ಬೆಂಗಳೂರಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ.
ಜೆ.ಸಿ ನಗರದ ನಂದಿದುರ್ಗಾ ರಸ್ತೆಯ ಚಿನ್ನಪ್ಪ ಗಾರ್ಡನ್ ಬಳಿ ಘಟನೆ ನಡೆದಿದ್ದು, ಜೆ.ಸಿ ನಗರ ನಿವಾಸಿ ಸಂತೋಷ್ (28) ಕೊಲೆಯಾದ ಯುವಕ.
ಆಟೋಚಾಲಕನಾಗಿದ್ದುಕೊಂಡು ಬಿಜೆಪಿ ಪರ ಓಡಾಡುತ್ತಿದ್ದ ಸಂತೋಷ್ ಅವರನ್ನು ನಾಲ್ವರು ದುಷ್ಕರ್ಮಿಗಳು ಸೇರಿ ಬುಧವಾರ ರಾತ್ರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಸಂತೋಷ್ ತಮ್ಮ ಮನೆ ಬಳಿ ಇದ್ದ ಬೇಕರಿಯಲ್ಲಿ ಟೀ ಕುಡಿಯುತ್ತಿದ್ದರು. ಅಲ್ಲಿಯೇ ಟೀ ಕುಡಿಯುತ್ತಿದ್ದ ವಾಸಿಂ, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಸಂತೋಷ್ ಜೊತೆ ಜಗಳ ನಡೆಸಿದ್ದಾರೆ. ಬಳಿಕ ವಿಕೋಪಕ್ಕೆ ತಿರುಗಿ ಚಾಕು ಇರಿದಿದ್ದಾರೆ.
ಆರೋಪಿಗಳಿಗೆ ಸಂತೋಷ್ ನಮ್ಮ ನಮ್ಮ ಏರಿಯಾದಲ್ಲಿ ಗಾಂಜಾ ಸೇದ್ಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ದ್ವೇಷ ಬೆಳೆಸಿ ಸಂತೋಷ ಅವರನ್ನು ಕೊಲೆಮಾಡಲಾಗಿದೆ ಎನ್ನಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಸಿ ನಗರ ಪೊಲೀಸರು ವಸೀಂ, ಫಿಲಿಪ್ಸ್ ಎಂಬಿಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.