ಹೊಸಬರು ‘ಅಂದುಕೊಂಡಂತೆ’ ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಂದ ಫಸ್ಟ್ ಲುಕ್ ಬಿಡುಗಡೆ ಮಾಡಿಸಿದ್ದಾರೆ. ಯಾರು ಆ ಹೊಸಬರು ಅಂದ್ರಾ? ಅದೇ ‘ಅಂದುಕೊಂಡಂತೆ’ ಸಿನಿಮಾ ತಂಡ!
ಹೌದು ಶಿವರಾಜ್ಕುಮಾರ್ ‘ಅಂದುಕೊಂಡಂತೆ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಪ್ರಮೋದ್ ಬೋಪಣ್ಣ ನಾಯಕ ನಟರಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ರಿಷಿ ಭಟ್ ನಾಯಕಿ. ಇನ್ನುಳಿದಂತೆ ಲೋಕೇಶ್, ಲೋಹಿತ್ ಗೌಡ, ಕಿರಣ್, ವಿನಯ್ ರಾಜ್ ಕೂಡ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ರುತ್ ರಾಜ್,ಎಂ ಡಿ ಕೌಶಿಕ್, ಉಗ್ರಂ ರೆಡ್ಡಿ, ಗಿರೀಶ್ ಜತ್ತಿ, ರಾಜು ಹೆಮ್ಗೆಪುರ, ಡಾಡನ್ ಬಾಬು ಮೊದಲಾದದವರು ತಾರಾಗಣದಲ್ಲಿದ್ದಾರೆ. ಯುವ ನಿರ್ದೇಶಕ ಶ್ರೇಯಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಅವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ. ಅಲ್ಲದೆ ಶ್ರೇಯಸ್ ಮತ್ತು ರಮೇಶ್ ಕೊಯಿರಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಅನಂತ ಕಾಮತ್ ಸಂಗೀತ, ರಮೇಶ್ ಕೊಯಿರ ಛಾಯಾಗ್ರಹಣ ಬಲವಿದೆ. ಕಿರಣ್ ಕುಮಾರ್ ಜಿ ಸಂಕಲನದ ಹೊಣೆ ನಿಭಾಯಿಸುತ್ತಿದ್ದು, ಚೇತನ್ ಅನಿಕೇತ್ ಸಾಹಿತ್ಯವಿದೆ. ‘ಅಂದುಕೊಂಡಂತೆ’ ಟೀಮ್ಗೆ ‘ಅಂದುಕೊಂಡಂದ್ದಕ್ಕಿಂತ ಹೆಚ್ಚಿನ ಯಶಸ್ಸು ಸಿಗಲಿ.