ತಮಿಳುನಾಡಿನಲ್ಲಿ ಮತ್ತೆ ಅಮ್ಮನದ್ದೇ ರಾಜ್ಯಭಾರ

Date:

ಪಂಚರಾಜ್ಯಗಳ ಚುನಾವಣೆಯ ವಿಚಾರದಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು ಮಾತ್ರ ತಮಿಳುನಾಡು ವಿಧಾನಸಭಾ ಚುನಾವಣೆ. ಎಮ್ ಜಿ ಆರ್ ನಂತರ ಅಲ್ಲಿ ಪ್ರತಿ ಬಾರಿಯು ಆಡಳಿತ ಪಕ್ಷವನ್ನು ಬದಲಾಯಿಸುತ್ತಲೇ ಬಂದಿದ್ದಾನೆ ಮತದಾರ. ಹಾಗಾಗಿ ಈ ಬಾರಿಯು ಕೂಡ ಡಿಎಮ್ ಕೆ ಗೆ ಗೆಲ್ಲೋ ತವಕವಿತ್ತು. ನಿರೀಕ್ಷೆಯೂ ತುಸು ಹೆಚ್ಚಾಗಿತ್ತು. ಆದರೆ ಈ ಕನಸೀಗ ನುಚ್ಚೂ ನೂರಾಗಿದೆ. ಜಯಲಲಿತಾ ನಿಪುಣತೆ ಮತ್ತು ಜನಪರ ಯೋಜನೆಗಳು ಮತಗಳಿಕೆಯಲ್ಲಿ  ಸಫಲವಾಗಿದೆ,

ಅಮ್ಮಾ ಬ್ರಾಂಡ್ ಮೋಡಿ ಐತಿಹಾಸಿಕ ಗೆಲುವಿಗೆ ನಾಂದಿ ಹಾಡಿದೆ. ಈ ಮೂಲಕ 32 ವರ್ಷಗಳ ದಾಖಲೆಯನ್ನು ಮುರಿಯುವ ವಾತಾವರಣ ಸೃಷ್ಚಿಯಾಗಿದೆ.  ತಮಿಳುನಾಡಿನ ಫಲಿತಾಂಶದ ಕುರಿತಂತೆ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ ಸಮೀಕ್ಷೆಗಳ ಫಲಿತಾಂಶ ಸುಳ್ಳಾಗಿದೆ. ಎರಡನೆ ಬಾರಿಗೆ ಗದ್ದುಗೆ ಏರೋ ಮೂಲಕ ಎಐಡಿಎಂಕೆ ಅಧಿನಾಯಕಿ ಜಯಲಲಿತಾ ಮುಖದಲ್ಲಿ ಮಂದಹಾಸ ಮರುಕಳಿಸಿದೆ.

ಕಡಿಮೆದರದಲ್ಲಿ ಗ್ರಾಹಕರಿಗೆ ಸೇವೆ ನೀಡೋ ಅಮ್ಮಾ ಕ್ಯಾಂಟೀನ್ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಯ್ತು,  ಮಾತ್ರವಲ್ಲ ಅಮ್ಮಾ ಬ್ರಾಂಡ್ ಗಳು ಹೊಸದೊಂದು ಟ್ರೆಂಡ್ ಸೃಷ್ಟಿ ಮಾಡಿದವು. ಬಡವರು ಮಧ್ಯಮವರ್ಗದವರನ್ನು ಅಮ್ಮಾ ಯೋಜನೆಗಳು ಸುಲಭವಾಗಿ ರೀಚ್ ಆಗೋ ಮೂಲಕ ಸಫಲತೆಯನ್ನು ಕಂಡವು.

ತಮಿಳುನಾಡಿನಲ್ಲಿರುವ ಮತದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗವಿರುವ ಮಹಿಳಾ ಮತದಾರರು ಸೆಳೆಯೋ ಸಲುವಾಗಿ ಹಲವು ಯೋಜನೆಗಳನ್ನ ರೂಪಿಸಿ ಅವುಗಳನ್ನ ಸಾಕಾರಗೊಳಿಸಿದ್ರು. ಅದ್ರಲ್ಲಿ ಆರು ಲಕ್ಷ ಮಹಿಳೆಯರಿಗೆ ನಾಲ್ಕು ಗ್ರಾಂ ಚಿನ್ನವನ್ನು ವಿತರಿಸೋ ಮೂಲಕ ಮಹಿಳೆಯರ ಮನಸ್ಸಿಗೆ ಸುಭವಾಗಿ ಲಗ್ಗೆ ಇಟ್ರು ಜಯಾ ಮೇಡಂ.

ಅಮ್ಮಾ ಬೇಬಿ ಕೇರ್ ಕಿಟ್ಸ್ ಉಡುಗೊರೆ, ಫ್ರೀ ಸ್ಯಾನಿಟರಿ ನ್ಯಾಪ್ ಕಿನ್ಸ್ ವಿತರಣೆ,  ಪ್ರತಿ ತಿಂಗಳು 20 ಕೆಜಿ ಅಕ್ಕಿ ವಿತರಣೆ, ಬಡವರಿಗೆ ಉಚಿತವಾಗಿ ಮೇಕೆ ಹಸುಗಳ ವಿತರಣೆ, ಸೈಕಲ್ ಗಳ ವಿತರಿಸಣೆ,  ಪಿಯುಸಿ ವಿದ್ಯಾರ್ಥಿಗಳಿಗಾಗಿ ಲಾಪ್ ಟಾಪ್  ಇದ್ರೊಂದಿಗೆ ಇನ್ನಷ್ಟು ಜನಸ್ನೇಹಿ ಸೇವೆಗಳನ್ನು ಜಯಲಲಿತಾ ನೀಡಿದ್ದು ಜನಪ್ರಿಯತೆ ಹೆಚ್ಚಿಸಲು ಕಾರಣವಾಯ್ತು.

ಹೀಗೆ ಹತ್ತು ಹಲವು ಜನಪರ ಯೋಜನೆಗಳ ಮೂಲಕ ಜನಪ್ರಿಯತೆ ಪಡೆದ ಜಯಲಲಿತಾ ಮೇಲಿನ ಆರೋಪಗಳು, ಪ್ರಕರಣಗಳು ಮತದಾರರಿಗೆ ನೆನಪಾಗಲೇ ಇಲ್ಲ. ಬಹುತೇಕ ಡಿಎಂ ಕೆ ಪರವಿದ್ದ ಚುನಾವಣಾ ಪೂರ್ವ ಸಮೀಕ್ಷೆಗಳು ಮತದಾರರಿಗೆ ಮುಖ್ಯವಾಗಲೇ ಇಲ್ಲ.

  • ಶ್ರೀ

POPULAR  STORIES :

ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?

ಸಚಿನ್ ಗಾಡ್.. ಕೊಹ್ಲಿ ಡೆವಿಲ್..!

ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!

ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!

ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?

ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...