ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಅಂಜನಿಪುತ್ರ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.
ಸಿನಿಮಾದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದೆ ಎಂದು ವಕೀಲ ಜಿ. ನಾರಾಯಣಸ್ವಾಮಿ ಅವರು ನಿರ್ದೇಶಕ ಎ. ಹರ್ಷ, ನಿರ್ಮಾಪಕ ಎಂ.ಎನ್ ಕುಮಾರ್, ಸೆನ್ಸಾರ್ ಬೋರ್ಡ್, ಫಿಲಂ ಚೇಂಬರ್ ವಿರುದ್ಧ ದೂರು ನೀಡಿದ್ದರು.
ಇಂದು ಈ ದೂರು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜನವರಿ 2ಕ್ಕೆ ವಿಚಾರಣೆ ಮುಂದೂಡಿದ್ದು, ಅಲ್ಲಿಯವರೆಗೆ ಸಿನಿಮಾ ಪ್ರದರ್ಶನ ಮಾಡದಂತೆ ಆದೇಶಿಸಿದೆ.
ಚಿತ್ರದಲ್ಲಿ ಇನ್ಸ್‍ಪೆಕ್ಟರ್ ರವಿಶಂಕರ್ ‘ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್‍ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ’ ಎಂದು ವಕೀಲರಿಗೆ ಹೇಳೋ ದೃಶ್ಯವಿದೆ. ಇದರಿಂದ ವಕೀಲರಿಗೆ ಅವಮಾನವಾಗಿದೆ ಎಂದು ಜಿ. ನಾರಾಯಣ ಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದಾರೆ.