ತಮಿಳುನಾಡಿನಲ್ಲಿ ಅಮ್ಮನ ಕರಾಮತ್ತು ನಡೆಯುವುದಿಲ್ಲ. ಈ ಬಾರಿ ಕರುಣಾನಿಧಿ ನೇತೃತ್ವದ ಡಿಎಂಕೆ ಗೆದ್ದೇ ಗೆಲ್ಲುತ್ತದೆ. ಅಷ್ಟಕ್ಕೂ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಮಾಡಿರೋದು ಸಣ್ಣಪುಟ್ಟ ಪ್ರಚಾರವನ್ನಲ್ಲ. ಅಮ್ಮ ಜಯಲಲಿತಾ ಏನೇ ಮ್ಯಾಜಿಕ್ ಮಾಡಿದರೂ ಈ ಬಾರಿ ಸೋಲುತ್ತಾಳೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಇವತ್ತಿನ ರಿಸಲ್ಟ್ ನೋಡಿದರೇ, ಅಮ್ಮ ಅಪ್ಪನನ್ನು ಮತ್ತೊಮ್ಮೆ ಸೋಲಿಸಿದ್ದಾಳೆ. ಅತ್ತ ಪಶ್ಚಿಮ ಬಂಗಾಳದಲ್ಲಿ ಯಥಾಪ್ರಕಾರ ಟಿಎಂಸಿ ಕೈ ಮೇಲಾಗಿದೆ. ಕಳೆದ ಬಾರಿ ಟಿಎಂಸಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಈ ಬಾರಿ ದೀದಿಯನ್ನು ಸೋಲಿಸಬೇಕೆಂದು ಎಡಪಕ್ಷದವರ ಜೊತೆ ಸೇರಿಕೊಂಡಿತ್ತು. ಆದರೆ ದೀದಿಯ ಚಮತ್ಕಾರದ ಮುಂದೆ ಉಳಿದವರು ಥಂಡಾ ಹೊಡೆದಿದ್ದಾರೆ. ಅತ್ತ ಉಮ್ಮನ್ ಚಾಂಡಿಗೆ ಸೋಲಾರ್ ಹಗರಣ, ವಿವಾದ, ದುರಂತಗಳೇ ಮುಳುವಾಗಿದೆ. ಕೇರಳ ಜನರು ಪೋ ಮೋನೆ ಚಾಂಡಿ ಎಂದಿದ್ದಾರೆ. ಅತ್ತ ಅಸ್ಸಾಂನಲ್ಲಿ ಕಾಂಗ್ರೆಸ್ ಪರ್ವ ಮುಗಿದಿದೆ. ಬಿಜೆಪಿ ಇತಿಹಾಸ ನಿರ್ಮಿಸಿದೆ. ಹಳೇ ಕಾಲದ ಆಡಳಿತ ಶೈಲಿಗೆ ಆತುಕೊಂಡಿರುವ ಕಾಂಗ್ರೆಸ್ ಅವನತಿ ಅಲ್ಲಿ ನಿರೀಕ್ಷಿತ. ಇನ್ನು ಪುದುಚೆರಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಫಿಕ್ ಸೋರ್ಸ್ : ಎನ್.ಡಿ.ಟಿ.ವಿ
POPULAR STORIES :
ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!
ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!
ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?
ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!
ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?
ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..