಅಂತ..! ಆಗ ಏನ್ ಮಾಡ್ತೀರಾ..?( ಈ ಪರಿಸ್ಥಿತಿ ಯಾರಿಗೂ ಬರದಿರಲಿ) .. ಇನ್ನೂ ಆನ್ ಲೈನ್ ಫಾರ್ಮಸಿಗೆ ಬೆಂಬಲ ನೀಡಿದ್ರೀ ಅಂದು ಕೊಳ್ಳಿ.. ನಿಮ್ಮ ಮಗನೇ ಬೇಡದ ಡ್ರಗ್ಸ್ ಅನ್ನು ಮನೆ ತನಕ ತರಿಸಿಕೊಂಡ್ರೇ..!? ಇವೆಲ್ಲವನ್ನೂ ಯೋಚ್ನೆ ಮಾಡಿ.. ಸರ್ಕಾರಕ್ಕೆ ಮನವರಿಕೆ ಮಾಡಿ..!

  • ಶಶಿಧರ ಡಿ ಎಸ್ ದೋಣಿಹಕ್ಲು

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

LEAVE A REPLY

Please enter your comment!
Please enter your name here