ಅವನು ಅವಳಿಗೆ ಇಲ್ಲೀ ತನಕ ನೂರು ಸಲ ಕೇಳಿದ್ದಾನೆ, `ನಿಂಗೆ ನನ್ನ ಕಂಡ್ರೆ ಇಷ್ಟ ಇದಿಯೊ ಇಲ್ವೋ’ ಅಂತ..! ಅವಳು ಮಾತ್ರ ಇಲ್ಲೀ ತನಕ ಇಷ್ಟ ಇದೆ ಅಂತಾನೂ ಹೇಳಿಲ್ಲ, ಇಲ್ಲ ಅಂತಾನೂ ಹೇಳಿಲ್ಲ..! ಪ್ರತಿದಿನ ಬೆಳಗ್ಗೆ 9 ಗಂಟೆಗೆ ಅವಳ ಏರಿಯಾದ ಬಸ್ ಸ್ಟ್ಯಾಂಡಲ್ಲಿ ಆ ಹುಡುಗಿ ಹಾಜರ್. ಒಂದು ದಿನವು ಚೂಡಿದಾರ್ ಬಿಟ್ಟು ಬೇರೆ ಯಾವುದೇ ತರಹದ ಬಟ್ಟೆ ಹಾಕೆ ಇಲ್ಲ..! ಅವಳು ನೋಡೋಕೆ ಒಂಥರಾ ಸ್ನಿಗ್ದ ಸುಂದರಿ. ಹಾಗಾಗಿ ಆ ಏರಿಯಾದ ಹುಡುಗರಿಗೆಲ್ಲಾ ಅವಳ ಮೇಲೆ ಕಣ್ಣು..! ಹಾಗೇ ಈ ಹುಡುಗನಿಗೂ..! ಇವನ ಹೆಸರು ಸುಶಾಂತ್. ನೋಡೋಕೆ ಮುದ್ದುಮುದ್ದಾಗಿದ್ದಾನೆ. ಕೆಟ್ಟವನು ಅಂತ ಅನ್ಸಲ್ಲ..! ಆ ಹುಡುಗಿಯ ಹಿಂದೆ ಬಿದ್ದು 2-3 ತಿಂಗಳಾಯ್ತು. ಆದ್ರೆ ಒಂದು ದಿನವೂ ಅವಳು ಇವನನ್ನು ನೋಡಿ ನಗಲೂ ಇಲ್ಲ, ಇವನು ಕೇಳಿದ್ದಕ್ಕೆ ಯೆಸ್, ನೋ ಹೇಳಲೇ ಇಲ್ಲ..! ಅವನೂ ಅವನ ಪ್ರಯತ್ನ ಬಿಡಲೇ ಇಲ್ಲ..! ಅಂದಹಾಗೆ ಆ ಹುಡುಗಿ ಹೆಸರು ಸುಶ್ರಾವ್ಯ..! ಅವಳ ಹೆಸರು ಅವನಿಗೆ ಗೊತ್ತಾಗಿದ್ದೇ ಅವಳ ನೋಟ್ ಬುಕ್ ಮೇಲಿದ್ದ ಹೆಸರಿನಿಂದಾಗಿ. ಇಲ್ಲ ಅಂದ್ರೆ ಅವಳ ಹೆಸರೂ ಇವನಿಗೆ ಗೊತ್ತಾಗ್ತ ಇರ್ಲಿಲ್ಲ..! ಆದ್ರೂ ಒಬ್ಬ ಹುಡುಗ ನೂರಾರು ಸಲ ಕಾಡಿಬೇಡಿ, ಹತ್ತಿರ ಬಂದು ಐ ಲವ್ ಯೂ ಅಂತ ಹೇಳಿದ್ರೂ ಅವಳು ಒಂದು ಮಾತಾದ್ರೂ ಆಡೋದು ಬೇಡ್ವಾ..? ಏನೂ ಕೇಳಿಸಿಕೊಂಡೇ ಇಲ್ಲ ಅನ್ನೋ ತರ ನಿಂತಿರೋದು ನೋಡಿ ಇವನಿಗೂ ತಲೆಕೆಟ್ಟು ಹೋಗ್ತಿತ್ತು..! ಆದ್ರೂ ಏನು ಬೈತಾ ಇಲ್ವಲ್ಲಾ ಅನ್ನೋ ಸಮಾಧಾನಕ್ಕೆ ದಿನವೂ ಬಂದು ಹತ್ತಿರ ನಿಂತು ಪ್ರೀತಿ ನಿವೇದನೆ ಮಾಡ್ಕೋತಿದ್ದ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಒಂದು ದಿನ ಅವಳ ಮನೆ ತನಕ ಫಾಲೋ ಮಾಡ್ದ..! ಅವಳು ಆ ಕಾಲೇಜ್ ಪ್ರಿನ್ಸಿಪಾಲ್ ಮಗಳು..! ಓ, ನನ್ನ ಕಥೆ ಮುಗೀತು