ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಗೆ ಬಿಇಡಿ ಹಾಲ್ ಟಿಕೆಟ್ ಕೊಟ್ರಾ? ಅರೆ ಏನಪ್ಪಾ? ಬಿಗ್ ಬಿ ಈಗ ಬಿಇಡಿ ಮಾಡ್ತಿದ್ದಾರ?
ಇದು ಫೈಜಾಜಾದ್ ನ ಡಾ. ರಾಮ್ ಮನೋಹರ್ ಲೋಹಿಯಾ ಅವದ್ ವಿಶ್ವವಿದ್ಯಾಲಯ ಮಾಡಿದ ಎಡವಟ್ಟು.
ವಿ.ವಿ ವಿದ್ಯಾರ್ಥಿಯೊಬ್ಬನ ಹಾಲ್ ಟಿಕೆಟ್ ಗೆ ಅಮಿತಾಬ್ ಬಚ್ಚನ್ ಫೋಟೋ ಹಾಕಲಾಗಿದೆ…!
ಗೊಂಡಾದ ರವೀಂದ್ರ ಸಿಂಗ್ ಸ್ಮಾರಕ್ ಮಹಾವಿದ್ಯಾಲಯದ ಬಿ.ಇಡಿ ವಿದ್ಯಾರ್ಥಿಯ ಪ್ರವೇಶಪತ್ರಕ್ಕೆ ಅಮಿತಾಬ್ ಬಚ್ಚನ್ ಫೋಟೋ ಇದ್ದು, ಇದೀಗ ಮಾರ್ಕ್ಸ್ ಕಾರ್ಡ್ ನಲ್ಲೂ ವಿದ್ಯಾರ್ಥಿಯ ಫೋಟೋ ಬದಲು ಅಮಿತಾಬ್ ಬಚ್ಚನ್ ಫೋಟೋ ಬಂದರೆ ಎಂಬ ಚಿಂತೆ ಎದುರಾಗಿದೆ.
ಅಪ್ಲಿಕೇಶನ್ ಹಾಕುವಾಗ ಆದ ತಪ್ಪಿನಿಂದ ಈ ಎಡವಟ್ಟಾಗಿದ್ದು, ಇದರಿಂದ ವಿದ್ಯಾರ್ಥಿ ಪರೀಕ್ಷೆ ಬರೆಯಲು ಯಾವುದೇ ಸಮಸ್ಯೆ ಇಲ್ಲ ಸ್ಮಾರಕ್ ಮಹಾವಿದ್ಯಾಲಯದ ಮುಖ್ಯಸ್ಥ ರವೀಂದ್ರ ಸಿಂಗ್ ತಿಳಿಸಿದ್ದಾರೆ