ಅಂಬಿ ಅಂತಿಮ ದರ್ಶನಕ್ಕೆ ಬಾರದಿದ್ದ ಬಗ್ಗೆ ರಮ್ಯಾ ಕೊಟ್ಟ ಉತ್ತರವಿದು.. ಛೇ ರಮ್ಯಾಗೆ ಹೀಗಾಗಬಾರದಿತ್ತು..!!
ನಿನ್ನೆ ರೆಬಲ್ ಸ್ಟಾರ್ ಅಂಬರೀಶ್ ಅವರು ಪಂಚಭೂತಗಳಲ್ಲಿ ಲೀನವಾದ್ರು.. ಲಕ್ಷಾಂತರ ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ರು.. ಬಂದವರು ಬರದಿದ್ದವರ ನಡುವೆ, ನಟಿ ರಮ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು.. ಯಾಕೆ ರಮ್ಯಾ ಅಂಬಿ ಅವರ ದರ್ಶನ ಪಡೆಯಲಿಲ್ಲ ಅಂತ.. ಈ ಬಗ್ಗೆ ತೀರ್ವ ಆಕ್ರೋಶವು ವ್ಯಕ್ತವಾಗಿತ್ತು.. ಈ ನಡುವೆ ರಮ್ಯಾ ತಾನ್ಯಾಕೆ ಬರಲಿಲ್ಲ ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದಾರೆ…
ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಅಸ್ಟಿಯೋಕ್ಲ್ಯಾಟೋಮಾ ಎಂಬ ಖಾಯಿಲೆ ಕಾಡುತ್ತಿದೆ.. ಈ ಹಿನ್ನೆಲೆಯಲ್ಲಿ ಅವರು ಅಂಬಿ ಅವರ ಅಂತಿಮ ದರ್ಶನಕ್ಕೆ ಬರಲು ಸಾಧ್ಯವಾಗಿಲ್ಲ.. ಆಸ್ಟಿಯೋಕ್ಲ್ಯಾಟೋಮಾ ಎಂಬು ಮೂಳೆಗೆ ಸಂಬಂಧಿಸಿದ ಖಾಯಿಲೆಯಾಗಿದೆ.. ಆದರಿಂದ ಇದನ್ನ ಮೂಳೆ ಕ್ಯಾನ್ಸರ್ ಎನ್ನುತ್ತಾರಂತೆ.. ಹೌದು ರಮ್ಯಾಗೆ ಮೂಳೆ ಕ್ಯಾನ್ಸರ್ ಆವರಿಸಿಕೊಂಡಿದೆ..
ಇದು ಮೂರು ಸಾವಿರ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಬಲು ಅಪರೂಪದ ಖಾಯಿಲೆಯಂತೆ.. ಇದಕ್ಕೆ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯದಿದ್ರೆ ಮೂಳೆಗಳನ್ನು ತಿನ್ನುತ್ತಾ ಹೋಗುತದಂತೆ.. ಈ ಖಾಯಿಲೆಗೆ ತುತ್ತಾದವರಿಗೆ ಅಧಿಕ ಮೂಳೆ ನೋವು ಕಾಣಿಸಿಕೊಳ್ಳುತ್ತದೆ.. ಕಾಲನ್ನ ಅಲುಗಾಡಿಸಲು ಸಾಧ್ಯವಾಗೋದೆ ಇಲ್ವಂತೆ.. ಹೀಗಾಗೆ ರಮ್ಯಾ ಅಂಬಿ ಅವರ ಅಂತಿಮ ದರ್ಶನ ಪಡೆಯಲು ಬಾರದ ಪರಿಸ್ಥಿತಿಯನ್ನ ತಲುಪಿದ್ರು.. ತನ್ನ ಕಾಲಿನಿ ಸದ್ಯದ ಸ್ಥಿತಿಯ ಬಗ್ಗೆ ಫೋಟೊವನ್ನ ಕೂಡ ಅಪ್ ಲೋಡ್ ಮಾಡಿದ್ದಾರೆ..