ಮುಕೇಶ್ ಅಂಬಾನಿ, ಮಗಳ ಮದುವೆ ಖರ್ಚು ಮಾಡುತ್ತಿರುವುದು ಎಷ್ಟು ಕೋಟಿ ಗೊತ್ತಾ..?
ಉದ್ಯಮಿ, ಭಾರತದ ಶ್ರೀಮಂತ ಮುಕೇಶ್ ಅಂಬಾನಿ ಅವರು ತಮ್ಮ ಮುದ್ದಿನ ಮಗಳಾದ ಇಶಾ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ.. ಇಡೀ ಅಂಬಾನಿ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.. ಸಾಮಾನ್ಯ ಜನರಿಂದ ಹಿಡಿದು ದೇಶದ ಸೆಲೆಬ್ರಿಟಿಗಳು ಸೇರಿದಂತೆ ವಿದೇಶಿ ರಾಜಮನೆತನದವರು ಈ ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ..
ದಿನ ದಿನವು ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸುತ್ತ ಸಂಪ್ರದಾಯ ಬದ್ಧವಾಗಿ ಮದುವೆ ಕಾರ್ಯಕ್ರಮಗಳನ್ನ ಮಾಡುತ್ತ ಬರುತ್ತಿರುವ ಅಂಬಾನಿ ಕುಟುಂಬದವರು, ಇಂದು ಇಶಾ ಮದುವೆ ನಡೆಸಲ್ಲಿದ್ದಾರೆ..ಇನ್ನು 12ನೇ ತಾರೀಖಿನವರೆಗೂ ನಡೆಯಲಿರುವ ಈ ಅದ್ದೂರಿ ಮದುವೆ ಕಾರ್ಯಕ್ರಮಕ್ಕೆ ಮುಕೇಶ್ ಅಂಬಾನಿ ಖರ್ಚು ಮಾಡ್ತಿರೋದು ಬರೋಬ್ಬರಿ 718 ಕೋಟಿ ರೂಪಾಯಿಗಳಂತೆ.. ಹೀಗಂತ ಅಂದಾಜಿಸಲಾಗಿದ್ದು, ಖಾಸಗಿಮಾಧ್ಯಮವೊಂದು ವರದಿ ಮಾಡಿದೆ..ಅಂದಹಾಗೆ ಮಗಳ ಮದುವೆ ಸಿದ್ದ ಮಾಡಲಾಗಿದ್ದ ಆಮಂತ್ರಣದ ಪತ್ರಿಕೆಯ ಬೆಲೆ 3 ಲಕ್ಷವಾಗಿತ್ತು