ಅಂತಾನೆ ಅನ್ಕೊಂಡ. ಆದ್ರೂ ಹೇಗಾದ್ರೂ ಮಾಡಿ ಅವಳನ್ನು ಪ್ರೀತಿ ಮಾಡಲೇಬೇಕು ಅಂತ ನಿರ್ಧಾರ ಮಾಡಿದ್ರಿಂದ ಅವನು ಅವನ ಪ್ರಯತ್ನ ಬಿಡೋಕೆ ರೆಡಿ ಇರಲಿಲ್ಲ..! ಮಾರನೇ ದಿನವೂ ಅವಳು ಹಸಿರು ಚೂಡಿದಾರ್ ಹಾಕ್ಕೊಂಡು, ಎಂದಿಗಿಂತ ಸಖತ್ ಸುಂದರವಾಗಿ ಕಾಣ್ತಿದ್ಲು..! ಇವನು ತಂದಿದ್ದ ಗ್ರೀಟಿಂಗ್ ಕಾರ್ಡ್, ರೋಜ್ ಎಲ್ಲಾ ಅವಳ ಕೈಗಿಟ್ಟ..! `ಸೀರಿಯಸ್ ಆಗಿ ನಿಮ್ಮನ್ನ ಲವ್ ಮಾಡ್ತಿದೀನಿ ಕಣ್ರೀ’ ಅಂದ..! ಆ ಕಡೆಯಿಂದ ಅವತ್ತೂ ಉತ್ತರ ಬರಲೇ ಇಲ್ಲ..! ಬಸ್ ಹತ್ತಿದವಳೇ ಅವನು ಕೊಟ್ಟ ಗ್ರೀಟಿಂಗ್ ಓಪನ್ ಮಾಡಿದ್ಲು..! `ಸುಶ್ರಾವ್ಯ ಅವರೇ, ನಿಮ್ಮನ್ನು ನಾನು ತುಂಬಾ ಪ್ರೀತಿಸ್ತೀನಿ..! ನಿಮ್ಮ ಹಿಂದೆ ಬಿದ್ದು 3 ತಿಂಗಳಾಯ್ತು. ನೀವು ನನ್ನ ಪ್ರೀತಿಗೆ ಯೆಸ್ ಅಥವಾ ನೋ ಹೇಳಲೇ ಇಲ್ಲ..! ಇದು ನನ್ನ ಕೊನೆಯ ಪ್ರಯತ್ನ..! ನಿಮ್ಮ ಹೆಸರಿನ ಹಾಗೆ ನಿಮ್ಮ ಮಧುರವಾದ ಧ್ವನಿಯಲ್ಲಿ ಬಂದು ಲವ್ ಯೂ ಟೂ ಅಂತ ಹೇಳಿಬಿಡಿ.. ನಾನು ಕಾಯ್ತಾ ಇರ್ತೀನಿ…!’ ಇವಳ ಕಣ್ಣು ಒದ್ದೆಯಾಯ್ತು..! ನನಗೂ ಇದೆಲ್ಲಾ ಗೊತ್ತು, ಆದ್ರೆ ಏನ್ ಮಾಡ್ಲಿ..? ಅಂತ ಯೋಚಿಸಿ ಅದೇ ಕಾರ್ಡಲ್ಲಿ ಅವಳ ಉತ್ತರ ಬರೆದು ಸಂಜೆ ಬಸ್ ಸ್ಟ್ಯಾಂಡಲ್ಲಿ ಕಾಯ್ತಿದ್ದ ಅವನ ಕೈಗೆ ಆ ಕಾರ್ಡ್ ಇಟ್ಟು ಹೋದ್ಲು..! `ರೀ ರೀ ಅಂತ ಅವನು ಎಷ್ಟೇ ಕೂಗಿದ್ರು ಅವಳು ತಿರುಗಲೇ ಇಲ್ಲ..! ಕಾರ್ಡ್ ವಾಪಸ್ ಕೊಟ್ಟ ನೋವಲ್ಲಿ ಆ ಕಾರ್ಡ್ ಹಿಡ್ಕೊಂಡು ಅವನ ಮನೆಗೆ ಹೋಗಿ ರೂಮಿನ ಬಾಗಿಲು ಹಾಕ್ಕೊಂಡು ಸುಮ್ಮನೆ ಮಲಗಿಬಿಟ್ಟ.! ಯಾಕೋ ಸ್ವಲ್ಪ ಹೊತ್ತಲ್ಲೇ ಮತ್ತೆ ಎದ್ದು ಆ ಕಾರ್ಡ್ ತೆಗೆದು ನೋಡಿದ..! ಅವಳು ಮೂರು ಪದ ಬರೆದಿದ್ಲು..! ಅದನ್ನು ನೋಡಿ ಬಿಕ್ಕಿಬಿಕ್ಕಿ ಅತ್ತ..! ಅವನಿಗೆ ದುಃಖ ತಡೆಯಲು ಸಾಧ್ಯವಾಗಲೇ ಇಲ್ಲ..! ಅವಳ ಮೂರು ಪದದ ಉತ್ತರ ಹೀಗಿತ್ತು…` ನಾನು ಮೂಗಿ, ಕಿವುಡಿ..!’
ಅವನಿಗೆ ಅವಳ ಅಸಾಹಯಕತೆ ನೆನೆದು ದುಃಖ ಉಮ್ಮಳಿಸಿ ಬಂತು..! ಅವಳಿಗೆ ಮಾತು ಬರದಿದ್ರೂ, ಕಿವಿ ಕೇಳದಿದ್ರೂ ಅವಳೇ ನನ್ನ ಹೆಂಡ್ತಿ ಅಂತ ಡಿಸೈಡ್ ಮಾಡ್ದ..! ಬೆಳಗ್ಗೆ ತನಕ ಅವನಿಗೆ ನಿದ್ದೆ ಬರಲಿಲ್ಲ..! ಬೆಳಗಾಗಿದ್ದೇ ತಡ ಹೋಗಿ ಬಸ್ ಸ್ಟ್ಯಾಂಡಲ್ಲಿ ನಿಂತ..! ಅವಳು ಬಂದ್ಲು.. ಅವಳಿಗೆ ತಾನು ಬರೆದಿದ್ದ ಪತ್ರ ಕೈಗಿಟ್ಟ..!
`ಸುಶ್ರಾವ್ಯ, ನಿಮ್ಮ ಹೆಸರಲ್ಲಿ ಮಾಧುರ್ಯ ಇದೆ. ಇನ್ನು ನಿಮಗೆ ಧ್ವನಿ ಯಾಕೆ ಬೇಕು..? ನಿಮಗೆ ನಾನು ಧ್ವನಿಯಾಗಿರ್ತೀನಿ..! ಈ ಕೆಟ್ಟ ಪ್ರಪಂಚದಲ್ಲಿ ಕೇಳಿಸಿಕೊಳ್ಳೋಕೆ ಒಳ್ಳೇದೇನಿದೆ..? ನೀವೇನೂ ಕೇಳೋದೇ ಬೇಡ..! ನನ್ನ ಮನಸಿನ ಮಾತು ನಿಮಗೆ ಕೇಳಿದ್ರೆ ಸಾಕು..! ನೀವೇ ನನ್ನ ಹೆಂಡ್ತಿ ಅಂತ ಡಿಸೈಡ್ ಮಾಡಿದೀನಿ..! ನಾನು ನಿಮ್ಮನ್ನ ತುಂಬಾ ಪ್ರೀತಿಸ್ತೀನಿ.. ನನ್ನ ಮದ್ವೆ ಆಗ್ತೀರಾ…? ಅವಳ ಕಣ್ಣು ತುಂಬಿಬಂತು..ಅವಳ ಬಾಯಿಯಿಂದಲೂ ಮಾತನಾಡಲು ಸಾಧ್ಯವಿಲ್ಲದನ್ನು ಅವಳ ಕಣ್ಣುಗಳು ಮಾತಾಡಿದ್ವು..! ಅವತ್ತು ಆರಂಭವಾದ ಪ್ರೀತಿಗೆ ಯಾವತ್ತೂ ಕೊನೆಯಿಲ್ಲ..! ಅಂದಹಾಗೆ ಇವರ ಪ್ರೀತಿ ಕುರುಡಲ್ಲ, ಮೂಕ..! ಹಾಗಾಗಿ ನೋ ಜಗಳ, ನೋ ಗಲಾಟೆ..! ಬರೀ ಪ್ರೀತಿ ಅಷ್ಟೆ..!
-ಕೀರ್ತಿ ಶಂಕರಘಟ್ಟ
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಕಿರಿಕ್ ಕೀರ್ತಿ ಸ್ಟೈಲಲ್ಲಿ ಹುಚ್ಚ ವೆಂಕಟ್ ವ್ರತ..! ನೋಡಿ, ಸಖತ್ ಎಂಜಯ್ ಮಾಡಿ..! ಇದು ತಮಾಷೆಗೆ..!
ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!
ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು