ದಿ ಕಪಿಲ್ ಶರ್ಮಾ ಶೋ.. ವಿಶ್ವದಾದ್ಯಂತ ಅತೀ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿರೋ ಭಾರತದ ನಂ.1 ಶೋ. ಸೆಲೆಬ್ರೆಟಿಗಳನ್ನ ಕರೆತಂದು ಅವರ ಜೊತೆ ಸಖತ್ ಎಂಟಟೈಮೆಂಟ್ ನೀಡ್ತಾ ಇರೋ ಈ ರಿಯಾಲಿಟಿ ಶೋಗೆ ಇದೀಗ ಭಾರತದ ಅಪ್ರತಿಮ ಹೋರಾಟಗಾರರೊಬ್ಬರು ಈ ವಾರದ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ..
ಹೌದು.. ದೇಶ ಸೇವೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿರುವ 70ರ ಹರೆಯದ ರಿಯಲ್ ಮ್ಯಾನ್ ಅಣ್ಣಾ ಹಜಾರೆ ಅವರು ಈ ವಾರದ ದಿ ಕಪಿಲ್ ಶರ್ಮಾ ಶೋನ ಅಥಿತಿ.. ಅರೆ ನೀವೇನೋ ಸುಳ್ಳು ಮಾಹಿತಿ ನೀಡ್ತಾ ಇದೀರ ಯಾವುದೇ ಟೆಲಿವಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸದ ಅವರು ಈ ರಿಯಾಲಿಟಿ ಶೋಗೆ ಹೇಗೆ ಎಂಬ ಪ್ರಶ್ನೆಗೆ ಉತ್ತರ… ‘ಹೌದು’…
ಸಮಾಜ ಸೇವೆ ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನ, ಅನುಯಾಯಿಗಳನ್ನ ಹೊಂದಿರುವ ಅಣ್ಣಾ ಹಜಾರೆ ಅವರು ದೇಶದ ಪ್ರಖ್ಯಾತ ರಿಯಾಲಿಟಿ ಶೊನಲ್ಲಿ ಕಾಣಿಸಿಕೊಳ್ಳಲಿರುವ ಮುಖ್ಯ ಉದ್ದೇಶವೇ ಅಣ್ಣಾ ಹಜಾರೆ ಅವರ ಜೀವನ ಚರಿತ್ರೆಯನ್ನಾಧರಿಸಿದ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋಕೆ..
ಹೌದು.. ಇಂದೆಂದೂ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಭಾಗವಹಿದ ಈ ಮಹಾನ್ ವ್ಯಕ್ತಿ ತಮ್ಮ ಆತ್ಮ ಚರಿತ ಕುರಿತಾದ ಚಿತ್ರ “ಅಣ್ಣಾ ಕಿಸಾನ್ ಬಾಬುರಾವ್ ಹಜಾರೆ” ಸಿನಿಮಾ ಟ್ರೆಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಟ್ರೇಲರ್ ಬಿಡುಗಡೆಯನ್ನು ದಿ ಕಪಿಲ್ ಶರ್ಮಾ ಶೋನಲ್ಲಿ ನಡೆಸಲಾಗುತ್ತಿದೆ.
ಮಾಧ್ಯಮಗಳ ವರದಿಗಳ ಪ್ರಕಾರ ಅಣ್ಣ ಹಜಾರೆ ಅವರು ಈ ಶೋನಲ್ಲಿ ಕಾಣಿಸಿಕೊಳ್ಳಲಿರುವ ಮುಖ್ಯ ಉದ್ದೇಶವೇ ಸಿನಿಮಾದ ಪ್ರಚಾರತೆಗಾಗಿ ಮತ್ತು ಟ್ರೇಲರ್ ಬಿಡುಗಡೆಗಾಗಿ ಎಂದು ಹೇಳಲಾಗ್ತಾ ಇದೆ.
ಅಣ್ಣಾ ಹಜಾರೆ ಅವರ ಆಪ್ತ ಅನುಯಾಯಿಯಾಗಿರುವ ಶಶಾಂಕ್ ಉದರ್‍ಪುಕರ್ ನಿರ್ದೇಶನದ ಈ ಚಿತ್ರಕ್ಕೆ ಸ್ವತಃ ಶಶಾಂಕ್ ಅವರೆ ಚಿತ್ರಕಥೆ ಬರೆದಿದ್ದಾರೆ. ಇನ್ನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಆಕ್ಟರ್‍ಗಳಾದ ತನಿಶಾ ಮುಖರ್ಜಿ ಹಾಗೂ ರಜಿತ್ ಕಪೂರ್ ಅವರು ಅಭಿನಯಿಸಿದ್ದಾರೆ.
ಇನ್ನು ತಮ್ಮ ಜೀವನ ಚರಿತ್ರೆಯ ಕುರಿತು ನವಿನವಿರಾಗಿ ಎಳೆದಿರುವ ನಿರ್ದೇಶಕ/ನಟರಾದ ಶಶಾಂಕ್ ಅವರಿಗೆ ಅಣ್ಣಾ ಹಜಾರೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸಿನಿಮಾದ ಮೂಲಕ ಅಣ್ಣಾ ಒಬ್ಬರು ಅಪ್ರತಿಮ ವೀರ ಯೋಧ ಹಾಗೂ ರೈತ ಎಂಬುದನ್ನು ಎಲ್ಲರಿಗೂ ತಿಳಿಯುತ್ತದೆ ಎಂಬುದು ನಿರ್ದೇಶಕರ ಅಭಿಪ್ರಾಯ.
Like us on Facebook The New India Times
POPULAR STORIES :
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?